ಲಾಲಾಲಜಪತರಾಯ ಜಯಂತಿ
ಕನ್ನಡಪ್ರಭ ವಾರ್ತೆ, ಗದಗ, ಜ. 30
ಪಂಜಾಬಿನ ಸಿಂಹ ಎಂದೇ ಖ್ಯಾತಿವೆತ್ತ ಲಾಲಾಲಜಪತರಾಯರು ಲೇಖನ ಹಾಗೂ ಭಾಷಣಗಳ ಮೂಲಕ ಜನರಲ್ಲಿ ರಾಷ್ಟ್ರಭಕ್ತಿ ಮೂಡಿಸಿದವರು ಎಂದು ಸಂಸ್ಥೆಯ ಪ್ರಾಚಾರ್ಯೆ ವೈ.ಆರ್. ಹಿರೇಗೌಡ್ರ ಹೇಳಿದರು.
ಅವರು ಮಂಗಳವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಲಾಲಾಲಜಪತರಾಯ ಹಾಗೂ ಜನರಲ್ ಕಾರಿಯಪ್ಪ ಇವರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಾಲಾಲಜಪತರಾಯರನ್ನು ದೇಶದ ಇತಿಹಾಸ ಮರೆಯುವಂತಿಲ್ಲ ಎಂದರು.
ಸಿ.ಎಂ. ಮಾರನಬಸರಿ ಮಾತನಾಡಿ, ಭಾರತ ಸ್ವಾತಂತ್ರ್ಯ ನಂತರ ಪ್ರಥಮ ಸೇನಾಪಡೆಯ ಮುಖ್ಯಸ್ಥರಾದ ಜನರಲ್ ಕಾರಿಯಪ್ಪ ಒಬ್ಬ ಅಪ್ಪಟ ದೇಶಪ್ರೇಮಿ. ಅಂದೇ ಅವರು ಮನಸ್ಸು ಮಾಡಿದಲ್ಲಿ ಅವರು ಪ್ರಜಾಪ್ರಭುತ್ವ ಸರ್ಕಾರವನ್ನು ಹಿಂದೆ ತಳ್ಳಿ ಮಿಲಿಟರಿ ಆಡಳಿತವನ್ನು ಜಾರಿಗೆ ತರಬಹುದಾಗಿತ್ತು. ಆದರೆ, ಅವರು ದೇಶದ ಮೇಲಿನ ಗೌರವದಿಂದ ಹಾಗೆ ಮಾಡಲಿಲ್ಲ ಎಂದರು.
ಉಪನ್ಯಾಸಕ ಎ.ಎ. ಹದ್ಲಿ ಸ್ವಾಗತಿಸಿದರು. ಕೆ.ಎಂ. ಮೂಲಿಮನಿ ನಿರೂಪಿಸಿದರು. ಎಸ್.ಆರ್. ವಾಲ್ಮೀಕಿ ವಂದಿಸಿದರು.
--
ಪರಿಸರ ಸಂರಕ್ಷಿಸುವುದೇ ಇಕೋ ಕ್ಲಬ್ನ ಉದ್ದೇಶ
ಗದಗ: ಇಕೋ ಕ್ಲಬ್ನ ಮೂಲ ಉದ್ದೇಶ ಪರಿಸರ ಸಂರಕ್ಷಿಸುವುದು ಎಂದು ಪ್ರೊ. ಅನ್ನದಾನಿ ಹಿರೇಮಠ ಹೇಳಿದರು. ಅವರು ಸ್ಥಳೀಯ ನಗರಸಭೆಯ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಇಕೋ ಕ್ಲಬ್ನ ಸಮಾರಂಭದಲ್ಲಿ ಮಾತನಾಡಿದರು. ಪ್ರತಿ ಜೀವಿಗಳಿಗೂ ಪರಿಸರದ ಎಲ್ಲ ಸಂಪನ್ಮೂಲಗಳು ಬೇಕು. ಪ್ರಕೃತಿ ಸಂಪನ್ಮೂಲಗಳನ್ನು ಒದಗಿಸಿದೆ. ಆದರೆ ಸ್ವಾರ್ಥದ ದೃಷ್ಟಿಯಿಂದ ಅವುಗಳನ್ನು ಹೆಚ್ಚು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದ ಪ್ರಕೃತಿ ವಿನಾಶ ಹೊಂದುತ್ತ ಬಂದಿದೆ. ಪರಿಸರವನ್ನು ಮಿತಬಳಕೆ, ಪುನರ್ ಬಳಕೆ, ಪುನರುತ್ಪಾದನೆಯ ಮೂಲಕ ಸಂರಕ್ಷಿಸಬಹುದಾಗಿದೆ. ನಮಗೆ ಎಲ್ಲ ದೇವರಿಗಿಂತ ಪರಿಸರವನ್ನೇ ದೇವರಾಗಿ ಪೂಜಿಸುವಂತಾಗಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಿಸುವಲ್ಲಿ ಶ್ರಮಿಸುವಂತಾಗಬೇಕು ಎಂದರು. ಶಿಕ್ಷಕಿ ಸುಮತಿ ಗದುಗಿನಮಠ ಮಾತನಾಡಿ, ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣು ಮಾಲಿನ್ಯದಿಂದಾಗಿ ನಮ್ಮ ಆಹಾರ ಕಲುಷಿತವಾಗಿದೆ. ಅಶುದ್ಧ ನೀರು, ಅಶುದ್ಧ ವಾಯುವಿನಿಂದಾಗಿ ರೋಗಗಳ ಸಂಖ್ಯೆ ಹೆಚ್ಚಾಗಿ ಜೀವಿಗಳಿಗೆ ವ್ಯತಿರಿಕ್ತ ಪರಿಣಾಮಗಳುಂಟಾಗುತ್ತಿವೆ. ಬದುಕುವುದು ದುಸ್ತರವೆನಿಸಿದೆ. ಅದಕ್ಕೆ ಗಿಡ-ಮರಗಳನ್ನು ಬೆಳೆಸಿ ಸಂರಕ್ಷಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾ. ವೆಂಕಟೇಶ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಂ. ಕೆಳಗೇರಿ ಸ್ವಾಗತಿಸಿದರು. ಎಸ್.ಸಿ. ಶ್ಯಾವಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

