ಗದಗ

ಏಡ್ಸ್ ಜನಜಾಗೃತಿ

Published On :

ಮುಳಗುಂದ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಆಶ್ರಯದಲ್ಲಿ ಜೈ ಭೀಮ ಕಲಾತಂಡ ಇವರಿಂದ ಈಚೆಗೆ ಸಾರ್ವಜನಿಕರಲ್ಲಿ ಏಡ್ಸ್ ಕುರಿತ ಜನಜಾಗೃತಿ ಜರುಗಿತು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಆರ್.ಜಿ. ಬೇವಿನಕಟ್ಟಿ, ಟಿ.ಎಸ್. ರಾಯಭಾಗಿ ಏಡ್ಸ್ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಕಲಾವಿದರಾದ ಬಸವರಾಜ ಜಕ್ಕಮ್ಮನವರ, ಶಿವಪುತ್ರಪ್ಪ ಕಾಳೆ, ಮನೋಹರ ಕಾಳೆ, ಮನೋಹರ ಜಕ್ಕಮ್ಮನವರ, ರಾಜೇಶ ಜಕ್ಕಮ್ಮನವರ ಮುಂತಾದ ಕಲಾವಿದರು ಬೀದಿನಾಟಕ ಹಾಗೂ ಜಾನಪದ ಗೀತೆಗಳ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಇಂದು ಜಯಂತಿ
ಲಕ್ಷ್ಮೇಶ್ವರ:  ಸಮೀಪದ ಶಿಗ್ಲಿ ಗ್ರಾಮದಲ್ಲಿ ರಂಭಾಪುರಿ ಪೀಠದ ಜಗದ್ಗುರು ವೀರ ಸೋಮೇಶ್ವರ ಶ್ರೀಗಳ 58ನೇ ಜಯಂತಿ ಕಾರ್ಯಕ್ರಮವನ್ನು ಜ. 7ರಂದು ಬೆಳಗ್ಗೆ 10ಕ್ಕೆ ವೀರಣ್ಣ ಪವಾಡದ ಅವರ ನಿವಾಸದಲ್ಲಿ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಶಿವಣ್ಣ ಬಳಿಗಾರ, ಮುಖ್ಯ ಅತಿಥಿಗಳಾಗಿ ವೀರಣ್ಣ ಹತ್ತಿಕಾಳ, ಎಸ್.ಪಿ. ಬಳಿಗಾರ, ಸೋಮಣ್ಣ ಡಾಣಗಲ್, ಫಕ್ಕಿರೇಶಪ್ಪ ಹುನಗುಂದ, ವೀರೇಶ ನೂಲ್ವಿ, ಎಚ್.ಎಫ್. ತಳವಾರ ಆಗಮಿಸಲಿದ್ದಾರೆ ಎಂದು ಅನ್ನದಾನೇಶ್ವರ ಪವಾಡದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಪಿಎಂಸಿಗೆ ಸೌಲಭ್ಯ ಕಲ್ಪಿಸಿ
ಗದಗ:  ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಬೆಳೆದು ನಿಂತ ಗಜೇಂದ್ರಗಡ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿತ್ಯ ವ್ಯಾಪಾರ ವಹಿವಾಟು ನಡೆಯುತ್ತದೆ. ನೆರೆಯ ಜಿಲ್ಲೆಯ ವ್ಯಾಪಾರಸ್ಥರು ವ್ಯಾಪಾರಸ್ಥರು ಇಲ್ಲಿಗೆ ಆಗಮಿಸುವುದರಿಂದ ಸರ್ಕಾರ ಕೂಡಲೇ ಈ ಎಪಿಎಂಸಿ ಆವರಣದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧೂಳು ತುಂಬಿರುವ ರಸ್ತೆ, ಹೂಳು  ತುಂಬಿಕೊಂಡಿರುವ ಚರಂಡಿ, ಗಟಾರ್, ವಿದ್ಯುತ್ ದೀಪದ ಅವ್ಯವಸ್ಥೆ ಹಾಗೂ ರೈತರ, ವ್ಯಾಪಾರಸ್ಥರ ಮತ್ತು ಶ್ರಮಿಕರ ಅನುಕೂಲಕ್ಕಾಗಿ ಈ ಹಿಂದೆ ನಿರ್ಮಾಣಗೊಂಡು ಉದ್ಘಾಟನೆ ಕಾಣದ ಉಪಾಹಾರ ಗೃಹ, ರೈತರ ಅನುಕೂಲಕ್ಕಾಗಿ ವಿಶ್ರಾಂತಿ ಗೃಹ ಮತ್ತು ಕುಡಿವ ನೀರು ಇಲ್ಲದೇ ಇರುವುದರಿಂದ ರೈತರು ವರ್ತಕರು ಬಹಳಷ್ಟು ತೊಂದರಗೆ ಒಳಗಾಗಿದ್ದಾರೆ. ಈ ಕೂಡಲೇ ಗಮನ ಹರಿಸಬೇಕು ಎಂದು ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಹಾಗೂ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.