ರಸ್ತೆ ಕಾಮಗಾರಿ ಶಾಸಕ ದೊಡ್ಡಮನಿ ಚಾಲನೆ
ಮುಂಡರಗಿ: ತಾಲೂಕಿನ ಶಿಂಗಟಾಲೂರು ಬಳಿ ಪಿ.ಎಂ.ಜಿ.ಎಸ್.ವೈ. ಯೋಜನೆಯಡಿಯಲ್ಲಿ ರು. 12ಲಕ್ಷ ಮೊತ್ತದಲ್ಲಿ ಮರುಡಾಂಬರೀಕರಣ ಕಾಮಗಾರಿಗೆ ಈಚೆಗೆ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೂಮಿಪೂಜೆ ನೆರವೇರಿಸಿದರು. ತಾಪಂ ಸದಸ್ಯ ರಾಮಾಂಜನೇಯರಾಜು ಪೆನ್ಮತ್ಸ, ಚೆನ್ನವೀರಪ್ಪ ಯಲಿಗಾರ, ಬಾಲಚಂದ್ರ ತಳವಾರ, ಮಹಾವೀರ ಮುತ್ತಿನ, ಹೇಮಂತಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಕಲಿಕೋತ್ಸವ:ವಿದ್ಯಾರ್ಥಿಗಳ ಉತ್ತಮ ಸಾಧನೆ
ಗದಗ: ಗದಗ ಗ್ರಾಮೀಣ ವಲಯದ ತಾಲೂಕು ಮಟ್ಟದ ಕಲಿಕೋತ್ಸವ ಸ್ಪರ್ಧೆಯಲ್ಲಿ ತಾಲೂಕಿನ ಬೆಳಹೊಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ. ರಂಜಿತಾ ಪಾಟೀಲ ಸಿಂಗಿಂಗ್ ರೈಮ್ಸ್ನಲ್ಲಿ ಪ್ರಥಮ, ಕನ್ವರ್ಶನ್ನಲ್ಲಿ ದ್ವಿತೀಯ ಸ್ಥಾನ, ಸಂಗೀತಾ ಕುಸುಗಲ್ಲ ಕನವರ್ಶನ್ನಲ್ಲಿ ತೃತೀಯ ಸ್ಥಾನ, ವಿನಾಯಕರಡ್ಡಿ ಹುಬ್ಬಳ್ಳಿ ಸ್ಪೇಲ್ಲಿಂಗ ಗೇಮ್ಸ್ನಲ್ಲಿ ದ್ವಿತೀಯ ಸ್ಥಾನ ಮತ್ತು ಫಾತಿಮಾ ಹುಲ್ಲೂರ ಹಾಗೂ ಸಂಗಡಿಗರು ಸ್ಕೀಟ್ನಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಸ್ಡಿಎಂಸಿ ಅಧ್ಯಕ್ಷ ರಮೇಶ ರಾಜಣ್ಣವರ ಹಾಗೂ ಸದಸ್ಯರು ಹಾಗೂ ಶಾಲೆಯ ಪ್ರಧಾನ ಗುರುಗಳು ಕೆ.ಡಿ. ಬಡಿಗೇರ ಮತ್ತು ಗುರುಬಳಗ ಹಾಗೂ ಗ್ರಾಮದ ನಾಗರಿಕರು ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

