ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಜು. 17
ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಮತ್ತು ಬಜೆಟ್ ಖಂಡಿಸಿ ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಯುವಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ ಕಾರ್ಪೋರೇಟ್ ವ್ಯಕ್ತಿಗಳ ಹಾಗೂ ಉದ್ಯಮಿಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದು, ಬಡ ಹಾಗೂ ಮಧ್ಯಮ ಜನರ ಹೊಟ್ಟೆಯ ಮೇಲೆ ಬರೆ ಎಳೆದಿದೆ ಹಾಗೂ ಬಡ ಜನರಿಗೆ ಅನುಕೂಲಕರವಾಗುವ ಯಾವ ಹೊಸ ಯೋಜನೆ ಘೋಷಿಸಿಲ್ಲ ಹಾಗೂ ದೇಶದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಅನುಷ್ಠಾನದ ಬಗ್ಗೆ ಉಲ್ಲೇಖ ಮಾಡದೇ ಕೇವಲ ಶ್ರೀಮಂತ ಕೈಗಾರಿಕೋದ್ಯಮಿಗಳ ಮನಮೊಲಿಸುವ ಯತ್ನ ಮಾಡಲಾಗಿದೆ.
ಯುಪಿಎ ಸರ್ಕಾರವು 2013-14ರಲ್ಲಿ ಮಂಡಿಸಿದ ಬಜೆಟ್ ತಿದ್ದುಪಡಿ ಮಾಡಲಾಗಿದೆ. ಅಚ್ಚೆ ದಿನ್ ಆಯೇಂಗೆ, ಅಬ್ ಕೀ ಬಾರ ಮೋದಿ ಸರ್ಕಾರ್ ಎಂದು ಭಾಷಣ ಹಾಗೂ ಜಾಹೀರಾತು ಮೂಲಕ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಅಬ್ ಕೀ ಬಾರ್ ಮೆಹೇಂಗಿ ಸರ್ಕಾರ್ ಅನ್ನುತ್ತಾ ಬಡ ವರ್ಗದ ಜನರಿಗೆ ಬರೆ ಎಳೆದಿದೆ ಎಂದರು.
ಈ ಸಂದರ್ಭದಲ್ಲಿ ಗದಗ- ಬೆಟಗೇರಿ ನಗರಸಭೆಯ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ಗದಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರ, ಕೆಪಿಸಿಸಿ ಎಸ್‌ಟಿ ಘಟಕದ ಉಪಾಧ್ಯಕ್ಷ ರಾಮಣ್ಣ ಫಲದೊಡ್ಡಿ, ಕೆಪಿಸಿಸಿ ಅಲ್ಪಸಂಖ್ಯಾತರ ಜಂಟಿ ಕಾರ್ಯದರ್ಶಿಯಾದ ಉಮರ ಫಾರೂಖ ಹುಬ್ಬಳ್ಳಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಪಿಎಲ್‌ಡಿ ಬ್ಯಾಂಕ್ ಸದಸ್ಯ ಅನಿಲಕುಮಾರ ಪಾಟೀಲ, ನಗರಸಭೆ ಸದಸ್ಯರಾದ ಅನೀಲ ಶಿಂಗಟಾಲಕೇರಿ, ಶಿವಲೀಲಾ ಅಕ್ಕಿ, ಪನ್ನಾಬಾಯಿ ಬಾಗಡೆ, ವೀಣಾ ಕಟ್ನಳ್ಳಿ, ತಯೂಬ ಕುನ್ನಿಬಾಯಿ, ಗದಗ ಜಿಲ್ಲಾ ಎಸ್‌ಟಿ ಘಟಕದ ಅಧ್ಯಕ್ಷ ಮಹಾಂತೇಶ ಬೆಳದಡಿ, ಯುವ ಮುಖಂಡರಾದ ರಫೀಕ ಅಬ್ಬಿಗೇರಿ, ಕಾಶೀಮ ಕಿಲ್ಲೇದಾರ, ಚಾಂದ ಕೊಟ್ಟೂರ, ಆನಂದ ಗೌಳಿ, ಶಿವಾಜಿಸಿಂಗ ರಜಪೂತ, ಜ್ಞಾನೇಶ ಗೋಖಲೆ, ಯುಸೂಫ ಡಂಬಳ, ಸೋಮನಗೌಡ ಪಾಟೀಲ, ಸುಧೀರ ಶಿವಪುರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

