ಗದಗ

ಆಶ್ವಾಸನೆ ಈಡೇರಿಸಲಾಗಿದೆ: ಸಂಸದ ಉದಾಸಿ

Published On :

ಮುಂಡರಗಿ: ಸಂಸದರ ಅನುದಾನದಲ್ಲಿ ಬಂದಿರುವ ಒಟ್ಟು ರು. 19.58 ಕೋಟಿಗಳನ್ನು ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 7 ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ನೀಡಲಾಗಿದೆ. ಚುನಾವಣೆಯ ವೇಳೆಯಲ್ಲಿ ನೀಡಿದ ಆಶ್ವಾಸನೆ ಈಡೇರಿಸಲಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಅವರು ಈಚೆಗೆ ತಾಲೂಕಿನ ಸುಕ್ಷೇತ್ರ ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಸರ್ಕಾರದ ಯೋಜನೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಉತ್ತಮವಾಗಿ ನಡೆಯುವಂತೆ ಎಚ್ಚರಿಕೆಯನ್ನು ವಹಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಕುರಿತು ಅನೇಕ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅನುದಾನದ ದುರ್ಬಳಕೆ ಕಂಡುಬಂದಲ್ಲಿ ಅಂತಹ ಗ್ರಾಮ ಪಂಚಾಯಿತಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾಗಿದೆ ಎಂದರು. ಮುಂಡರಗಿ ತಾಲೂಕಿಗೆ ಕೇವಲ ಒಂದೆರಡು ಸಲ ಮಾತ್ರ ಭೇಟಿ ನೀಡಿದ್ದೀರಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಕೆಜೆಪಿ ಮತ್ತು ಬಿಜೆಪಿ ಗೊಂದಲದಲ್ಲಿ ತಾಲೂಕಿನ ಮತದಾರರನ್ನು ಭೇಟಿಯಾಗಲಿಕ್ಕೆ ಆಗಲಿಲ್ಲ. ಆದರೆ ಹಾವೇರಿ ಮತ್ತು ಗದಗ ಜಿಲ್ಲೆಯಲ್ಲಿ ನಡೆಯುವ ಎಲ್ಲ ತ್ರೈಮಾಸಿಕ ಸಭೆಗಳಿಗೆ ಹಾಜರಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಶೀಲಿಸಿದ್ದೇನೆ. ಬ್ಯಾಂಕಿಂಗ್ ವಿಷಯದಲ್ಲಿ ಅನೇಕ ಗ್ರಾಹಕರ ಸಭೆಗಳನ್ನು ನಡೆಸಿ ಕುಂದುಕೊರತೆಗಳನ್ನು ಚರ್ಚಿಸಿದ್ದಾಗಿದೆ ಎಂದರು. 2013-14ನೇ ಸಾಲಿನಲ್ಲಿ ಎನ್.ಆರ್.ಇ.ಜಿ.ಎ ಯೋಜನೆಯಡಿ ಸಾಮಾನ್ಯ ಕಾಮಗಾರಿಗಳು ಹಾಗೂ ವೈಯಕ್ತಿಕ ಕಾಮಗಾರಿಗಳ ಒಟ್ಟು ಮುಂಡರಗಿ ತಾಲೂಕಿನ 15 ಗ್ರಾಪಂಗಳಿಗೆ ರು. 4075.81 ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ. ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆ-2ರಂತೆ ಹಮ್ಮಿಗಿ ವಾಯಾ ಗುಮ್ಮಗೋಳ ಮತ್ತು ಡಿ. ನಾರಾಯಣಪುರ-ಡಂಬಳ ರಸ್ತೆಗೆ ಒಟ್ಟು ರು. 821.37 ಲಕ್ಷ ಅನುಮೋದನೆಯಾಗಿದ್ದು ಇಷ್ಟರಲ್ಲಿಯೇ ಕಾಮಗಾರಿಗಳು ಪ್ರಾರಂಭವಾಗುವವು ಎಂದರು. ಕಪ್ಪತಗುಡ್ಡದ ಸಂರಕ್ಷಣೆಗಾಗಿ ಒಂದು ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಅನುಮೋದನೆಯನ್ನು ಪಡೆಯಲಾಗಿದೆ ಎಂದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಕರಬಸಪ್ಪ ಹಂಚಿನಾಳ, ಎಸ್.ವಿ.ಪಾಟೀಲ, ಆರ್.ಎಂ. ತಪ್ಪಡಿ, ದೇವಪ್ಪ ಇಟಗಿ, ಶಂಕರಗೌಡ ಪಾಟೀಲ, ಬಸವರಾಜ ಬಿಳಿಮಗ್ಗದ, ಸುಭಾಸ್ ಗುಡಿಮನಿ, ಪ್ರಭು ಅಬ್ಬಿಗೇರಿ, ಶ್ರೀನಿವಾಸ, ಕರಿಯಪ್ಪ ಹಡಗಲಿ, ಮೋಹನ ದೇಸಾಯಿ, ಸುರೇಶ ಮಾಳೆಕೊಪ್ಪ, ಸುರೇಶ ಜೈನ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.