ಹೊಸ ಪಡಿತರ ಚೀಟಿ ವಿತರಣೆಗೆ ಜೈ ಭೀಮ ಸೇನಾ ಆಗ್ರಹ
ಗದಗ: ಹೊಸ ಪಡಿತರ ಚೀಟಿಯನ್ನು ತೀವ್ರಗತಿಯಲ್ಲಿ ವಿತರಿಸುವಂತೆ ಆಗ್ರಹಿಸಿ ಸೋಮವಾರ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ಗದಗ ಜಿಲ್ಲಾ ಘಟಕದ ವತಿಯಿಂದ ಆಹಾರ ಮತ್ತು ನಾಗರಿಕ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ಜೈ ಭೀಮ ಸೇನಾ ಸಮಿತಿಯ ಅಧ್ಯಕ್ಷ ಗಣೇಶ ಹುಬ್ಬಳ್ಳಿ ಮಾತನಾಡಿ, ಇಲಾಖೆಯು ಹೊಸ ಪಡಿತರ ಚೀಟಿಗೆ ಆಧಾರ ಕಾರ್ಡ್ನ್ನು ಹಾಗೂ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ಎಸ್ಎಂಎಸ್ ಮಾಡಲು ಇಲಾಖೆಯವರು ತಿಳಿಸಿರುತ್ತಾರೆ. ಆ ಪ್ರಕಾರ ಸಾರ್ವಜನಿಕರು ಎಸ್ಎಂಎಸ್ ಮಾಡಿರುತ್ತಾರೆ. ಆದರೆ, ಈವರೆಗೂ ನಮಗೆ ಹೊಸ ಪಡಿತರ ಚೀಟಿ ಬಂದಿರುವುದಿಲ್ಲ. ಈಗ ನಮಗೆ ಸರ್ಕಾರಿ ಸೌಲಭ್ಯಗಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆಗಾಗಿ, ಪಡಿತರ ಚೀಟಿ ಅವಶ್ಯವಿದ್ದು ಕಾರಣ ಆದಷ್ಟು ಬೇಗನೆ ಪಡಿತರ ಚೀಟಿ ನೀಡಬೇಕೆಂದು ಒತ್ತಾಯಿಸಲಾಯಿತು. ಅಲ್ಲದೇ ಬಿಪಿಎಲ್ ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿಗೆ ಸೀಮೆ ಎಣ್ಣೆಯನ್ನು ಸರಿಯಾಗಿ ವಿತರಣೆ ಮಾಡುತ್ತಿಲ್ಲ. ಅವರು ವಿತರಣೆ ಮಾಡುವ ದಿವಸ ಕೆಲವೊಂದು ಜನರಿಗೆ ಗೊತ್ತು ಇರುವುದಿಲ್ಲ. ಕಾರಣ ಅಧಿಕಾರಿಗಳು ಸೀಮೆ ಎಣ್ಣೆ ವಿತರಣೆಯ ದಿನಾಂಕವನ್ನು ವಿತರಿಸುವ 2 ದಿನ ಮೊದಲು ಸಾರ್ವಜನಿಕರಿಗೆ ತಿಳಿಸಲು ಕ್ರಮ ಕೈಗೊಳ್ಳಬೇಕು ಎಂದರು. ಕರವೇ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪರಾಪುರ ಎಚ್ಚರಿಸಿದರು. ಉಪಾಧ್ಯಕ್ಷ ಮಂಜುನಾಥ ತೌಜಲ, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ಮಂಜುನಾಥ ಪರಾಪುರ, ಪ್ರೇಮ ಹುಬ್ಬಳ್ಳಿ, ಹೇಮಂತ ಹುಬ್ಬಳ್ಳಿ, ಗಿರೀಶ ಬೇವಿನಕಟ್ಟಿ, ಬಸವರಾಜ ಬದಾಮಿ, ಬಾಬು ಬಳ್ಳಾರಿ, ಶ್ರೀಕಾಂತ ರಾಮಗಿರಿ, ರಾಷ್ಟ್ರೀಯನ್ ಜೋಸೇಪ್, ನಾಗರಾಜ ಕೊರಕಲ್ಲ, ಹೊನ್ನಪ್ಪ ಕೊರಕಲ್ಲ, ಪ್ರಶಾಂತ ಬಳ್ಳಾರಿ, ಉಪಸ್ಥಿತರಿದ್ದರು.
