ಗದಗ

ಪೈಗಂಬರರ ಆದರ್ಶ ಮಾದರಿ: ದೊಡ್ಡಮನಿ

Published On :

ಗದಗ: ಪ್ರವಾದಿ ಮಹ್ಮದ ಪೈಗಂಬರರು ಕೇವಲ ಒಂದೇ ಸಮಾಜಕ್ಕೆ ಮೀಸಲಾಗಿರದೇ ಸರ್ವ ಜನಾಂಗದಲ್ಲಿನ ಜಾತಿ, ಭೇದ ಹೋಗಲಾಡಿಸುವ ಮೂಲಕ ಸರ್ವರಲ್ಲಿ ಸಮಾನತೆಯ ಬೀಜ ಬಿತ್ತಿದವರು. ಅಂತಹ ಪ್ರವಾದಿಗಳ ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿ ಎಂದು ಪಿ.ಎಲ್.ಡಿ. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ಕೋಟುಮಚಗಿ ಗ್ರಾಮದ ಹಜರತ ಜಿಂದಾಶಾವಲಿ ದರ್ಗಾದ ಆವರಣದಲ್ಲಿ ಸಂಕಲ್ಪ ರೂರಲ್ ಡೆವಲಪ್‌ಮೆಂಟ್, ಅಂಜುಮನ್ ಇಸ್ಲಾಂ ಕಮಿಟಿ, ಅಲ್ಲಮಾ ಇಕ್ಬಾಲ್ ಕಮಿಟಿ ಹಾಗೂ ಹಜರತ ಜಿಂದಾಶಾವಲಿ ಗೆಳೆಯರ ಬಳಗದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಹ್ಮದ ಪೈಗಂಬರರ ಜೀವನ ಮತ್ತು ಆದರ್ಶಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.  
ನಮ್ಮ ದೇಶವು ಸರ್ವಜಾತಿಗಳನ್ನು ಹೊಂದಿದ್ದು, ಸರ್ವರೂ ಸಹೋದರರಂತೆ ಬಾಳುತ್ತಿದ್ದಾರೆ. ಇಲ್ಲಿನ ಸಂಸ್ಕೃತಿಯನ್ನು ಬೇರೆ ದೇಶದವರು ಅನುಸರಿಸುತ್ತಿರುವುದು ಅಭಿನಂದನಾರ್ಹ ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕ ಇರ್ಷಾದ ಮುಲ್ಲಾ ಮಾತನಾಡಿ, ಮಹ್ಮದ ಪೈಗಂಬರರು ಕೇವಲ ಮುಸ್ಲಿಂ ಬಾಂಧವರಿಗೆ ಸೀಮಿತರಾದ ವ್ಯಕ್ತಿಗಳಲ್ಲ. ಅವರು ಎಲ್ಲ ಸಮಾಜದ ಜನರಿಗೆ ಸೇರಿದವರಾಗಿದ್ದಾರೆ ಎಂದರು.  ಶಿಕ್ಷಕ ಕೆ.ಎಫ್. ಮೀರಾನಾಯ್ಕ, ಸೋಮೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಸ್. ಶಿವಪ್ಪಯ್ಯನಮಠ, ಸಿ.ಆರ್.ಪಿ. ವಿಶ್ವನಾಥ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು.  ಅಧ್ಯಕ್ಷತೆಯನ್ನು ಶಿಕ್ಷಕ ಜೆ.ಎಚ್. ಮುಲ್ಲಾ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ, ತಾಪಂ ಸದಸ್ಯೆ ಲಲಿತಾ ಅಣ್ಣಿಗೇರಿ, ಗ್ರಾಪಂ ಸದಸ್ಯ ಎಂ.ಆರ್. ಬೂದಿಹಾಳ, ದೇವಪ್ಪ ಬಡಿಗೇರ, ಸಂಕಲ್ಪ ರೂರಲ್ ಡೆವಲಪ್‌ಮೆಂಟ್‌ನ ಅಧ್ಯಕ್ಷ ಶರಣಪ್ಪ ಸೋಮನಗೌಡ್ರ, ಕರಿಂಸಾಬ ವಡಗೇರಿ, ಚಮನಸಾಬ ಹಿರೇಹಾಳ, ಅಂಜುಮನ್ ಇಸ್ಲಾಂ ಕಮಿಟಿ ಉಪಾಧ್ಯಕ್ಷ ಜೀವನಸಾಬ ಹಿರೇಹಾಳ, ಕಮ್ಮಾರ, ಶಿಕ್ಷಕಿ, ಎಚ್.ಜೆ. ಸಾಗರ, ಮುಂತಾದವರು ಉಪಸ್ಥಿತರಿದ್ದರು. ಜೀವನಸಾಬ ಬೂದಿಹಾಳ ಸ್ವಾಗತಿಸಿದರು. ಶಿಕ್ಷಕ ಬಸೀರಅಹ್ಮದ್ ಹಿರೇಹಾಳ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.