ಗದಗ

ಇಂದಿನಿಂದ ಬೃಹತ್ ಜನಜಾಗೃತಿ ಜಾಥಾ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 5
ಅನ್ನದಾನ ಶಿವಯೋಗಿಗಳ ಪುಣ್ಯಾರಾಧನೆಯ ಶತಮಾನೋತ್ಸವ ಅಂಗವಾಗಿ ಸಾವಯವ ಕೃಷಿ, ಗೋ ಸಂರಕ್ಷಣೆ, ಇಂಧನ ಉಳಿತಾಯ, ಜೈವಿಕ ಇಂಧನ ಬಳಕೆ ಕುರಿತ ಬೃಹತ್ ಜನಜಾಗೃತಿಗಾಗಿ ಜ. 6ರಿಂದ 20ರ ವರೆಗೆ ಹಾಲಕೇರಿಯಿಂದ ಉಳವಿಗೆ 101 ಚಕ್ಕಡಿಗಳ ಯಾತ್ರೆ ಆಯೋಜಿಸಲಾಗಿದೆ ಎಂದು ಹಾಲಕೆರೆ ಅನ್ನದಾನೀಶ್ವರ ಮಠದ ಅಭಿನವ ಅನ್ನದಾನ ಶ್ರೀಗಳು ಹೇಳಿದರು.
ನಗರದ ಹಾಲಕೆರೆ ಮಠದ ಆವರಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉಳವಿ ಯಾತ್ರೆಯ ಕಾರ್ಯಕ್ರಮದಲ್ಲಿ ಹಾಲಕೆರೆ ಶಾಖಾ ಮಠದ ಹಾಗೂ ಅನೇಕ ಭಕ್ತರ ಚಕ್ಕಡಿಗಳು ಪಾಲ್ಗೊಳ್ಳಲಿವೆ. ಯಾತ್ರೆಯಲ್ಲಿ ಹಾಲಕೆರೆ ಗ್ರಾಮದಿಂದ 38 ಚಕ್ಕಡಿಗಳು, ಕೋನಸಾಗರದಿಂದ 30, ಬೇಲೂರು, ಢಾಣಕ್‌ಶಿರೂರು, ಬೆಳಹೋಡದಿಂದ 25 ಚಕ್ಕಡಿಗಳು, ಗಂಜಿಹಾಳದಿಂದ 11 ಚಕ್ಕಡಿ, ನಾಗೂರಿನಿಂದ 8 ಚಕ್ಕಡಿ, ಹೊನ್ನಾರಹಳ್ಳಿಯಿಂದ 4 ಚಕ್ಕಡಿ, ಬೀಳಗಿಯಿಂದ 10 ಚಕ್ಕಡಿ, ಜಕ್ಕಲಿಯಿಂದ 10 ಚಕ್ಕಡಿ, ನಿಡಗುಂದಿಯಿಂದ 1 ಚಕ್ಕಡಿ, ಸಂಗನಹಾಳದಿಂದ 2 ಚಕ್ಕಡಿ, ತೋಟಗಂಟಿಯಿಂದ 2 ಹೀಗೆ ಒಟ್ಟು 165 ಚಕ್ಕಡಿಗಳು ಉಳವಿ ಯಾತ್ರೆಯಲ್ಲಿ ಹಾಲಕೆರೆಯಿಂದ ಹೊರಡಲಿವೆ.
ಯಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲ ಎತ್ತುಗಳಿಗೆ ಮೇವು ಹಿಂಡಿಯ ವ್ಯವಸ್ಥೆಯನ್ನು ಶ್ರೀ ಮಠದ ಪರ ಎರಡು ಲಾರಿಗಳಲ್ಲಿ ಮೇವಿನ ವ್ಯವಸ್ಥೆ ಮಾಡಲಾಗಿದೆ. ಐವರು ಜಾನುವಾರು ವೈದ್ಯರು, ಐವರು ಮಾನವ ವೈದ್ಯರು ಸೇರಿ ಎಲ್ಲ ರೀತಿಯ ಔಷಧೋಪಚಾರಗಳನ್ನು ಶ್ರೀಮಠದಿಂದ ಒದಗಿಸಲಾಗಿದೆ. ಸ್ವತಃ ಶ್ರೀ ಮಠದ ಪೀಠಾಧಿಪತಿ ಅಭಿನವ ಅನ್ನದಾನ ಸ್ವಾಮಿಗಳು ಮಠದ ಢಮಣಿ ಚಕ್ಕಡಿಯಲ್ಲಿ ಆಗಮಿಸಲಿದ್ದಾರೆ.
