ಗದಗ

ಎಸ್ಸೆಮ್ಮೆಸ್ ರದ್ದಿಗೆ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜು. 1
ಪಡಿತರ ಚೀಟಿ ಹೊಂದಿದ ಕುಟುಂಬ ಸದಸ್ಯರ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ನೋಂದಾಯಿಸುವ ಪದ್ಧತಿ ಅವೈಜ್ಞಾನಿಕವಾಗಿದೆ. ಇದನ್ನು ರದ್ದುಪಡಿಸಬೇಕು ಎಂದು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಜಾನು ಲಮಾಣಿ ಒತ್ತಾಯಿಸಿದರು.
ಎಸ್‌ಎಂಎಸ್ ಮೂಲಕ ನೋಂದಾಯಿಸುವ ಪದ್ಧತಿಯನ್ನು ವಿರೋಧಿಸಿ ಮಂಗಳವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಜಾನು ಲಮಾಣಿ, ದುಡಿಯುವ ಬಡ ಜನತೆಗೆ ದುಡಿಮೆ ಇಲ್ಲದೇ ಗುಳೆ ಹೋಗುವ ಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ. ಬರಗಾಲ ಛಾಯೆ ಕಾಡುತ್ತಿರುವ ಇಂಥ ಸ್ಥಿತಿಯಲ್ಲಿ ಸರ್ಕಾರ ಕೊಡುತ್ತಿರುವ ಪಡಿತರ ಅಕ್ಕಿಗಾಗಿ ಕಾದು ಕುಳಿತಿರುವ ಬಡ ಅನಕ್ಷರಸ್ಥ ಪಡಿತರ ಫಲಾನುಭವಿಗಳಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ಯೋಜನೆ ಜಾರಿಗೆ ತಂದಿರುವುದು ಪಡಿತರ ಚೀಟಿ ಕಸಿದುಕೊಳ್ಳುವ ಕುತಂತ್ರವಾಗಿದೆ ಎಂದು ದೂರಿದರು.
ಅಟಲಜೀ ಜನಸ್ನೇಹಿ ಕೇಂದ್ರದ ಮೂಲಕ ಪಡಿತರ ಚೀಟಿದಾರರ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ಕಳುಹಿಸುವ ನೆಪ ಮಾಡಿ ಬಡ ಜನರಿಂದ ಹಣ ಕಿತ್ತುಕೊಳ್ಳುವ ವ್ಯವಸ್ಥೆ ತಹಸೀಲ್ದಾರ್ ಕಚೇರಿಯಲ್ಲಿ ನಿತ್ಯ ನಡೆಯುತ್ತಿದೆ. ಇದು ಬಡವಿರೋಧಿ ನೀತಿ ಮತ್ತು ಅವೈಜ್ಞಾನಿಕ ನೀತಿಯಾಗಿದ್ದು, ತಕ್ಷಣ ಇದನ್ನು ತಡೆಯುವಲ್ಲಿ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬಡವರ ಹೋರಾಟ ಉಗ್ರರೂಪ ತಾಳುತ್ತದೆ ಎಂದು ಎಚ್ಚರಿಸಿದರು.
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ವಿವಿಧ ಯೋಜನೆಗಳಡಿ ಪಿಡಬ್ಲ್ಯುಡಿ ಇಲಾಖೆಗೆ ಕೋಟ್ಯಾಂತರ ಅನುದಾನ ಹರಿದು ಬಂದಿದ್ದು, ಗುಣಮಟ್ಟದ ಕಾಮಗಾರಿ ನಡೆಸದೇ ಹಣ ದುರ್ಬಳಕೆಯಾಗುತ್ತಿದೆ ಎಂದಿದ್ದಾರೆ. ಫೆ. 15ರಂದು ಲಂಬಾಣಿ ಜನಾಂಗದ ಧರ್ಮ ಗುರುಗಳಾದ ಶ್ರೀ ಸಂತಸೇವಾಲಾಲ ಮಹಾರಾಜರ ಹುಟ್ಟು ಹಬ್ಬದಂದು ಸರ್ಕಾರಿ ರಜೆ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಗಾಳಿ ಕೊಟ್ರೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರದ ಮತ್ತು ಮೇಲಧಿಕಾರಿಗಳ ಆದೇಶದಂತೆ ಕಾರ್ಯ ನಡೆಯುತ್ತಿದೆ. ಪ್ರತಿ ವರ್ಷಕ್ಕೊಮ್ಮೆ ಪಡಿತರ ಚೀಟಿ ನವೀಕರಿಸುವ ಪದ್ಧತಿ ಇರುವುದರಿಂದ ಈ ಬಾರಿ ಸರ್ಕಾರ ಎಸ್‌ಎಂಎಸ್ ಪದ್ಧತಿ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದು, ಇದು ಜನರಿಗೆ ತೊಂದರೆಯಾಗುತ್ತಿದೆ ಎಂಬುದು ಕೇಳಿಬರುತ್ತಿದ್ದು, ತಕ್ಷಣ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಮ್ಮ ಮನವಿ ಕಳುಹಿಸಿಕೊಡುವುದಾಗಿ ತಿಳಿಸಿದರು.
ಗುರುರಾಜ ಪಾಟೀಲ, ಪಾಂಡಪ್ಪ ಪೂಜಾರ, ತಿಪ್ಪಣ್ಣ ಲಮಾಣಿ, ಷಣ್ಮುಖ ಪೂಜಾರ, ಲಿಂಬಣ್ಣ ಲಮಾಣಿ, ದೇವಪ್ಪ ಪೂಜಾರ, ಅಶೋಕ ಬಿಂಕದಕಟ್ಟಿ, ಯಲ್ಲಪ್ಪ ಕುರಿ, ಹನುಮಂತಪ್ಪ ವಡ್ಡರ, ಎಸ್.ವಿ. ಕೊಂಚಿಗೇರಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.