ಗದಗ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೋರಾಟ ಅವಶ್ಯ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 6
ಕಳಸಾಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಹಾಗೂ ಉತ್ತರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಮುಂದಿನ ಜನಾಂಗದ ಭವಿಷ್ಯಕ್ಕಾಗಿ ಹೋರಾಟ ಅವಶ್ಯ ಎಂದು ಕರ್ನಾಟಕ ಅಭಿವೃದ್ಧಿ ವೇದಿಕೆ ಸಂಚಾಲಕ ಅಶೋಕ ಪೂಜಾರಿ ಹೇಳಿದರು.
ಅವರು ಶನಿವಾರ ನಗರದ ಅಕ್ಕನ ಬಳಗದಲ್ಲಿ ಕರ್ನಾಟಕ ಅಭಿವೃದ್ಧಿ ವೇದಿಕೆ ಹಾಗೂ ಗದಗ ಜಿಲ್ಲಾ ಜಾಗ್ರತ ನಾಗರಿಕರ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿ.ಆರ್. ಮಾಳೆಕೊಪ್ಪಮಠ ಮಾತನಾಡಿ, ಚಿಕ್ಕ ಚಿಕ್ಕ ರಾಜ್ಯಗಳಾಗಿ ವಿಂಗಡಿಸಿದಾಗ ಅಭಿವೃದ್ಧಿ ಸಾಧ್ಯ ಎಂದರು. ಗೋಕಾಕದ ಗುರುರಾಜ ಹುಲ್ಲೇರ, ಕಲ್ಯಾಣರಾವ್ ಮುಚಳಂಬಿ, ಕಳಸಾಬಂಡೂರಿ ಹೋರಾಟ ಸಮಿತಿಯ ಅಧ್ಯಕ್ಷ ವಿಜಯ ಕುಲಕರ್ಣಿ, ವೈ.ಎಚ್. ಪಾಟೀಲ, ಟಿ.ಟಿ. ಮುರಕಟ್ಟನಾಳ, ಪ್ರಮೋದ ಪಾಟೀಲ, ವಿಶೇಷ ನಿವೃತ್ತ ಜಿಲ್ಲಾಧಿಕಾರಿ ಬಿ.ಬಿ. ಗೌಡರ, ಗದಗ ಪ್ರೋಬಸ್ ಕ್ಲಬ್ ಅಧ್ಯಕ್ಷ ಬಸವರಾಜ ಗಿಡ್ನಂದಿ, ಸದಸ್ಯ ಟಿ. ಕಾಳೆ, ಶಿವಾನಂದ ಕೋಟಿ ಮುಂತಾದವರು ಮಾತನಾಡಿ, ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ, ಹೊಸ ಉದ್ಯಮಗಳ ಪ್ರಾರಂಭ, ವಿದ್ಯಾವಂತ ಪ್ರತಿಭೆಗಳಿಗೆ ನೌಕರಿ ಅವಕಾಶ, ಕುಡಿಯುವ ನೀರಿನ ಸೌಲಭ್ಯ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ತೀವ್ರ ಹೋರಾಟ ಅಗತ್ಯವಾಗಿದೆ. ನಮ್ಮ ಸಂಘಟನೆ ರಾಜಕೀಯ ವ್ಯಕ್ತಿಗಳಿಂದ ದೂರವಾಗಿದ್ದು, ಹಿರಿಯ ನಾಗರಿಕರು, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಜ್ಞಾವಂತರು ಅನೇಕ ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಮನಸ್ಸುಳ್ಳುವರನ್ನು ಒಳಗೊಂಡು ಒಮ್ಮತದಿಂದ ಹೋರಾಟ ಮಾಡಬೇಕಾಗಿದೆ ಎಂದರು. ಈ ಸಂಘಟನೆ ಎಲ್ಲ ತಾಲೂಕು, ಜಿಲ್ಲಾ ಮಟ್ಟದಲ್ಲಿ ಜನ ಜಾಗೃತಿಗೊಳಿಸಬೇಕಾಗಿದೆ. ಮಂದಿನ ಭವಿಷ್ಯಕ್ಕಾಗಿ ಹೋರಾಟ ಅವಶ್ಯವಿದ್ದು, ಪಕ್ಷಭೇದ ಭಾವ ಮರೆತು ಸಾರ್ವಜನಕರಿಗೆ ಬೇಕಾಗುವ ಎಲ್ಲ ಸವಲತ್ತುಗಳನ್ನು ಪಡೆಯಲು ನಿರ್ಧರಿಸಿ ಹೋರಾಟ ತೀವ್ರಗೊಳಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ತಿಮ್ಮನಗೌಡ್ರ ಜಕ್ಕಲಿ, ಕಪ್ಪಲಿ, ನಲ್ವತ್ವಾಡಮಠ, ಕೋಟಿಗೌಡ್ರ, ಹೊಸಳ್ಳಿಮಠ, ಪೊಬಸ್ ಕ್ಲಬ್ ಕಾರ್ಯದರ್ಶಿ ಏಕನಾಥ ಚೋಳಿನ, ಖಜಾಂಚಿ ವಿನೋದ ತುಂಬಳ ಮುಂತಾದವರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಕೆ.ಎಚ್. ಬೇಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಂ. ಬಿಳಿಯಲಿ ನಿರೂಪಿಸಿದರು. ಬಿ.ಡಿ. ಕಿಲಬನವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.