ಕಾಟಾಚಾರಕ್ಕಾಗಿ ಜನಸ್ಪಂದನ ಕಾರ್ಯಕ್ರಮ ಮಾಡಬೇಡಿ: ಹಾವಿನಾಳ
ಮುಂಡರಗಿ: ಈ ಹಿಂದೆ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಹೇಳಿದ ಸಮಸ್ಯಗಳ ಕುರಿತು ಸಂಬಂಧಪಟ್ಟವರಿಗೆ ಪತ್ರ ಬರೆದು ಸಮಸ್ಯೆಗಳ ಕುರಿತು ವಿವರಣೆ ನೀಡುತ್ತಿದ್ದರು. ಆದರೆ ಈ ಹಿಂದಿನ ಕೊರ್ಲಹಳ್ಳಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿತ್ತು. ಇಂದು ಮತ್ತೊಂದು ಸಭೆ ನಡೆಯುತ್ತಿದ್ದರೂ ಇದುವರೆಗೂ ಅಲ್ಲಿನ ಚರ್ಚಿತ ವಿಷಯದ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಕೇವಲ ಕಾಟಾಚಾರಕ್ಕಾಗಿ ಜನಸ್ಪಂದನ ಕಾರ್ಯಕ್ರಮವನ್ನು ಮಾಡಬೇಡಿ ಎಂದು ಹಮ್ಮಿಗಿ ಕ್ಷೇತ್ರದ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಹೇಳಿದರು.
ಅವರು ಶನಿವಾರ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಕಂದಾಯ ಇಲಾಖೆ ಏರ್ಪಡಿಸಿದ್ದ ತಾಲೂಕು ನೋಡೆಲ್ ಅಧಿಕಾರಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ ಜನಸ್ಪಂದನ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯವರು ಆಯಾ ಗ್ರಾಮ ಪಂಚಾಯ್ತಿ ಮಟ್ಟದಲ್ಲಿನ ಮರಳಿನ ಹಣವನ್ನು ಆಯಾ ಭಾಗದ ಗ್ರಾಮ ಪಂಚಾಯ್ತಿಗೆ ಜಮಾ ಮಾಡುವಂತೆ, ಕೊರ್ಲಹಳ್ಳಿ, ಸಿಂಗಟಾಲೂರು ರಸ್ತೆಯಲ್ಲಿ ಅಲ್ಲಲ್ಲಿ ಸಾಕಷ್ಟು ತಗ್ಗುದಿಣ್ಣೆಗಳಿದ್ದು, ಅವುಗಳಿಗೆ ಮಣ್ಣು ಹಾಕಿಸಲು ಸೂಚಿಸಲಾಗಿತ್ತು. ಇದುವರೆಗೂ ಸಂಬಂಧಪಟ್ಟ ಇಲಾಖೆಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಸಭೆಗೆ ತಾಲೂಕಿನ ಎಲ್ಲ ಅಧಿಕಾರಿಗಳು ಬಂದರೆ ಅಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಅಧಿಕಾರಿಗಳು ಸಭೆಗೆ ಬರದೇ ಇರುವುದರಿಂದ ಸಭೆ ನಡೆಸಿಯೂ ಪ್ರಯೋಜನವಿಲ್ಲದಂತಾಗುತ್ತದೆ. ಆದ್ದರಿಂದ ಸಭೆಗೆ ಗೈರಾದ ಎಲ್ಲ ಅಧಿಕಾರಿಗಳಿಗೂ ಖಡ್ಡಾಯವಾಗಿ ನೋಟಿಸ್ ಜಾರಿ ಮಾಡಬೇಕೆಂದು ತಹಸೀಲ್ದಾರ್ಗೆ ತಿಳಿಸಿದರು. ಗ್ರಾಪಂ ಅಧ್ಯಕ್ಷ ಅಕ್ಕಮಹಾದೇವಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಹೆಸ್ಕಾಂ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತೋಟಗಾರಿಕೆ, ಕಂದಾಯ ಇಲಾಖೆಯ ಎಸ್.ಎಸ್. ಬಿಚ್ಚಾಲಿ, ಪಿಡಿಒ ವೈ.ಎಚ್. ಕಳ್ಳಿಗುಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರಾದ ಶಂಕರಗುರು ಬಿಳಿಮಗ್ಗದ, ಸಣ್ಣಈರಪ್ಪ ಮುಂಡವಾಡ, ಹನುಮಂತಪ್ಪ ಕಾತರಕಿ ಹಾಗೂ ಕೊಟ್ರಗೌಡ ಪಾಟೀಲ, ವಿ.ಬಿ. ಶೆಟ್ಟರ್, ಹನಮಂತಪ್ಪ ಚೌಟ್ನವರ, ಕೊಟ್ರೇಶಪ್ಪ ಸೋವೇನಹಳ್ಳಿ, ನಿಂಗಪ್ಪ ಹೊನ್ನಾಯಕನಹಳ್ಳಿ, ಸಾರೆಪ್ಪ ಪೂಜಾರ, ಸುಭಾಶ್ಚಂದ್ರ ಕೋಟೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪಾದಯಾತ್ರೆ
ನರೇಗಲ್ಲ: 2014ರ ಮಾರ್ಚ್ನಲ್ಲಿ ಜರುಗುವ ಅನ್ನದಾನ ಶ್ರೀಗಳ ಪುಣ್ಯಾರಾಧನೆ ಶತಮಾನೋತ್ಸವ ಹಾಗೂ ಜ. 6ರಿಂದ ಪ್ರಾರಂಭವಾಗುವ 101 ಚಕ್ಕಡಿ ಉಳವಿ ಯಾತ್ರೆ ಮತ್ತು ವಿದ್ಯಾರ್ಥಿಗಳ 2014ರ ವಾರ್ಷಿಕ ಪರೀಕ್ಷೆಯ ಅಭೂತಪೂರ್ವ ಯಶಸ್ಸಿಗೆ ಅನ್ನದಾನೀಶ್ವರರಲ್ಲಿ ಪ್ರಾರ್ಥಿಸುವ ಸಲುವಾಗಿ ನರೇಗಲ್ಲ ಪಟ್ಟಣದಲ್ಲಿರುವ ಅನ್ನದಾನೀಶ್ವರ ಪಪೂ ಮಹಾವಿದ್ಯಾಲಯದ ಪ್ರಥಮ ಪಿಯು ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳು, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ನರೇಗಲ್ಲನ ಕಾಲೇಜಿನಿಂದ ಹಾಲಕೇರಿ ಅನ್ನದಾನೀಶ್ವರ ಮಠಕ್ಕೆ ಶುಕ್ರವಾರ ಪಾದಯಾತ್ರೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

