ಗದಗ

ಮೋದಿ ಪ್ರಧಾನಿಯಾಗಿಸಲು ಶ್ರಮಿಸಿ: ಕರಿಗೌಡ್ರ

Published On :

ಗದಗ: 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಜನ ಭ್ರಮನಿರಸನಗೊಂಡಿದ್ದು, ಯುವ ಜನತೆ ಅಭಿವೃದ್ಧಿ ಹರಿಕಾರ ನರೇಂದ್ರ ಮೋದಿಯವರತ್ತ ಮುಖ ಮಾಡಿದೆ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಎಂ.ಎಸ್. ಕರಿಗೌಡ್ರ ಹೇಳಿದರು. ಅವರು ಶನಿವಾರ ನಗರದ ಶಾಸಕ ಶ್ರೀಶೈಲಪ್ಪ ಬಿದರೂರ ಅವರ ನಿವಾಸದಲ್ಲಿ ಜರುಗಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮಾಸಿಕ ಸಭೆಯಲ್ಲಿ ಮಾತನಾಡಿದರು. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದಾಗಿ ಬೆಲೆ ಏರಿಕೆ ಉಂಟಾಗಿದ್ದು, ಸಾಮಾನ್ಯ ಜನರು ದೇಶದಲ್ಲಿ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ವಿಷಾದಿಸಿದರು.  ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಛಗನ ರಾಜಪುರೋಹಿತ ಮಾತನಾಡಿದರು. ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಿಂಗನಗೌಡ ಹರ್ತಿ, ಜಿಲ್ಲಾ ಉಪಾಧ್ಯಕ್ಷ ವಿನಾಯಕ ಹಬೀಬ, ಗಂಗಾಧರ ಹಬೀಬ, ಶೇಖರ ಕಿರೇಸೂರ, ಸುಭಾಸ ಸುಂಕದ, ಜಗದೀಶ ಬ್ಯಾಡಗಿ, ಜಿಲ್ಲಾ ಕಾರ್ಯದರ್ಶಿ ನಂದೀಶ ಮಠದ, ಎಚ್.ಎಲ್. ಬಾಲರೆಡ್ಡಿ, ಗದಗ ಶಹರ ಅಧ್ಯಕ್ಷ ಸುಧೀರ ಕಾಟಿಗರ, ಸಿದ್ಧರಾಮೇಶ ಹಿರೇಮಠ, ವೈ.ಡಿ. ಪಾಟೀಲ, ಸಿದ್ಧು ಬಂಡಿವಾಡ, ಶರಣಪ್ಪ ಕಾದರ, ಕಲ್ಲಪ್ಪ ಬಣವಿ, ಅಜಯ ಮುನವಳ್ಳಿ, ಪ್ರೀತಾ ಹಿರೇಮಠ, ಸುರೇಶ ಚಿತ್ತರಗಿ, ಶರಣು ಮುಧೋಳ, ಪವನ ಬಾಕಳೆ, ಮಹೇಶ ಶಿರಹಟ್ಟಿ, ದತ್ತು ಬೆಳಧಡಿ, ವಿಜಯಕುಮಾರ ಹಿರೇಮಠ, ಕಿರಣ ಕಲಾಲ ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.