ಯಾತ್ರಾ ವಿವರ: ಯಾತ್ರೆ ಯಾವ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದೆಯೋ ಅದೇ ಗ್ರಾಮದಲ್ಲಿ ಪ್ರತಿದಿನ ಸಾವಯವ ಕೃಷಿ ಅಭಿವೃದ್ದಿ, ಗೋ ಸಂರಕ್ಷಣೆ, ಇಂಧನ ಉಳಿತಾಯ, ಜೈವಿಕ ಇಂಧನ ಬಳಕೆ ಕುರಿತ ಉಪನ್ಯಾಸ ನಡೆಯಲಿದೆ. ಹೀಗೆ ಪ್ರತಿದಿನ 25 ಕಿ.ಮೀ ಯಾತ್ರೆ ಮಾಡಲಾಗುವುದು. ಯಾತ್ರೆ ಹಾಲಕೆರೆಯಿಂದ ಜ. 6ರ ಬೆಳಗ್ಗೆ 6ಕ್ಕೆ ಹೊರಡುವದು. ಸಮೀಪದ ಜಕ್ಕಲಿಯಲ್ಲಿ ಮಧ್ಯಾಹ್ನದ ಪೂಜೆ ನಂತರ ರೋಣದಲ್ಲಿ ವಾಸ್ತವ್ಯ. 7ರ ಬೆಳಗ್ಗೆ 6ಕ್ಕೆ ರೋಣದಿಂದ ಹೊರಟು ಬೆಳವಣಿಕಿಗೆ ಆಗಮಿಸಿ ಮಧ್ಯಾಹ್ನದ ಪೂಜೆ, ಸಂಜೆ ಶಲವಡಿ ಗ್ರಾಮದಲ್ಲಿ ವಾಸ್ತವ್ಯ.  8ರ ಬೆಳಗ್ಗೆ 6ಕ್ಕೆ ಶಲವಡಿಯಿಂದ ಹೊರಟು ನವಲಗುಂದದಲ್ಲಿ ಮಧ್ಯಾಹ್ನದ ಪೂಜೆ, ರಾತ್ರಿ ತಿರ್ಲಾಪುರದಲ್ಲಿ ವಾಸ್ತವ್ಯ.
9ರ ಬೆಳಗ್ಗೆ 6ಕ್ಕೆ ತಿರ್ಲಾಪುರದಿಂದ ಹೊರಟು ರಾಯರ ಹೆಬ್ಬಳ್ಳಿಯಲ್ಲಿ ಮಧ್ಯಾಹ್ನದ ಪೂಜೆ, ರಾತ್ರಿ ಧಾರವಾಡದ ಮುರುಘಾಮಠದಲ್ಲಿ ವಾಸ್ತವ್ಯ. 10ರ ಬೆಳಗ್ಗೆ 6ಕ್ಕೆ ಧಾರವಾಡ ಮುರುಘಾಮಠದಿಂದ ಹೊರಟು ಹಳ್ಳಿಗೆರೆ ಗ್ರಾಮದಲ್ಲಿ ಮದ್ಯಾಹ್ನದ ಪೂಜೆ, ಹಳಿಯಾಳದಲ್ಲಿ ವಾಸ್ತವ್ಯ. 11ರ ಬೆಳಗ್ಗೆ 6ಕ್ಕೆ ಹಳಿಯಾಳದಿಂದ ಹೊರಟು, ದಾಂಡೇಲಿಯಲ್ಲಿ ಮಧ್ಯಾಹ್ನದ ಪೂಜೆ ಬಳಿಕ ಪ್ರಧಾನಿ ಗ್ರಾಮದಲ್ಲಿ ವಾಸ್ತವ್ಯ. 12ರ ಬೆಳಗ್ಗೆ 6ಕ್ಕೆ ಪ್ರಧಾನಿ ಗ್ರಾಮದಿಂದ ಹೊರಟು ಕಾನೇರಿ ನದಿಯ ದಡದಲ್ಲಿ ಮಧ್ಯಾಹ್ನದ ಪೂಜೆ ಸಂಜೆ ಶ್ರೀ ಕ್ಷೇತ್ರ ಉಳಿವಿಗೆ ತಲುಪಿ ಅಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.
