ರೈಲ್ವೆ ಮುಂಗಡ ಪತ್ರ ರಾಜ್ಯಕ್ಕೆ ಸಿಹಿ-ಕಹಿ
ಗದಗ: ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಮಂಗಳವಾರ ಮಂಡಿಸಿದ ರೈಲ್ವೆ ಮುಂಗಡ ಪತ್ರವು ದಕ್ಷಿಣ ಕರ್ನಾಟಕ ಭಾಗದ ಜನರಿಗೆ ಉತ್ತಮವಾಗಿದ್ದು ಉತ್ತರ ಕರ್ನಾಟಕದ ಪಾಲಿಗೆ ನಿರಾಶಾದಾಯಕವಾಗಿದೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಆರ್.ಯು.ಸಿ.ಸಿ. ಸದಸ್ಯರು ಹಾಗೂ ಸಂಸ್ಥೆಯ ರೈಲ್ವೆ ಉಪ ಸಮಿತಿ ಚೇರ್ಮನ್ ಜಿ.ಕೆ. ಆದಪ್ಪಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಹಳ ದಿನಗಳ ಬೇಡಿಕೆಯಾದ ಗದಗ- ಮುಂಡರಗಿ ಹಡಗಲಿ ಹರಪನಹಳ್ಳಿ ಮುಖಾಂತರ ಹೊಸ ರೈಲಿನ ಸರ್ವೇ ಕಾರ್ಯಕ್ಕೆ ಚಾಲನೆ ಹಾಗೂ ಗದಗ-ಪಂಢರಾಪುರಕ್ಕೆ ಯಾತ್ರಾ ವಿಶೇಷ ರೈಲು ಪ್ರಾರಂಭಸಿದ್ದು ಸಂತೋಷದ ವಿಷಯವಾಗಿದೆ. ಈ ಮೊದಲು ನಮ್ಮ ಭಾಗದ ಸಾಕಷ್ಟು ಬೇಡಿಕೆಗಳಾದ ಹೊಸ ರೈಲುಗಳ ಸೇವೆ ಹಾಗೂ ಮಂಜೂರಾಗಿ ನೆನೆಗುದಿಗೆ ಬಿದ್ದಂತಹ ಹೊಸ ರೈಲು ಮಾರ್ಗಗಳು ಅದರಲ್ಲೂ ವಿಶೇಷವಾಗಿ ಗದಗ-ಯಲವಗಿ, ಹುಬ್ಬಳ್ಳಿ- ಅಂಕೋಲಾ, ಗದಗ-ವಾಡಿ, ಜೋಡಿ ಮಾರ್ಗಗಳ ಕುರಿತು ಯಾವುದೇ ಪ್ರಸ್ತಾವನೆಯನ್ನು ಮಾಡದಿರುವುದು ಹಾಗೂ ಗದಗ ರೇಲ್ವೆ ನಿಲ್ದಾಣದ ಮೇಲ್ದರ್ಜೆಗೇರಿಸುವುದು ಹಾಗೂ ಸರಕು ಸಾಗಾಣಿಕೆ ಸಾಗಿಸಲು ಸುಸಜ್ಜಿತ ಗೂಡ್ಸಶೆಡ್ ಇತ್ಯಾದಿಗಳ ಬಗ್ಗೆ ಹಣಕಾಸಿನ ಪ್ರಸ್ತಾವನೆ ಮಾಡದಿರುವುದು ವಿಷಾದನೀಯ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

