ಸಾಹಿತ್ಯದ ಮುಖ್ಯ ಲಕ್ಷಣ ಬದುಕು ರೂಪಿಸುವುದು
ಲಕ್ಷ್ಮೇಶ್ವರ: ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳಲ್ಲಿ ಹಾಗೂ ಸಾಹಿತ್ಯದ ಕೃತಿಗಳಲ್ಲಿ ಜೀವನವನ್ನು ಪ್ರೀತಿಸುವ ಹಾಗೂ ಸಮಾಜವನ್ನು ಪ್ರೀತಿಸುವ ಸ್ಥಾಯಿ ಭಾವ ಮುಖ್ಯವಾಗಿ ಕಂಡು ಬರುತ್ತಿದೆ ಎಂದು ಸಂಶೋಧಕ, ಚಿಂತಕ ಹಾಗೂ ವಿಮರ್ಶಕ ಡಾ. ಎಂ.ಎಂ.ಕಲಬುರ್ಗಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸ್ಕೂಲ್ ಚೆಂದನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪನವರಿಗೆ ಗಾನನುಡಿ ನಮನ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವರುದ್ರಪ್ಪನವರು ಸ್ವಾಭಿಮಾನಕ್ಕೆ ಎಂದೂ ಧಕ್ಕೆ ತಂದುಕೊಂಡವರಲ್ಲ. ತಲೆ ತೆಗ್ಗಿಸುವುದು ಅವರ ಜಾಯಮಾನವಲ್ಲ, ಮೇಲ್ನೋಟಕ್ಕೆ ಮೃದುವಾಗಿ ಕಾಣುತ್ತಿದ್ದರೂ ಕೆಲವೊಂದು ನಿರ್ಧಾರಗಳಿಗೆ ಕಠೋರವಾಗಿ ವರ್ತಿಸುವ ಗುಣ ಅವರಲ್ಲಿತ್ತು. ಜಿ.ಎಸ್.ಎಸ್. ಅವರ ಕವಿತೆಗಳಲ್ಲಿ ಜೀವನ ಪ್ರೀತಿಯೇ ಮೂಲ ಧಾತುವಾಗಿತ್ತು. ಕವಿಗೆ ಸಕಾರಾತ್ಮಕ ಧೋರಣೆ ಇರಬೇಕು ಎನ್ನುವ ನಿಲುವನ್ನು ಜಿ.ಎಸ್.ಎಸ್. ಹೊಂದಿದ್ದರು. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯು ನಗರ ಕೇಂದ್ರೀಕೃತವಾಗುತ್ತಿರುವುದು ನೋವಿನ ಸಂಗತಿ. ನಗರಗಳಲ್ಲಿ ಶೈಕ್ಷಣಿಕ ಒತ್ತಡ ಜಾಸ್ತಿಯಾಗುತ್ತಿದೆ. ಇದು ಖಂಡಿತವಾಗಿಯೂ ಉತ್ತಮ ಬೆಳವಣಿಗೆಯ ಲಕ್ಷಣವಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯು ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿಕೊಂಡು ಬೆಳೆದಾಗ ಮಾತ್ರ ದೇಶಕ್ಕೆ ಉತ್ತಮ ಭವಿಷ್ಯವಿದೆ. ಅಂತಹ ಕಾರ್ಯವನ್ನು ಸ್ಕೂಲ್ ಚೆಂದನ ಮಾಡಿರುವುದು ಶ್ಲಾಘನೀಯ ಎಂದರು. ಬಂಡಾಯ ಸಾಹಿತಿ ಮೋಹನ ನಾಗಮ್ಮನವರ, ಗದಗ ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟೆ, ಡಾ. ಮಹೇಶ ನಾಲವಾಡ, ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ, ಪ್ರೊ.ಸಿ.ವಿ.ಕೆರಿಮನಿ, ಡಾ. ಹುದ್ದಾರ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ಡಾ. ಮಾರುತಿ ಶಿಡ್ಲಾಪುರ, ಡಾ. ಬನ್ನಿಗೋಳ ಹಾಗೂ ಸಂಸ್ಥೆಯ ಅಧ್ಯಕ್ಷ ಟಿ. ಈಶ್ವರ ಮಾತನಾಡಿದರು. ಆಕಾಶ ಶೆಟ್ಟಿ ಸ್ವಾಗತಿಸಿದರು. ವಿಕ್ರಂ ಗುಡಿಕಟ್ಟಿ ಹಾಗೂ ಅರ್ಪಿತಾ ಯರಗುಪ್ಪಿ ನಿರೂಪಿಸಿದರು. ಚೈತ್ರಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