ಉಳಿವಿಯಿಂದ 14ರ ಬೆಳಗ್ಗೆ 6ಕ್ಕೆ ಬಿಟ್ಟು, ಕಾನೇರಿ ನದಿ ದಡದಲ್ಲಿ ಬೆಳಗಿನ ಪೂಜೆ ಮಧ್ಯಾಹ್ನ ಕಂಡಾಕುಂಡಿ ಹಳ್ಳದಲ್ಲಿ ಪೂಜೆ ರಾತ್ರಿ, ಪ್ರಧಾನಿ ಗ್ರಾಮದಲ್ಲಿ ವಾಸ್ತವ್ಯ. 15ರ ಬೆಳಗ್ಗೆ 6 ಗಂಟೆಗೆ ಪ್ರಧಾನಿ ಗ್ರಾಮದಿಂದ ಹೊರಟು, ದಾಂಡೇಲಿಯಲ್ಲಿ ಮಧ್ಯಾಹ್ನದ ಪೂಜೆ, ರಾತ್ರಿ ಹಳಿಯಾಳದಲ್ಲಿ ವಾಸ್ತವ್ಯ. 16ರ ಬೆಳಗ್ಗೆ 6ಕ್ಕೆ ಹಳಿಯಾಳದಿಂದ ಹೊರಟು, ಬಣದೂರು ಹುಲಕೊಪ್ಪದಲ್ಲಿ ಮಧ್ಯಾಹ್ನ ಪೂಜೆ, ರಾತ್ರಿ ಧಾರವಾಡದಲ್ಲಿ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ (ರೇಲ್ವೆ ಹಳಿ ಹತ್ತಿರ) ವಾಸ್ತವ್ಯ. 17ರ ಬೆಳಗ್ಗೆ 6ಕ್ಕೆ ಧಾರವಾಡ ಬಿಟ್ಟು ಶಿವಳ್ಳಿಯಲ್ಲಿ ಮಧ್ಯಾಹ್ನದ ಪೂಜೆ, ರಾತ್ರಿ ಹೆಬಸೂರಲ್ಲಿ ವಾಸ್ತವ್ಯ.
ಜ. 18ರ ಬೆಳಗ್ಗೆ 6ಕ್ಕೆ ಹೆಬಸೂರು ಬಿಟ್ಟು ಇಬ್ರಾಹಿಂಪುರದಲ್ಲಿ ಮಧ್ಯಾಹ್ನದ ಪೂಜೆ, ರಾತ್ರಿ ದಾಟನಾಳಲ್ಲಿ ವಾಸ್ತವ್ಯ. 19ರ ಬೆಳಗ್ಗೆ 6ಗಂಟೆಗೆ ದಾಟನಾಳ ಬಿಟ್ಟು, ಮಲ್ಲಾಪುರದಲ್ಲಿ ಮಧ್ಯಾಹ್ನದ ಪೂಜೆ, ರಾತ್ರಿ ಅಬ್ಬೀಗೇರಿ ಗ್ರಾಮದಲ್ಲಿ ವಾಸ್ತವ್ಯ. 20ರ ಬೆಳಗ್ಗೆ 6ಕ್ಕೆ ಅಬ್ಬೀಗೇರಿ ಬಿಟ್ಟು, ಕಂಠೀ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಪೂಜೆ ಮುಗಿಸಿ, ನರೇಗಲ್‌ನಲ್ಲಿ ಮಧ್ಯಾಹ್ನದ ಪೂಜೆ ಮುಗಿಸಿ ರಾತ್ರಿ ಹಾಲಕೆರೆಯಲ್ಲಿ ವಾಸ್ತವ್ಯ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ಜರುಗುವವು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.