ಗದಗ

ಇಂದು ಪೂರ್ವಭಾವಿ ಸಭೆ

Published On :

ಗದಗ: ಪ್ರವಾದಿ ಹಜರತ್ ಮೊಹ್ಮದ (ಸ್ವಲ್ಲಲ್ಲಾಹು ಅಲೈಹಿ ವ ಸ್ವಲಂ) ರವರ ಜನ್ಮದಿನಾಚರಣೆ ಅಂಗವಾಗಿ ಜ. 5ರ ಬೆಳಗ್ಗೆ 11 ಗಂಟೆಗೆ ನಗರದ ಮುಳಗುಂದ ನಾಕಾದ ದುರ್ಗಾವಿಹಾರ ಎದುರಿನ ಶಾಸ್ತ್ರೀ ಮಳಿಗೆಯಲ್ಲಿರುವ ಕಮಿಟಿಯ ಅಧ್ಯಕ್ಷ ನಬಾಬ ಮೇಸ್ತ್ರಿಯವರ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಸಾಧಿಕ ನರಗುಂದ ವಹಿಸುವರು. ಗೌರವಾಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಉಪಾಧ್ಯಕ್ಷ ಅಬುಬಕ್ಕರ್ ಅಣ್ಣಿಗೇರಿ ಹಾಗೂ ಪದಾಧಿಕಾರಿಗಳಾದ ಜಿ.ಎಂ. ದಂಡಿನ, ಸಮೀರ ನಾಗರಕಟ್ಟಿ, ಕಾಶೀಂಸಾಬ್ ಕಿಲ್ಲೆದಾರ, ಬಾಬಾಜಾನ್ ಬಳಗಾನೂರ, ಯುಸೂಫಸಾಬ್ ನಮಾಜಿ, ಮುನ್ನಾ ರೇಶ್ಮಿ, ಖಾದರಸಾಬ್ ಬನ್ನೂರ, ಅಸೀಫ ಮುಲ್ಲಾ, ರಾಜಾಖಾನ್ ಪಠಾಣ  ಮುಂತಾದವರು ಪಾಲ್ಗೊಳ್ಳುವರು. ಈ ಸಭೆಗೆ ಗದಗ-ಬೆಟಗೇರಿಯ ಪ್ರಮುಖರು ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ಈದ್ ಮಿಲಾದ್ ಕಮಿಟಿಯ ಅಧ್ಯಕ್ಷ ನವಾಬ ಮೇಸ್ತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ನಿಸ್ಸಾರಅಹ್ಮದ ಖಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅನ್ನದಾನ ಶಿವಯೋಗಿಗಳ 101ನೇ ಪುಣ್ಯಸ್ಮರಣೋತ್ಸವ

ನರೇಗಲ್ಲ: ಸಮೀಪದ ಹಾಲಕೆರೆಯ ಸಂಸ್ಥಾನ ಮಠದಲ್ಲಿ ಲಿಂ. ಅನ್ನದಾನ ಮಹಾಶಿವಯೋಗಿಗಳವರ ಮಠದ ಪೀಠಾಧ್ಯಕ್ಷ ಅಭಿನವ ಅನ್ನದಾನ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಲಿಂ. ಅನ್ನದಾನ ಶಿವಯೋಗಿಗಳವರ 101ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಅನ್ನದಾನ ಶ್ರೀಗಳು ಉದ್ಘಾಟಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.