13 ಗಂಟೆ ರಾಮನಾಮ ಜಪ
ಗದಗ: ಮನುಷ್ಯನು ಲೌಕಿಕ ಜೀವನದ ಜಂಜಾಟದಲ್ಲಿ ಸಿಲುಕಿ ಭೌತಿಕ ವಸ್ತುಗಳಲ್ಲಿ ಶಾಂತಿ ಅರಸುತ್ತಿದ್ದಾನೆ. ಆದರೆ, ಕೇವಲ ಭಗವಂತನ ನಾಮಸ್ಮರಣೆಯಿಂದ ಮಾತ್ರ ಶಾಂತಿ ಸಮಾಧಾನ ಪ್ರಾಪ್ತವಾಗುತ್ತದೆ ಎಂದು ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತರು ಹೇಳಿದರು. ಅವರು ಭಾನುವಾರ ನಗರದ ವೀರನಾರಾಯಣ ಕಲ್ಯಾಣ ಮಂಟಪದಲ್ಲಿ ಜರುಗಿದ 13 ಗಂಟೆಗಳ ರಾಮತಾರಕ ಮಂತ್ರದ ಜಪದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಾವು ಲೋಭ, ಮೋಹ, ಮಾಯೆಗಳಲ್ಲಿ ಸಿಲುಕಿ ಪ್ರಪಂಚದ ವಿಷಯದಲ್ಲಿ ಪುರುಷಾರ್ಥ ಸಾಧಿಸಲು ಪ್ರಯತ್ನಿಸುತ್ತೇವೆ. ಆದರೆ, ಪರಮಾರ್ಥ ಬಂದಾಗ ಅದನ್ನು ಪ್ರಾರಬ್ಧ ಎನ್ನುತ್ತೇವೆ. ಅದರ ಬದಲಾಗಿ ನಾವು ಪುರುಷಾರ್ಥಗಳನ್ನು ಪರಮಾರ್ಥ ಸಾಧನೆಗೆ ಉಪಯೋಗಿಸಬೇಕು. ಶಾಸ್ತ್ರಗಳ ಅಧ್ಯಯನ ಹೋಮ ಹವನಗಳ ಆಚರಣೆ, ಯೋಗ ಸಾಧನೆಗಳಿಗಿಂತ ನಾಮಸ್ಮರಣೆ ಅತ್ಯಂತ ಸುಲಭ, ಸರಳ ಹಾಗೂ ಸರ್ವರೂ ಆಚರಿಸಬಹುದಾದ ಆಧ್ಯಾತ್ಮಿಕ ಸಾಧನೆಯಾಗಿದ್ದು, ಅದಕ್ಕೆ ಯಾವುದೂ ಮಡಿ, ಮೈಲಿಗೆ ಜಾತಿ, ಪಂಥಗಳ ಬೇಧ ಭಾವವಿರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ದಿನಕ್ಕೆ ಒಂದು ಗಂಟೆಯಷ್ಟಾದರೂ ರಾಮನಾಮ ಜಪ ಸಾಧನೆಗೈಯ್ದು ಬ್ರಹ್ಮಚೈತನ್ಯ ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು. ಕಲಾವತಿ ಅಲಬೂರ, ಶೇಷಣ್ಣ ಕುಲಕರ್ಣಿ, ರಮೇಶ ಕುಲಕರ್ಣಿ, ಜಾನಕಿ ರಂಗಾಪುರ, ಸಾವುಕಾರ ಸಹೋದರರು, ರೇಖಾ ಕುಲಕರ್ಣಿ, ಸುನೀಲ ತೆಂಬದಮನಿ, ರವೀಂದ್ರ ಜೋಶಿ, ರವಿ ಪೂಜಾರ, ಗೌರಕ್ಕ ಪಾಟೀಲ, ರಂಗಾಪುರ, ಸಾವಿರಾರು ಭಕ್ತರು ಜಪದಲ್ಲಿ ಪಾಲ್ಗೊಂಡಿದ್ದರು. ಜಪ ಕಾರ್ಯಕ್ರಮದ ಅಂಗವಾಗಿ ಕಾಕಡಾರತಿ, ರುದ್ರಾಭಿಷೇಕ, ಪ್ರಶ್ನೋತ್ತರ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವಿ.ಆರ್.ಕುಲಕರ್ಣಿ ಸ್ವಾಗತಿಸಿದರು. ರತ್ನಾಕರ ಭಟ್ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ವಿ.ವಿ. ಕುಲಕರ್ಣಿ ವಂದಿಸಿದರು.
ಗ್ರಾಮಾಭಿವೃದ್ಧಿಗೆ ಯೋಜನೆ ತೆಗೆದುಕೊಂಡು ಬನ್ನಿ
ಗದಗ: ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳಿವೆ. ಅವುಗಳೆಲ್ಲವನ್ನು ನಮ್ಮ ಗ್ರಾಮಕ್ಕೆ ತೆಗೆದುಕೊಂಡು ಬನ್ನಿ, ಅದರಿಂದ ಗ್ರಾಮಕ್ಕೆ ಒಳ್ಳೆಯದಾಗುವುದು ಎಂದು ಗ್ರಾಪಂ ಸದಸ್ಯ ಪ್ರಕಾಶ ಕುಲಕರ್ಣಿ ಹೇಳಿದರು. ಅವರು ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಈಚೆಗೆ ಜರುಗಿದ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ತಾಪಂಗೆ ನೂತನವಾಗಿ ಅಧ್ಯಕ್ಷೆ ಲಲಿತಾ ಅಣ್ಣಿಗೇರಿ ಅವರನ್ನು ಅಭಿನಂದಿಸಿ ಮಾತನಾಡಿದರು. ಗ್ರಾಪಂನ ನೂತನ ಅಧ್ಯಕ್ಷೆ ಕಸ್ತೂರಿಬಾಯಿ ನೀರಲಗಿ ಅವರನ್ನು ಅಭಿನಂದಿಸಿ ಮಾತನಾಡಿದ ಗ್ರಾಪಂ ಸದಸ್ಯ ಮಲ್ಲಿಕಾರ್ಜಿನ ಕಿತ್ತೂರ, ಗ್ರಾಮೀಣ ಮಹಿಳೆಯರ ಅನುಕೂಲಕ್ಕಾಗಿ ಇರುವ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಿ ಎಂದರು. ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ ನೀರಲಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ ಹರ್ಲಾಪುರ, ಸದಸ್ಯೆ ಜೈತುನಬಿ ಮೀರಾನಾಯ್ಕ, ಮಹೇಶ ನೀರಲಗಿ, ಅಶೋಕ ಮ್ಯಾಗೇರಿ, ದೇವಪ್ಪ ಬಡಿಗೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

