ಗದಗ

ಚಾಲುಕ್ಯರ ಕಲೆ ಮನಸೆಳೆಯುತ್ತದೆ

Published On :

ಮುಂಡರಗಿ:  ಭಾರತೀಯ ಸಾಹಿತ್ಯಿಕ, ಧಾರ್ಮಿಕ ಬೆಳವಣಿಗೆಗೆ ಜೈನರು, ಬೌದ್ದರು, ಚಾಲುಕ್ಯರ ಕೊಡುಗೆ ಅಪಾರವಾಗಿದೆ. ಚಾಲುಕ್ಯರ ಕಲೆ ಶ್ರೀಮಂತಿಕೆ ಈಗಲೂ ಕಣ್ಮನ ಸೆಳೆಯುತ್ತವೆ. ಆದ್ದರಿಂದ ಈ ಬಾರಿ ಫೆಬ್ರವರಿಯಲ್ಲಿ ಜರುಗುವ ಡಂಬಳದ ಮದರ್ಧನಾರೀಶ್ವರರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ವಿಸ್ಮಯಗಳು ಚಿತ್ರ ಪ್ರದರ್ಶನ ನಡೆಯಲಿದೆ ಎಂದು ಗದಗ, ಡಂಬಳ ಸಂಸ್ಥಾನಮಠದ ಜ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಕಲಾಭವನದಲ್ಲಿ ಫೆಬ್ರವರಿ 15 ಮತ್ತು 16 ರಂದು ಜರುಗಲಿರುವ ಡಂಬಳದ ಮದರ್ಧನಾರೀಶ್ವರ ಜಾತ್ರಾಮಹೋತ್ಸವದ ನಿಮಿತ್ತ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯ ಸಾನ್ನಿಧ್ಯವಹಿಸಿ ಮಾತನಾಡಿದರು. 2014ನೇ ಸಾಲಿನ ಜಾತ್ರಾ ಮಹೋತ್ಸವದ ನೂತನ ಅಧ್ಯಕ್ಷರನ್ನಾಗಿ ಮಲ್ಲಣ್ಣ ಯರಾಶಿ, ಉಪಾಧ್ಯಕ್ಷರಾಗಿ ಪಾಲಪ್ಪ ಹಣವಾಳ, ಕಾರ್ಯದರ್ಶಿಯಾಗಿ ಬಸವರಾಜ ಬೀಜವಾಡ, ಖಜಾಂಚಿಯಾಗಿ ಮಂಜುನಾಥ ಸಂಜೀವಣ್ಣವರ, ಸಹಕಾರ್ಯದರ್ಶಿಯಾಗಿ ರಂಗಪ್ಪ ಜೊಂಡಿಯವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಜಿಪಂ ಸದಸ್ಯ ಬೀರಪ್ಪ ಬಂಡಿ, ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ, ಎಪಿಎಂಸಿ ಸದಸ್ಯ ಮರಿತ್ಯಾಮಪ್ಪ ಆದಮ್ಮನವರ, ರಾಜಶೇಖರಯ್ಯ ಹಿರೇಮಠ, ಗೋಣಿಬಸಪ್ಪ ಕೊರ್ಲಹಳ್ಳಿ, ಡಿ. ಪ್ರಸಾದ, ಸಿದ್ದಣ್ಣ ನಂಜಪ್ಪನವರ, ವಿರೂಪಾಕ್ಷಪ್ಪ ಯಲಿಗಾರ, ಬಸವರಾಜ ಕೊತ್ತಂಬ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.