ಇಂದು ಸೀಮೆಎಣ್ಣೆ ವಿತರಕರ ಸಭೆ
ಗದಗ: ಗದಗ-ಬೆಟಗೇರಿ ಸೀಮೆಎಣ್ಣೆ ವಿತರಕರ ಸಭೆಯನ್ನು ಜ. 7ರಂದು ಸಂಜೆ 4.30ಕ್ಕೆ ವಿತರಕರ ಸಂಘದ ಕಚೇರಿಯಲ್ಲಿ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಬಿ.ಕೆ. ಪಡಗದ ವಹಿಸುವರು. ಸಭೆಯಲ್ಲಿ ಸೀಮೆಎಣ್ಣೆ ವಿತರಕರ ಕಮಿಷನ್ ಕುರಿತು ಸೀಮೆಎಣ್ಣೆ ವಿತರಕರಿಗೆ ಆಗುವ ತೊಂದರೆಯನ್ನು ಚರ್ಚಿಸಿ, ಆಹಾರ ಇಲಾಖೆಯ ಸಚಿವ ದಿನೇಶ ಗುಂಡೂರಾವ್ ಮತ್ತು ಸಚಿವ ಎಚ್.ಕೆ. ಪಾಟೀಲ ಆಹಾರ ಇಲಾಖೆಯ ಆಯುಕ್ತರನ್ನು ಭೇಟಿ ಮಾಡುವುದರ ಕುರಿತು ಚರ್ಚಿಸಲಾಗುತ್ತಿದ್ದು, ಎಲ್ಲ ಸದಸ್ಯರು ಪಾಲ್ಗೊಳ್ಳಬೇಕು ಎಂದು ಕಾರ್ಯದರ್ಶಿ ಜಿ.ಎಂ. ದಂಡಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಶಿವಾನುಭವ
ಗದಗ: ಗದುಗಿನ ಅಡವೀಂದ್ರ ಮಹಾಸ್ವಾಮಿಗಳವರ ಮಠದಲ್ಲಿ ಜ. 7ರಂದು ಸಂಜೆ 6.30ಕ್ಕೆ 219ನೇ ಶಿವಾನುಭವ, ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಅವರು ನೇತೃತ್ವ ವಹಿಸುವರು. ಅಣ್ಣಿಗೇರಿಯ ನಿಂಗಮ್ಮ ಹೂಗಾರ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ ಅವರು ಮುಖ್ಯ ಉಪನ್ಯಾಸಕರಾಗಿ ಆಗಮಿಸಿ ಆಧ್ಯಾತ್ಮದಲ್ಲಿ ಪುರುಷನಿಗೆ ಸಮಾನಾದ ಮಹಿಳೆ ವಿಷಯವಾಗಿ ಮಾತನಾಡುವರು. ಪಂಚಾಕ್ಷರಿ ಕಲಾಶ್ರೀ ಪ್ರಶಸ್ತಿ ವಿಜೇತರಾದ ಹಿರಿಯ ರಂಗಭೂಮಿ ಕಲಾವಿದ ಗುರಯ್ಯಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಲಾಗುವುದು. ವೆಂಕಟೇಶ ಬೇಲೂರ ಹಾಗೂ ಪಾಂಡುರಂಗ ಕುರ್ತಕೋಟಿ ಅವರಿಂದ ಸಂಗೀತ ಕಾರ್ಯಕ್ರಮವಿದೆ ಎಂದು ಶಿವಾನುಭವ ಸಮಿತಿಯ ಕಾರ್ಯದರ್ಶಿ ಎಸ್.ಜಿ. ಪಲ್ಲೇದ ಅವರು ತಿಳಿಸಿದ್ದಾರೆ.
