ಗದಗ

ಕ್ರಿಕೆಟ್ ಪಂದ್ಯ ಆಯೋಜನೆ: ಶ್ಲಾಘನೀಯ

Published On :

ಗದಗ:  ನೌಕರರು ಕೆಲಸದ ಒತ್ತಡದ ನಡುವೆಯೂ ಕ್ರೀಡಾಸ್ಫೂರ್ತಿಯೊಂದಿಗೆ ಗಣರಾಜ್ಯೋತ್ಸವದ ಅಂಗವಾಗಿ ಕ್ರಿಕೆಟ್ ಆಯೋಜಿಸಿರುವುದು ಪ್ರಶಂಸನೀಯ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಎಸ್.ಎಸ್. ಮುರಗೋಡ ಹೇಳಿದರು. ಅವರು ಶುಕ್ರವಾರ ಸಂಜೆ ನಗರದ ಜಿಲ್ಲಾ ಸರ್ಕಾರಿ ನೌಕರರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕ್ರಿಕೆಟ್ ಟೂರ್ನಾಮೆಂಟ್-2014ನೇ ಕಾರ್ಯಕ್ರಮದ ಉದ್ಘಾಟನೆ, ಟ್ರೋಪಿ ಬಿಡುಗಡೆ ಹಾಗೂ ಸಮವಸ್ತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಗ, ಕಾರ್ಯದರ್ಶಿ ರವಿ ಗುಂಜೀಕರ, ಬಿ.ಎಸ್.ಎನ್.ಎಲ್. ವಿಭಾಗೀಯ ಅಭಿಯಂತರ ವಿ.ಎಂ. ಕನಕೇರಿ, ಹೆಸ್ಕಾಂನ ಸಿ.ಎಚ್. ಬಾಗಲಕೋಟೆ, ನಗರಸಭೆ ಸದಸ್ಯ ಅನಿಲ ಸಿಂಗಟಾಲಕೇರಿ ಇದ್ದರು. ಎಸ್.ಡಿ. ಕುಲಕರ್ಣಿ ಪ್ರಾರ್ಥಿಸಿದರು. ವೈ.ಕೆ. ಚೌಡಾಪುರ ಸ್ವಾಗತಿಸಿದರು. ಜೆ.ಎಂ. ಜೋಶಿ ನಿರೂಪಿಸಿದರು. ಬಿಜಾಪುರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.