ಗಾಂಧಿ ಆದರ್ಶ ಪಾಲಿಸಿದಲ್ಲಿ ರಾಮರಾಜ್ಯ
ಗದಗ: ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಆದರ್ಶಗಳ ಕುರಿತು ಇಂದಿನ ಯುವಪೀಳಿಗೆ ಅರ್ಥೈಸಿಕೊಂಡು ಆಚರಣೆಗೆ ತಂದರೆ ಮಾತ್ರ ಕರ್ನಾಟಕವು ರಾಮ ರಾಜ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳ ಆಶ್ರಯದಲ್ಲಿ ಗುರುವಾರ ಸ್ಥಳಿಯ ನಗರಸಭೆಯ ಸಂಯುಕ್ತ ಪಪೂ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ವ್ಯಕ್ತಿತ್ವ ವಿನಾಶಕ ಮದ್ಯಪಾನ ತಡೆ ಜಾಗೃತಿ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರು ಸತ್ಯ, ಅಹಿಂಸೆಯಿಂದ ಬಾಳಿದಂತಹ ಒಬ್ಬ ಧೀಮಂತ ವ್ಯಕ್ತಿಗಳು. ಆದರೆ, ಇಂದಿನ ಯುವಕರಲ್ಲಿ ಈ ಸಂಸ್ಕೃತಿ ಕಡಿಮೆಯಾಗುತ್ತಿದೆ. ಈ ಕುರಿತು ಯುವಕರು ಜಾಗ್ರತರಾಗುವುದು ಅತಿ ಅವಶ್ಯ. ವಿದ್ಯಾರ್ಥಿಗಳು ದುಶ್ಚಟಗಳನ್ನು ಬಿಟ್ಟು ಉತ್ತಮ ಆದರ್ಶ ಜೀವನ ನಡೆಸುವಂತಾಗಬೇಕು ಎಂದರು. ಉಪನ್ಯಾಸಕರಾಗಿದ್ದ ಪ್ರೊ. ಅನ್ನದಾನಿ ಹಿರೇಮಠ ಮಾತನಾಡಿ, ಮುಖ್ಯವಾಗಿ ಒಬ್ಬ ಸಾಮಾನ್ಯ ಮನುಷ್ಯ ಚಿಂತಿಸುವ ಹಾಗೆ ಮದ್ಯವ್ಯಸನಿಗೆ ಆಗದು. ದೈಹಿಕ ಸಾಮರ್ಥ್ಯವೂ ಕುಂಠಿತವಾಗುತ್ತಾ ಸಾಗುತ್ತದೆ. ಕುಡಿತದಿಂದಾಗಿ ನಮ್ಮ ಆಯ್ಕೆಯ ಸಾಮರ್ಥ್ಯ, ಆಸೆ, ಕನಸುಗಳಿಗೆ ಭಂಗ ಬರುತ್ತದೆ. ನಿದ್ರಾಭಂಗ, ಭ್ರಮಾಧೀನತೆ, ಒತ್ತಡದಿಂದಾಗಿ ಅನಾರೋಗ್ಯಕರ ಜೀವನಶೈಲಿ ಪ್ರಾರಂಭವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅಕಾಲ ಮೃತ್ಯು ಎದುರಾಗುವ ಸಂಭವವಿದೆ. ಕುಡಿತದಂತಹ ದುಶ್ಚಟದ ವ್ಯಕ್ತಿಗಳಿಗೆ ಸೂಕ್ತ ತಿಳಿವಳಿಕೆ ನೀಡಿ ಅವರನ್ನು ದುಶ್ಚಟದಿಂದ ಬಿಡಿಸಲು ಶ್ರಮಿಸುವಂತೆ ಕರೆ ನೀಡಿದರು. ಪ್ರಾಚಾರ್ಯ ವೆಂಕಟೇಶ ಕಟ್ಟಿಮನಿ ಅಧ್ಯಕ್ಷತೆವಹಿಸಿದ್ದರು. ಅಂಜನಾ ಕುಬೇರ ಪ್ರಾರ್ಥಿಸಿದರು. ಪ್ರಕಾಶ ಡೊಂಗರೆ ಸ್ವಾಗತಿಸಿದರು. ಡಾ. ಎಲ್.ಆರ್. ತಟಪಟ್ಟಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