9ರಂದು ವಿಠ್ಠಲ,ರುಕುಮಾಯಿ ಮೂರ್ತಿ ಪ್ರತಿಷ್ಠಾಪನೆ
ರೋಣ: ಪಟ್ಟಣದ ಸೂಡಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ವಿಠ್ಠಲ, ರುಕುಮಾಯಿ ಮೂರ್ತಿ ಮತ್ತು ಗಣಪತಿ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮವು ಜ. 9ರಂದು ಜರುಗಲಿದೆ. ಮೂರ್ತಿ ಪ್ರತಿಷ್ಠಾನದ ನಿಮಿತ್ತ ಜ. 8 ರಂದು ಕುಂಭಮೇಳ, ಆರತಿ, ಡೊಳ್ಳು, ಭಜನೆಯೊಂದಿಗೆ ಮೂರ್ತಿಗಳ ಉತ್ಸವ ಜರುಗಲಿದೆ. ಮೂರ್ತಿ ಪ್ರತಿಷ್ಠಾಪನೆಯನ್ನು ಪಟ್ಟಣದ ಗುಲಗಂಜಿ ಮಠದ ಗುರುಪಾದ ದೇವರು ನೆರವೇರಿಸುವರು. ಗದಗ ವಿಠ್ಠಲ ಮಂದಿರದ ಸಂತೋಷಭಟ್ ಓಂಕಾರ ಇವರಿಂದ ಹೋಮ ಹವನ ಕಾರ್ಯಕ್ರಮ ಜರುಗಲಿದೆ. ಸಾನ್ನಿಧ್ಯವನ್ನು ಪ್ರಭಾಕರ ಭಜರಂಗ ಬುವಾ ಬೋಧಲೆ ವಹಿಸುವರು. ಅಧ್ಯಕ್ಷತೆಯನ್ನು ಸಮಾಜದ ರಾಷ್ಟ್ರೀಯ ಅಧ್ಯಕ್ಷ ನಾರಾಯಣರಾವ್ ತಾತುಸ್ಕರ ವಹಿಸುವರು. ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.
ಶಿವಾನುಭವ ದತ್ತಿ ನಿಧಿಗೆ ದೇಣಿಗೆ ಸಮರ್ಪಣೆ
ನರಗುಂದ: ತಾಲೂಕಿನ ಭೈರಹನಟ್ಟಿ ಗ್ರಾಮದ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆಯ ಪ್ರತಿ ತಿಂಗಳ ದೊರಸ್ವಾಮಿ ವಿರಕ್ತಮಠದ ಆವರಣದಲ್ಲಿ ನಡೆಸುತ್ತಿರುವ ಶಿವಾನುಭವ ಕಾರ್ಯಕ್ರಮದ ದತ್ತಿ ನಿಧಿಗೆ ದಿ.ನಿಂಗಮ್ಮ ನಿಂಗೋಜಿ ಇವರ ಸ್ಮರಣಾರ್ಥ ಲಕ್ಷಣ ನಿಂಗೋಜಿ ರು. 11,101 ದೇಣಿಗೆ ನೀಡಿದರು.ಇದೇ ಸಂದರ್ಭ ಇವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ನಂತರ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಅನುಭವಿಗಳು ಹೇಳುವ ಹಾಗೆ ದಾನದಿಂದ ಸಿಗುವ ನೆಮ್ಮದಿ ಅಪಾರವಾದದ್ದು, ಸೂರ್ಯಚಂದ್ರರು ಜಗತ್ತಿಗೆ ಬೆಳಕನ್ನು ನೀಡಿದರೆ ದಾನ ಮಾಡುವವರು ಜಗತ್ತನ್ನೇ ಬದುಕಿಸಬಲ್ಲರು. ಹೀಗಾಗಿ ದಾನ ಮಾಡುವ ಕೈಗಳು ಸೂರ್ಯ-ಚಂದ್ರರಷ್ಟೆ ಪವಿತ್ರ ಎಂದರು.
ಮಾಳೇಶ ಹಡಪದ, ಶಿವಲಿಂಗಪ್ಪ ಹಡಪದ, ಪಿ.ಎಫ್. ಆನಂದ್ರಭಾವಿ, ಮಾಂತಮ್ಮ ಹಡಪದ, ಯಲ್ಲುಭಾಯಿ ನಿಂಗೋಜಿ, ಲಕ್ಷ್ಮೀದೇವಿ ಸಾವಂತ, ದೀಪಾ ಬೆಳಗಾವಿ, ಬಸವರಾಜ ಹಡಪದ, ಮಲ್ಲಪ್ಪ ಮೊರಬದ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

