ಷರತ್ತು ಉಲ್ಲಂಘನೆ: ಹಲವು ನ್ಯಾಯಬೆಲೆ ಅಂಗಡಿ ರದ್ದು
ಗದಗ: ಚಿಲ್ಲರೆ ಸೀಮೆಎಣ್ಣೆ ವಿತರಕರು ಕರ್ನಾಟಕ ಅಗತ್ಯ ವಸ್ತುಗಳ (ಸಾವಿಪ) ನಿಯಂತ್ರಣ ಆದೇಶ-1992ನೇ ಕ್ಲಾಜ್-4(3)ರ ವಿಶೇಷ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಹಲವು ನ್ಯಾಯ ಬೆಲೆ ಅಂಗಡಿ, ಚಿಲ್ಲರೆ ಸೀಮೆಎಣ್ಣೆ ಅಂಗಡಿಗಳನ್ನು ಅಮಾನತುಗೊಳಿಸಲಾಗಿದೆ.
ಸರ್ಕಾರದ ಆದೇಶದನ್ವಯ ಜೂ. 7ರಂದು ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ನೋಡಲ್ ಅಧಿಕಾರಿಗಳು ಹಾಜರಿದ್ದು, ಅನ್ನಭಾಗ್ಯ ಅದಾಲತ್ಗಳನ್ನು ನಡೆಸಿ ಪಡಿತರ ಫಲಾನುಭವಿಗಳಿಗೆ ಭೇಟಿಯಾಗಿ ನ್ಯಾಯಬೆಲೆ ಅಂಗಡಿಕಾರರು, ಚಿಲ್ಲರೆ ಸೀಮೆಎಣ್ಣೆ ಅಂಗಡಿಕಾರರು ಅರ್ಹರಿಗೆ ಪಡಿತರ ಆಹಾರಧಾನ್ಯ, ಸೀಮೆಎಣ್ಣೆ ವಿತರಣೆ, ಆಹಾರಧಾನ್ಯಗಳ ಮಾರ್ಗಪಲ್ಲಟ, ತೂಕದಲ್ಲಿ ವ್ಯತ್ಯಯ, ಹೆಚ್ಚಿನ ದರ ಪಡೆಯುವುದರ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿರುತ್ತಾರೆ. ಈ ವರದಿ ಪರಿಶೀಲಿಸಿ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.
ಗದಗ ನಗರದ ಚಿಲ್ಲರೆ ಸೀಮೆಎಣ್ಣೆ ವಿತರಕರಾದ ಎ.ಎ. ಗಾಡಗೋಳಿ, ಇಬ್ರಾಹಿಂ ಬುಡನಸಾಬ ಸೂಡಿ, ಮಹ್ಮದಇಕ್ಬಾಲ್ ಕಮಲಾಪುರ ಹಾಗೂ ರೋಣ ತಾಲೂಕಿನ ಮೆಣಸಗಿ ಗ್ರಾಮದ ಚಿಲ್ಲರೆ ಸೀಮೆಎಣ್ಣೆ ವಿತರಕ ಫಕೀರಪ್ಪ ಬಸಪ್ಪ ಬಾಣದ, ನರಗುಂದ (ಕಸಬಾ)ದ ಚಿಲ್ಲರೆ ಸೀಮೆಎಣ್ಣೆ ವಿತರಕ ಅಶೋಕ ಎಲಿ, ಶಿರಹಟ್ಟಿ ತಾಲೂಕಿನ ಹೊಳೆಇಟಗಿಯ ಚಿಲ್ಲರೆ ಸೀಮೆಎಣ್ಣೆ ವಿತರಕ ಮೃತ್ಯುಂಜಯ ಹುಲ್ಲಳ್ಳಿ, ನರಗುಂದ ತಾಲೂಕಿನ ಕಣಕಿಕೊಪ್ಪ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ನ್ಯಾಯಬೆಲೆ ಅಂಗಡಿ, ಶಿರಹಟ್ಟಿ ತಾಲೂಕಿನ ಭಾವನೂರ ಗ್ರಾಮದ ಲೋಕಲ್ ಕಮಿಟಿ ನ್ಯಾಯಬೆಲೆ ಅಂಗಡಿ, ಶಿರಹಟ್ಟಿ ತಾಲೂಕಿನ ಬಿಜ್ಜೂರು (ಕೊಂಚಿಗೇರಿ) ಮಹರ್ಷಿ ವಾಲ್ಮೀಕಿ ಲೋಕಲ್ ಕಮಿಟಿ, ಬಳಗಟ್ಟಿಯ ಕಲ್ಲಗಡಗಿ ಕರಕುಶಲ ಸೇವಾ ಸಂಘದ ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

