ಗದಗ

17ರಿಂದ ಅತಿಥಿ ಉಪನ್ಯಾಸಕರ ಧರಣಿ

Published On :

ಗದಗ: ಸೇವಾ ಭದ್ರತೆ ಹಾಗೂ ಕಾಯಂಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ತರಗತಿಗಳನ್ನು ಬಹಿಷ್ಕರಿಸಿ ಜ. 17ರಿಂದ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಅತಿಥಿ ಉಪನ್ಯಾಸಕರ ಒಕ್ಕೂಟದ ಜಿಲ್ಲಾಧ್ಯಕ್ಷ ಹನುಮಂತಗೌಡ ಕಲ್ಮನಿ ಹೇಳಿದರು.
ಅವರು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅತಿಥಿ ಉಪನ್ಯಾಸಕರಿಗೆ ನಮ್ಮ ರಾಜ್ಯದಲ್ಲಿ ಪ್ರತಿ ತಿಂಗಳು ಗೌರವ ವೇತನವಾಗಿ ರು. 8 ಸಾವಿರ ನೀಡುತ್ತಿದ್ದಾರೆ. ಕಳೆದ 4 ತಿಂಗಳಿಂದ ಆ ಹಣವೂ ಸಂದಾಯವಾಗಿಲ್ಲ. ಇನ್ನು ತ್ರಿಪುರಾ, ಆಂಧ್ರಪ್ರದೇಶ, ಕೇರಳ, ಪಂಜಾಬ, ಗುಜರಾತ್ಗಳಲ್ಲಿ ರು. 25 ಸಾವಿರ ಗೌರವ ವೇತನ ನೀಡುತ್ತಿದ್ದು, ಆ ಮಾದರಿಯಲ್ಲಿಯೇ ಕರ್ನಾಟಕದಲ್ಲಿಯೂ ವೇತನ ನೀಡಬೇಕು.
ಪ್ರತಿ ವರ್ಷವೂ ಶೈಕ್ಷಣಿಕ ವರ್ಷದ ಆರಂಭದಿಂದಲೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅನುಮೋದನೆ ನೀಡಿ, 12 ತಿಂಗಳ ವೇತನ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ವಯೋವುತಿ ಮೀರುತ್ತಿರುವ ಸೇವಾ ಜ್ಯೇಷ್ಠತೆ ಹೊಂದಿರುವ ಅತಿಥಿ ಉಪನ್ಯಾಸಕರನ್ನು ಯುಜಿಸಿ ನಿಮಯಮಾನುಸಾರ ಪದವಿ ಕಾಲೇಜುಗಳಲ್ಲಿ ಸೇವಾ ಸಕ್ರಮಾತಿಗೊಳಿಸಬೇಕು, ಪ್ರತಿ ವರ್ಷಕ್ಕೊಮ್ಮೆ ಸಂದರ್ಶನ ನಡೆಸುವ ಮೂಲಕ ನವೀಕರಣ ಮಾಡುವ ಪದ್ಧತಿಯನ್ನು ಕೈ ಬಿಟ್ಟು ಸೇವಾ ಭದ್ರತೆ ಹಾಗೂ ಕಾಯಂ ಮಾಡಬೇಕು ಎಂದು ಈಗಾಗಲೇ ಬೃಹತ್ ಪಾದಯಾತ್ರೆ ನಡೆಸಿ, ಸಿಎಂ ಹಾಗೂ ಇಲಾಖೆ ಸಚಿವರಿಗೆ ಮನವಿ ಮಾಡಲಾಗಿತ್ತು. ಆದರೆ, ಬೇಡಿಕೆಗಳಿಗೆ ಸ್ಪಂದನೆ ಇಲ್ಲದ ಕಾರಣ ಅನಿವಾರ್ಯವಾಗಿ ಹೋರಾಟಕ್ಕೆ ನಿರ್ಧರಿಸಲಾಗಿದ್ದು, ಕರವೇ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು. ಜಿಲ್ಲಾ ಕರವೇ ಅಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ, ಸೋಮು ಲಮಾಣಿ, ಸತೀಶ ಸರ್ವಿ, ಎಸ್.ವಿ. ಕಿನ್ನಾಳ, ಎನ್.ಬಿ. ಕದಾಂಪುರ, ಪದ್ಮಾ ತಳಕಲ್ಲ, ಬಿ.ಎಸ್. ಪರ್ವಣ್ಣವರ, ಜಿ.ಬಿ. ದೊಡ್ಡೂರ, ಕೃಷ್ಣಾ ಯೋಗೇಶ್, ಕೆ.ಎಂ. ಶಿರೂರ, ಎಸ್.ಎಸ್. ಹುಲ್ಲೂರ ಮುಂತಾದವರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.