ಗದಗ

ಜನಪದ ಕಲೆ, ಸಾಹಿತ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

Published On :

ಕನ್ನಡಪ್ರಭ ವಾರ್ತೆ, ಗದಗ, ಜ. 14
ಜನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ತಾಪಂ ಅಧ್ಯಕ್ಷ ಹನಮಂತಪ್ಪ ಇಂಗಳಳ್ಳಿ ಹೇಳಿದರು.
ಅವರು ಈಚಗೆ ತಾಲೂಕಿನ ಅಡವಿಸೋಮಾಪುರ ದೊಡ್ಡತಾಂಡೆಯ ಸೇವಾಲಾಲ ಸಮುದಾಯ ಭವನದಲ್ಲಿ ಜಿಪಂ, ತಾಪಂ, ಗ್ರಾಪಂ, ಯುವ ಜನಸೇವಾ ಹಾಗೂ ಕ್ರೀಡಾ ಇಲಾಖೆ, ಸೇವಾಲಾಲ ಯುವಕ ಮಂಡಳ ಹಾಗೂ ವಿವಿಧ ಮಂಡಳಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 2013-14ನೇ ಸಾಲಿನ ಗದಗ ತಾಲೂಕು ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನ ಮೇಳವು ಯುವ ಕಲಾವಿದರಿಗೆ ಸೂಕ್ತ ವೇದಿಕೆಯಾಗಿದ್ದು, ಇದನ್ನು ಬಳಸಿಕೊಳ್ಳಬೇಕು. ಕಲಾವಿದರಿಗೆ ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಜನಪದ ಕಲೆಗಳಿಗೆ ಚಾಲನೆ ನೀಡಿದ ತಾಪಂ ಸದಸ್ಯ ಪ್ರಹ್ಲಾದ್ ಹೊಸಳ್ಳಿ ಮಾತನಾಡಿ, ಉಡುಗೆ, ತೊಡುಗೆ, ಭಾಷೆ, ಸಂಸ್ಕೃತಿ ಲಂಬಾಣಿ ಜನಾಂಗ ಮರೆತಿಲ್ಲ. ಈ ಜನಾಂಗ ತನ್ನದೆಯಾದ ಹಿರಿಮೆ ಗರಿಮೆಯನ್ನು ಹೊಂದಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿದರೆ ಮಾತ್ರ ಧರ್ಮ, ದೇಶ ಉಳಿಯುತ್ತದೆ. ಇಂದಿನ ದಿನಮಾನಗಳಲ್ಲಿ ಟಿ.ವಿ, ಮೊಬೈಲ್ ಹಾವಳಿಯಿಂದಾಗಿ ನಮ್ಮ ಸಂಸ್ಕೃತಿ ನಶಿಸುತ್ತಿದೆ. ಕನ್ನಡ ನಾಡು, ನುಡಿ, ಜನಪದ ಕಲೆ, ಸಂಸ್ಕೃತಿ ಉಳಿಸಿ ಸುಂದರ ನಾಡು ನಿರ್ಮಾಣ ಮಾಡಲು ನಾವು ಕಂಕಣ ಬದ್ಧರಾಗಿ ನಿಲ್ಲಬೇಕು ಎಂದರು.
ತಾಪಂ ಇಓ ಬಿ.ರೇವಣ್ಣ ಮಾತನಾಡಿ, ಗ್ರಾಮೀಣ ಕಲೆ ಅದ್ಭುತವಾದದ್ದು, ಇದಕ್ಕೆ ಅಗಾಧವಾದ ಶಕ್ತಿ ಇದೆ. ಯುವಕರು ಸಾಧಿಸುವ ಛಲವನ್ನು ಹೊಂದಿರಬೇಕು. ಗ್ರಾಮೀಣ ಬದುಕಿನಲ್ಲಿ ಎಲ್ಲ ಸೌಲಭ್ಯಗಳನ್ನು ಪಡೆಯಬಹುದು. ಇಲ್ಲಿಯ ವಾತಾವರಣವನ್ನು ನಾವು ಎಲ್ಲಿಯೂ ಪಡೆಯಲು ಸಾಧ್ಯವಿಲ್ಲ. ಗ್ರಾಮೀಣ ಕಲೆಗಳು, ಕ್ರೀಡೆಗಳು ಅಳಿವಿನಂಚಿನಲ್ಲಿದ್ದು ಅವುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಪುಟ್ಟರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಆಧ್ಯಕ್ಷ ರಮೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ತಾಪಂ ಮಾಜಿ ಅಧ್ಯಕ್ಷೆ ಶಾಂತವ್ವ ಕಾರಬಾರಿ, ಮಾಜಿ ಅಧ್ಯಕ್ಷ ಭೀಮಪ್ಪ ಲಮಾಣಿ, ಗ್ರಾಪಂ ಸದಸ್ಯ ಚನ್ನಪ್ಪ ಅಂಗಡಿ, ಮಲ್ಲಪ್ಪ ಹೊಸಳ್ಳಿ, ರಾಮಪ್ಪ ಲಮಾಣಿ, ಶೀತವ್ವ ರಾಠೋಡ, ದೇವಕ್ಕ ಲಮಾಣಿ, ಲಚ್ಚಪ್ಪ ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ ಸಕ್ರಪ್ಪ ಲಮಾಣಿ, ತಾಲೂಕು ಸಹಾಯಕ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಬಿ.ಎಚ್. ಚಕ್ರಣ್ಣವರ, ಡಾ. ಅಂದಾನಯ್ಯ ಹಿರೇಮಠ, ಆಕಾಶವಾಣಿ ಕಲಾವಿದ ವೀರಣ್ಣ ಅಂಗಡಿ, ಡಾ. ಬಸಯ್ಯ ಗದಗಿನಮಠ, ಮೃತ್ಯುಂಜಯ ಕುಲಕರ್ಣಿ, ಶಂಕರ ಲಮಾಣಿ, ಕುಮಾರನಾಯಕ ದೊಡ್ಡತಾಂಡೆ, ಸಣ್ಣತಾಂಡೆ, ಪಾಪನಾಶಿ ತಾಂಡೆ ನಾಯಕಡಾವ, ಕಾರಬಾರಿ ಮೂರು ತಾಂಡೆಯ ಗುರುಹಿರಿಯರು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಷಣ್ಮುಖ ಕಾರಬಾರಿ ಸ್ವಾಗತಿಸಿದರು. ಎ.ಟಿ.ಹಡಪದ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.