ಗದಗ

ಕನಕ ಪುತ್ಥಳಿ ಆಗಮನ: ಪೂಜೆ

Published On :

ಗದಗ:  ಗದುಗಿನ ಕನಕ ಭವನದ ಆವರಣದಲ್ಲಿ ಅನಾವರಣಗೊಳ್ಳಲಿರುವ ಕನಕ ಪುತ್ಥಳಿಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಭಾನುವಾರ ಸಂಜೆ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.
ಫೆಬ್ರವರಿ ಮೊದಲ ವಾರದಲ್ಲಿ ಜಿಲ್ಲಾ ಕುರಬರ ಸಮುದಾಯದ ಬೃಹತ್ ಸಮ್ಮೇಳನ ಸಂದರ್ಭದಲ್ಲಿ ಸ್ಥಾಪಿತಗೊಳ್ಳಲಿರುವ ಕನಕರ ಪುತ್ಥಳಿಯ ನಿರ್ಮಾಣಕ್ಕೆ ಗದಗ-ಬೆಟಗೇರಿ ನಗರ ಸಭೆಯು ರು. 5 ಲಕ್ಷ ನೀಡಿದ್ದು, ಗದಗ ಜಿಲ್ಲಾ ಕುರುಬರ ಸಮುದಾಯ ರು. 5 ಲಕ್ಷ ವಂತಿಗೆ ನೀಡಿದೆ. ಮೂರ್ತಿಯು ಔರಂಗಾಬಾದಲ್ಲಿ ನಿರ್ಮಾಣವಾಗಿದ್ದು, 8 ಅಡಿ ಎತ್ತರವಿದೆ.
ಜಿಲ್ಲಾ ಕನಕ ಸಮಿತಿಯ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ, ಪ್ರಧಾನ ಕಾರ್ಯದರ್ಶಿ ಕೆ.ವಿ. ತಳಗೇರಿ, ಜಿ.ಪಂ. ಸದಸ್ಯ ಆರ್.ಡಿ. ಕೊಂಡಿಕೊಪ್ಪ, ನಗರಸಭೆ ಸದಸ್ಯ ಅನಿಲ ಸಿಂಗಟಾಲಕೇರಿ, ವಾಸಣ್ಣ ಕುರಡಗಿ, ವಿ.ವೈ. ಮುತ್ತಣ್ಣವರ, ರವಿ ದಂಡಿನ, ಶಶಿಧರ ರೊಳ್ಳಿ ಹಾಗೂ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.