ರೈಲ್ವೆ ಬಜೆಟ್: ಜಿಲ್ಲೆಗೆ ಕೊಂಚ ನೆಮ್ಮದಿ
ಕನ್ನಡಪ್ರಭ ವಾರ್ತೆ, ಗದಗ, ಜು. 8
ರೈಲ್ವೆ ಸಚಿವ ಸದಾನಂದ ಗೌಡ ಅವರು ಮಂಗಳವಾರ ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಜಿಲ್ಲೆಗೆ ಎರಡು ಹೊಸ ರೈಲು ಮಾರ್ಗಗಳನ್ನು ನೀಡಿದ್ದಾರೆ. ಅದರೊಟ್ಟಿಗೆ ಗದಗ ಮಾರ್ಗವಾಗಿ ಎರಡು ಹೊಸ ರೈಲುಗಳನ್ನು ಪ್ರಾರಂಭಿಸಿರುವುದು ಜನತೆಗೆ ಕೊಂಚ ನೆಮ್ಮದಿ ಮೂಡಿಸಿದೆ.
ಜಿಲ್ಲೆಯ ಜನರ ಬಹುದಿನದ ಬೇಡಿಕೆ ಗದಗ-ಹರಪ್ಪನಹಳ್ಳಿ ನೂತನ ರೈಲು ಮಾರ್ಗ ನಿರ್ಮಾಣ ಹಾಗೂ ಈಗಾಗಲೇ ಘೋಷಣೆ ಮಾಡಿ ಹಣ ಮೀಸಲಿಡದೇ ಇದ್ದ ಗದಗ, ಬಿಜಾಪುರ, ಸೊಲ್ಲಾಪುರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ತೆಗೆದಿಟ್ಟಿರುವುದು ಜಿಲ್ಲೆಯ ಮಟ್ಟಿಗೆ ಕೊಂಚ ನೆಮ್ಮದಿಯ ವಿಷಯವಾಗಿದೆ. ಇನ್ನು ಗದಗ-ಪಂಢರಾಪುರ ಮಧ್ಯೆ ನೂತನ ರೈಲು, ಹುಬ್ಬಳ್ಳಿ, ಗದಗ, ಬಿಜಾಪುರ ಮಾರ್ಗವಾಗಿ ಮುಂಬೈಗೆ ನೂತನ ರೈಲು ಪ್ರಾರಂಭಿಸಿದ್ದು, ಗದಗ ಮೂಲಕ ನೇರವಾಗಿ ಮುಂಬೈಗೆ ಸಂಪರ್ಕ ಸಾಧ್ಯವಾಗಿದ್ದು, ಉತ್ತರ ಭಾರತಕ್ಕೆ ಪ್ರಯಾಣ ಮಾಡುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಆಗಬೇಕಾದದ್ದು: ಘೋಷಣೆ ಮಾಡಿರುವ ಹುಬ್ಬಳ್ಳಿ-ಬಿಜಾಪುರ-ಮುಂಬೈ (ಗದಗ ಮಾರ್ಗವಾಗಿ) ವೀಕ್ಲಿ ಎಕ್ಸ್‌ಪ್ರೆಸ್ ರೈಲು ಪ್ರತಿನಿತ್ಯ ಓಡಿಸಲು ಚಿಂತನೆ ಮಾಡಬೇಕು. ಆದರೆ ಗದಗ-ಯಲವಗಿ ನೂತನ ಮಾರ್ಗ ನಿರ್ಮಾಣವಾಗಬೇಕು ಎನ್ನುವ ಬಹುದಿನದ ಬೇಡಿಕೆ ಹಾಗೆಯೇ ಉಳಿದಿದೆ, ಗುಂತಕಲ್-ಸೋಲಾಪುರ (ಗದಗ ಮಾರ್ಗವಾಗಿ) ಇಂಟರ್‌ಸಿಟಿ ರೈಲು ಆರಂಭಿಸುವುದು, ಕೊಲ್ಲಾಪುರ-ತಿರುಪತಿ ರೈಲ್‌ನ್ನು ಚೆನ್ನೈವರೆಗೆ ವಿಸ್ತರಿಸುವುದು, ಯಶವಂತಪುರ-ಶಿರಡಿ ರೈಲು ವಾರಕ್ಕೆ 3 ಬಾರಿ ಸಂಚರಿಸುವುದು, ಹೈದ್ರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಕೇಂದ್ರವಾಗಿರುವ ಗದಗ ರೈಲು ನಿಲ್ದಾಣವನ್ನು ರೇಲ್ವೆ ಮಾಜಿ ಸಚಿವೆ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದಂತೆ ವಿಶ್ವದರ್ಜೆಗೆ ಏರಿಸುವುದು, ಗದಗ ನಿಲ್ದಾಣದಲ್ಲಿ ಡೈಗ್ನೋಸ್ಟಿಕ್ ಸೆಂಟರ್ ಪ್ರಾರಂಭಿಸುವುದು, ಗದಗ-ಹಾವೇರಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಆದ್ಯತೆ ಕೊಡುವುದು ಆದ್ಯತೆ ಮೇರೆಗೆ ಆಗಬೇಕಾದವುಗಳು.
ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

