ಜಿಲ್ಲಾಧಿಕಾರಿ ಭರವಸೆಗೂ ಪಟ್ಟು ಸಡಿಲಿಸಿಲ್ಲ
ಗದಗ: ಗದಗ-ಬೆಟಗೇರಿ ವಸತಿರಹಿತರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೋಮವಾರದಿಂದ ನಡೆಸುತ್ತಿರುವ ಅನಿರ್ದಿಷ್ಟ ಧರಣಿಯು ಮಂಗಳವಾರವೂ ಮುಂದುವರಿದಿದೆ.
ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಭೇಟಿ ನೀಡಿ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಈಗಾಗಲೇ ನಗರದ ವಸತಿ ರಹಿತರಗಾಗಿ 60 ಎಕರೆ ಭೂಮಿಯನ್ನು ಗುರುತಿಸಲಾಗಿದೆ ಆದಷ್ಟು ಬೇಗನೆ ಭೂಮಿಯನ್ನು ಖರೀದಿಸಿ ವಸತಿರಹಿತರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗುವುದೆಂದು ಭರವಸೆ ನೀಡಿದರು. ಆದರೆ ಧರಣಿ ನಡೆಸುತ್ತಿರುವ ವಸತ ರಹಿತರು ಜಿಲ್ಲಾಧಿಕಾರಿಗಳ ಭರವಸೆಗಳಿಗೆ ಒಪ್ಪದೆ, 2 ವರ್ಷದಿಂದ ಅನೇಕ ಮನವಿಗಳನ್ನು ನೀಡಿದರೆ ತಾವುಗಳೂ ಕೇವಲ ಭರವಸೆಗಳನ್ನು ನೀಡುತ್ತಾ ಬಂದಿದ್ದೀರಿ, ನಮಗೆ ಭರವಸೆಗಳನ್ನು ನೀಡುವುದನ್ನು ಬಿಟ್ಟು ಅಧಿಕೃತ ಬರವಣಿಗೆ ಮೂಲಕ ವಸತಿ ರಹಿತರಿಗೆ ಮನೆಗಳನ್ನು ಹಾಗೂ ನಿವೇಶನಗಳನ್ನು ನೀಡಬೇಕು.
ನಗರದಲ್ಲಿ ವಸತಿರಹಿತರ ಹೆಸರಲ್ಲಿ 2004ರಲ್ಲಿ 330 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ನಗರ ವಾಜಪೇಯಿ ವಸತಿ ಯೋಜನೆಯಲ್ಲಿ 600 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ವಸತಿ ರಹಿತರನ್ನು ಕೈಬಿಟ್ಟು ಸ್ಥಿತಿವಂತರಿಗೆ ಹಂಚಿಕೆ ಮಾಡಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಸಭೆಯನ್ನು ಕರೆದು ಫಲಾನುಭವಿಗಳ ಮರು ಆಯ್ಕೆ ಮಾಡಿ ಮೂಲ ನಗರದಲ್ಲಿಯ ವಸತಿರಹಿತರಿಗೆ ಆದ್ಯತೆ ನೀಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜಿಲ್ಲಾಧಿಕಾರಿಗಳು ಯಾವುದೇ ನಿಖರವಾದ ಉತ್ತರವನ್ನು ನೀಡದೇ ಕಾರಣ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಮುಂದುವರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

