ನಗರದ ರೇಲ್ವೆ ನಿಲ್ದಾಣಕ್ಕೂ ಗದಗ-ಬೆಟಗೇರಿ ಹೆಸರಿಡಿ
ಕನ್ನಡಪ್ರಭ ವಾರ್ತೆ, ಗದಗ, ಜು. 7
ನಗರದಲ್ಲಿರುವ ರೇಲ್ವೆ ನಿಲ್ದಾಣಕ್ಕೆ ಗದಗ-ಬೆಟಗೇರಿ ರೇಲ್ವೆ ನಿಲ್ದಾಣವೆಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಸೋಮವಾರ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ ಹಾಗೂ ಉಪಾಧ್ಯಕ್ಷ ಕೃಷ್ಣ ಪರಾಪುರ ಅವರಿಗೆ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ಸಂಚಾಲಕ ಗಣೇಶಸಿಂಗ ಬ್ಯಾಳಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಗದಗ ನಗರದಂತೆ ಬೆಟಗೇರಿಯೂ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದು, ಈಗಾಗಲೇ ನಗರಸಭೆಗೆ ಗದಗ-ಬೆಟಗೇರಿ ನಗರಸಭೆ ಎಂದು ಹೆಸರಿಡಲಾಗಿದೆ. ಅದರಂತೆಯೇ ಗದಗ ರೇಲ್ವೆ ನಿಲ್ದಾಣಕ್ಕೂ ಗದಗ-ಬೆಟಗೇರಿ ರೇಲ್ವೆ ನಿಲ್ದಾಣ ಎಂದು ನಾಮಕರಣಗೊಳಬೇಕು.
ಈ ಕುರಿತು ಶೀಘ್ರವೇ ಸರ್ವಸದಸ್ಯರ ವಿಶೇಷ ಸಭೆಯನ್ನು ಕರೆದು ಗದಗ-ಬೆಟಗೇರಿ ರೇಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಸಭೆಯಲ್ಲಿ ಠರಾವು ಪಾಸುಮಾಡಿ ಕೇಂದ್ರ ರೇಲ್ವೆ ಸಚಿವರಿಗೆ, ರಾಜ್ಯ ಸರ್ಕಾರಕ್ಕೆ ಹಾಗೂ ಈ ಭಾಗದ ಸಂಸದರಿಗೆ ಶಿಫಾರಸು ಪತ್ರ ಕಳಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ. ಶೀಘ್ರದಲ್ಲಿಯೇ ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಗಣೇಶಸಿಂಗ ಬ್ಯಾಳಿ ತಿಳಿಸಿದರು. ಮನವಿ ಸ್ವೀಕರಿಸಿದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕೂಡಲೇ ನಗರಸಭೆಯ ವಿಶೇಷ ಸಭೆಯನ್ನು ಕರೆದು ಈ ಕುರಿತು ಸಹಕರಿಸುವುದಾಗಿ ನಗರಸಭೆ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ ಉಪಾಧ್ಯಕ್ಷ ಕೃಷ್ಣ ಪರಾಪುರ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪನ್ನಾಬಾಯಿ ಬಾಗಡೆ, ಮೇಘಾ ಮುದಗಲ್, ಚಿನ್ನಮ್ಮ ಮುಳಗುಂದ, ರಾಘು ಯಳವತ್ತಿ, ನಾಗಲಿಂಗಪ್ಪ ಐಲಿ, ಶ್ರೀನಿವಾಸ ಕರಿ, ಮಂಜುನಾಥ ಮುಳಗುಂದ, ಮಂಜುಳಾ ರಾನಡೆ, ಮಾಧವ ಗಣಾಚಾರಿ, ಹೋರಾಟ ಸಮಿತಿ ಸದಸ್ಯ ಇ.ಜಿ. ಚೋಳಿನ, ಬಿ.ಬಿ. ಗಿಡ್ನಂದಿ, ವಿ.ಇ. ಇಸಾಲಾಲ, ಎನ್.ಡಿ. ಜಗಧೋಲ, ಐ.ಕೆ. ಪಟ್ಟಣಶೆಟ್ಟಿ, ಯಲ್ಲಪ್ಪ ಕಾಂಬಳೇಕರ, ಪ್ರೇಮನಾಥ ಭಾರದ್ವಾಜ, ಜೆ.ವಿ. ಬಾಗಡೆ, ಶಿವಾಜಿಸಿಂಗ್ ಗಂಗಾವತಿ, ಎಂ.ಎಂ. ಮುಲ್ಲಾ, ಎಲ್.ಎಫ್. ವಾಲ್ಮೀಕಿ, ಎಂ.ಟಿ. ತಳವಾರ, ಎಸ್.ಎನ್. ಹಿರೇಮನಿಪಾಟೀಲ, ಕೃಷ್ಣ ರಾಯಬಾಗಿ, ಅಶೋಕ ಮುಳಗುಂದ ಮುಂತಾದವರು ಉಪಸ್ಥಿತರಿದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

