ಅತ್ಯಾಚಾರ ತಡೆ ವಿಫಲ: ಎಸ್ಎಫ್ಐ ಪ್ರತಿಭಟನೆ
ಗಜೇಂದ್ರಗಡ: ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಎಸ್ಎಫ್ಐ ನೇತೃತ್ವದಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ಗುರುವಾರ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಎಸ್.ಎಂ ಭೂಮರಡ್ಡಿ ಸಂಯುಕ್ತ ಪ್ರೌಢಶಾಲೆಯಿಂದ, ಮೈಸೂರು ಮಠ, ಬಸವೇಶ್ವರ ವೃತ್ತ, ದುರ್ಗಾವೃತ್ತ ಹಾಗೂ ಜೋಡು ರಸ್ತೆಯ ಮೂಲಕ ಮೆರವಣಿಗೆ ನಡೆಸಿದರು. ಬಳಿಕ ವಿಶೇಷ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಕಳಕೇಶ ಉಕ್ಕಿಸಲ, ದಾವಲಸಾಬ ತಾಳಿಕೋಟಿ, ಶಿವಾಜಿ ಗಡ್ಡದ, ಶ್ರೀಧರ ಮಲಕೋಜಿ, ಪ್ರಕಾಶ ಹೆಳವರ, ಶರಣಯ್ಯ ಸೂಗೀರಯ್ಯನಮಠ, ಬಾಲಕೃಷ್ಣ ಜಾಡಬಂಡಿ, ಕಳಕೇಶ ರಾಠೋಡ, ಅಶೋಕ ಉಕ್ಕಿಸಲ, ಮಾನವ್ವ ರಾಠೋಡ, ವಿದ್ಯಾ ಗದಗಿನಮಠ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕರವೇಯಿಂದ ಪ್ರತಿಭಟನೆ
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡಿಸಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಹಾಗೂ ಡಾ. ರಾಜಕುಮಾರ್ ಅಭಿಮಾನಿ ಬಳಗ ವತಿಯಿಂದ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟಿಸಿ ವಿಶೇಷ ತಹಸೀಲ್ದಾರ್ ಪಿ.ಬಿ. ಮೇಲಿನಮನಿಯವರಿಗೆ ಮನವಿ ಸಲ್ಲಿಸಿದರು. ಶರಣಪ್ಪ ಪೂಜಾರ, ಮುತ್ತಣ್ಣ ಲಕ್ಕಲಕಟ್ಟಿ, ಬಾಬು ಗೊಡೇಕಾರ, ಸಂಗಪ್ಪ ಯಲಬುಣಚಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

