ಗದಗ

ಸೌಹಾರ್ದದಿಂದ ಬದುಕು ಸಾರ್ಥಕ

Published On :

ರೋಣ: ಮನುಷ್ಯನಿಗೆ ಜಾತಿ, ಮತ, ಧರ್ಮ, ಶ್ರೀಮಂತಿಕೆ ಮುಖ್ಯವಲ್ಲ, ಇವುಗಳಿಂದ ನೆಮ್ಮದಿ, ಶಾಂತಿ ಹಾಳಾಗುತ್ತದೆ. ಆದ್ದರಿಂದ ಬದುಕಿನ ಸಾರ್ಥಕತೆಗೆ ಸಹಬಾಳ್ವೆ, ಸೌಹಾರ್ದ ಜೀವನ ಅತಿ ಮುಖ್ಯವಾಗಿದ್ದು, ಇದನ್ನು ಬೆಳಸಿಕೊಳ್ಳುವಲ್ಲಿ ದೇವೋಪಾಸನೆ, ಆರಾಧನೆ ಅವಶ್ಯವಾಗಿದೆ ಎಂದು ಸಿಪಿಐ ವೆಂಕಟಪ್ಪ ನಾಯಕ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಶಿವಪೇಟಿ 6ನೇ ಕ್ರಾಸ್‌ನ ಮದೀನಾ ಮಸ್ಜಿದ್ ಬಯಲು ಜಾಗೆಯಲ್ಲಿ ಸ್ಥಳೀಯ ಇಸ್ಲಾಂ ಹಿಂದ್ ಮತ್ತು ಮದೀನಾ ಮಿಲ್ಲತೆ ಇಸ್ಲಾಂ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜರುಗಿದ ಇಫ್ತಾರ್ ಕೂಟ (ಸಾಮೂಹಿಕ ರೋಜಾ ಪಾರಾಯಣ) ಕಾರ್ಯಕ್ರಮದಲ್ಲಿ ಮಾತನಾಡಿದರು.  
ಹಿಂದೂಗಳಿಗೆ ಶ್ರಾವಣ ಮಾಸವಿದ್ದಂತೆ ಮುಸ್ಲಿಂ ಬಾಂಧವರಿಗೆ ರಂಜಾನ್ ತಿಂಗಳು ಪವಿತ್ರ ಹಬ್ಬವಾಗಿದೆ. ಉಪವಾಸ ಮೂಲಕ ಮನುಷ್ಯನಲ್ಲಿ ದೇವಭಯ ಮೂಡಿ ಬರುತ್ತದೆ. ಇದೊಂದು ದೇವರ ಆರಾಧನೆ ಅಷ್ಟೇ ಆಗಿರದೇ ಪಂಚೇಂದ್ರಿಯಗಳನ್ನು ಮತ್ತು ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಡುವಂತ ಶಕ್ತಿ ಇದರಲ್ಲಿದೆ. ಧಾರ್ಮಿಕ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವಲ್ಲಿ ಹಾಗೂ ಪರಸ್ಪರ ಸೌಹಾರ್ದ ಬೆಳೆಸುವಲ್ಲಿ ಇಫ್ತಾರ್ ಕೂಟಗಳ ಸಹಕಾರಿಯಾಗುತ್ತಿವೆ ಎಂದರು.
ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ರಂಜಾನ್ ಆಚರಣೆಯಿಂದ ಆತ್ಮಶುದ್ಧಿಯಾಗುತ್ತದೆ. ಹಬ್ಬಗಳನ್ನು ಜಾತ್ಯತೀತವಾಗಿ ಆಚರಿಸಬೇಕು. ಅಂದಾಗ ಸಾಮರಸ್ಯ ಬೆಳೆಯುತ್ತದೆ ಎಂದರು.
ಕೆ.ಐ. ಶೇಖ ಮತ್ತು ಅಧ್ಯಕ್ಷತೆ ವಹಿಸಿದ್ದ ಲಾಲಸಾಬ ಕಂದಗಲ್ಲ ಮಾತನಾಡಿದರು.  ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಪುರಸಭೆ ಸದಸ್ಯರಾದ ತೋಟಪ್ಪ ನವಲಗುಂದ, ಶಫೀಕ ಮೂಗನೂರ, ಹಿರಿಯ ನ್ಯಾಯವಾದಿ ವಿ.ಆರ್. ಗುಡಿಸಾಗರ,  ಮಹ್ಮದಕಾಸಿಂಸಾಬ ಜಾಲಿಹಾಳ, ಬಸಪ್ಪ ಸಂತೋಜಿ, ಬಸಪ್ಪ ಆರೂರ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಭಾವಾಸಾಬ ಬೆಟಗೇರಿ, ಸಲೀಂ ಉಮಲಿ, ಕೆ.ಬಿ. ಹರ್ಲಾಪುರ ಉಪಸ್ಥಿತರಿದ್ದರು. ಇನಾಯತ ತರಪದಾರ ಸ್ವಾಗತಿಸಿದರು. ಪೈಜಅಹ್ಮದ್ ಕಲಾದಗಿ ನಿರೂಪಿಸಿದರು. ಸಲೀಂಅಹ್ಮದ್ ಉಮಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.