ರೋಣ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ರೋಣ, ಜು. 5
ಅನಿಶ್ಚಿತ ಮಳೆ ಮತ್ತು ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ನೀರಾವರಿ ಬೆಳೆಗಳು ತೇವಾಂಶ ಕೊರತೆಯಿಂದ ಭೂಮಿಯಲ್ಲಿಯೇ ಕಮರುತ್ತಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಅರಹುಣಸಿ ಗ್ರಾಮಸ್ಥರು ಶನಿವಾರ ಪಟ್ಟಣದ ಹೆಸ್ಕಾಂ ಕಚೇರಿಗೆ ತೆರಳಿ ತಾಲೂಕು ಹೆಸ್ಕಾಂ ಎಇಇ ಪ್ರಕಾಶ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಗ್ರಾಮದ ಮಲ್ಲಿಕಾರ್ಜುನಗೌಡ ಚೌಡರಡ್ಡಿ, ಶಂಕರಗೌಡ ಗಿರಡ್ಡಿ, ಅಮರೇಶಗೌಡ ಗಾಡರಡ್ಡಿ ಮಾತನಾಡಿ, ಒಣ ಬೇಸಾಯದ ಬೆಳೆಗಳಿಗೆ ಮಳೆ ಕೊರತೆಯಿಂದ ಸಂಪೂರ್ಣ ಹಾನಿಯಾಗಿದ್ದು, ನೀರಾವರಿ ಬೆಳೆಗಳಾದರೂ ಕೈ ಹಿಡಿದಿತೂ ಎಂಬ ಆಶಾಭಾವನೆಯಿಂದ ಸಾಲ ಮಾಡಿ ಗೊಬ್ಬರ, ಬೀಜ ಖರೀದಿಸಿ ಬಿತ್ತನೆ ಮಾಡಲಾಗಿದೆ. ಬೆಳಗ್ಗೆ 4 ತಾಸು, ಮಧ್ಯರಾತ್ರಿ 3 ತಾಸು ತ್ರೀಫೇಸ್ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದ್ದು, ಇದರಿಂದ ಸಂಪೂರ್ಣ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ಸದ್ಯ 7 ತಾಸಿನಲ್ಲಿ 2 ತಾಸು ಕಡಿತ ಮಾಡಲಾಗಿದ್ದು, ಮತ್ತಷ್ಟು ತೊಂದರೆಯಾಗಿದೆ. ಮಳೆಯಾಗುವವರೆಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಬೆಳಗ್ಗೆಯಾಗಲಿ ಅಥವಾ ರಾತ್ರಿಯಾಗಲಿ ಒಂದೇ ಸಾರಿ ನಿರಂತರವಾಗಿ 7 ತಾಸು ವಿದ್ಯುತ್ ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಅಂದಾಗ ಬಿತ್ತಿದ ಬೆಳೆಯನ್ನಾದರೂ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿ ಹೆಸ್ಕಾಂ ಎಇಇ ಪ್ರಕಾಶ ಮಾತನಾಡಿ, ಮಳೆಯಾದಲ್ಲಿ ರೈತರಿಗೆ ಇದ್ಯಾವ ತಂದರೆ ಇರುವುದಿಲ್ಲ. ಸದ್ಯ ಮಳೆಯ ಕೊರತೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಕುರಿತು ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಆದಷ್ಟು ರೈತರಿಗೆ ಅನೂಕೂಲ ಕಲ್ಪಿಸುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಗ್ರಾಮದ ರೈತರಾದ ನಾಗರಾಜ ಗುದ್ನೆಪ್ಪನವರ, ಶರಣಪ್ಪ ಆರಮಣದ, ಸಂಗನಗೌಡ ಪಾಟೀಲ, ಶಿವನಗೌಡ ಕರಕನಗೌಡ್ರ, ಬಸನಗೌಡ ಪಾಟೀಲ, ಶಿವಕುಮಾರ ಕರಕನಗೌಡ್ರ, ಲಾಲಸಾಬ ಅತ್ತಾರ, ಶರಣಪ್ಪಗೌಡ ಚೌಡರಡ್ಡಿ, ಶರಣಪ್ಪ ಬಾಣಪ್ಪನವರ, ಮೈಲಾರೆಪ್ಪ ಹೊಸತೋಟದ, ಆನಂದ ಕುಂದರಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

