ಬದುಕಲ್ಲಿ ಅನುಭಾವ ಮೇಳೈಸಲಿ: ಮಹಾಂತದೇವರು
ಮುಂಡರಗಿ: ದೇವಸ್ಥಾನಕ್ಕೆ ಒಂದು ಫ್ಯಾನು ಕೊಡಿಸಿ ಆ ಫ್ಯಾನು ಕಾಣದಂತೆ ಅದರ ತುಂಬ ಸಂಪೂರ್ಣವಾಗಿ ಹೆಸರು ಬರೆಸುತ್ತೇವೆ. ಇತ್ತೀಚಿನ ದಿನಗಳಲ್ಲಿ ದಾನ ಮಾಡುವವರೂ ಸಹ ಹೆಸರಿಗಾಗಿ ದಾನ ಮಾಡುತ್ತಿರುವುದು ವಿಷಾದಕರ ಸಂಗತಿಯಾಗಿದೆ. ನಾವು ಕೇವಲ ಹೆಸರಿಗಾಗಿ ನಮ್ಮ ಬದುಕನ್ನು ಕಳೆಯಲಾರದೆ ಅನುಭಾವದ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ದೆಹಲಿಯ ತೋಂಟದಾರ್ಯ ಶಾಖಾ ಮಠದ ಮಹಾಂತ ದೇವರು ಹೇಳಿದರು. ಅವರು ಗುರುವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ಜರುಗುತ್ತಿರುವ ಶರಣರ ತತ್ವ ದರ್ಶನ ಪ್ರವಚನದಲ್ಲಿ ಮಾತನಾಡುತ್ತಿದ್ದರು. ತಾಳ್ಮೆ ಮೀರಿ ಹೋದಾಗ ದೊಡ್ಡ ಅವಘಡಗಳು ಸಂಭವಿಸುತ್ತವೆ. ಆದ್ದರಿಂದ ನಾವು ಎಂದಿಗೂ ತಾಳ್ಮೆಮೀರಿ ಮಾತನಾಡಬಾರದು. ತಾಳ್ಮೆ ಮೀರುವ ಸಂದರ್ಭ ಬಂದರೆ ಅಂತಹ ಸಂದರ್ಭದಲ್ಲಿ ಬಸವಾದಿ ಶಿವಶರಣ-ಶಿವಶರಣೆಯರ ನುಡಿಮುತ್ತುಗಳನ್ನು ಕೇಳಬೇಕು. ತತ್ವ ಮತ್ತು ಪ್ರೀತಿಯನ್ನು ನಂಬಿ ತನ್ನ ಬದುಕನ್ನು ಸಾಗಿಸಿದವನು ಶರಣಗಳಂಗಳಿಗೆ ಹತ್ತಿರದವನಾಗುತ್ತಾನೆ. ನಾವು ಪರರ ಧರ್ಮವನ್ನು ಪ್ರೀತಿಸಿ ಸ್ವಧರ್ಮಕ್ಕೆ ನಿಷ್ಠರಾಗಿ ಬದುಕಬೇಕು. ಗದುಗಿನ ಜಗದ್ಗುರು ತೋಂಟದ ಸಿದ್ದಲಿಂಗ ಶ್ರೀಗಳು ಬಸವತತ್ವ ಪ್ರಚಾರಕರಿಗೆ ತಾಯಿಬೇರು ಇದ್ದಂತೆ. ಅವರೊಬ್ಬ ನಡೆದಾಡುವ ವಿಶ್ವವಿದ್ಯಾಲಯದಂತಿದ್ದಾರೆ. ಪ್ರತಿಯೊಬ್ಬರಲ್ಲಿಯೂ ತನು, ಮನ, ಭಾವ ಎನ್ನುವ ತ್ರಿಮೂರ್ತಕ ಭಾವವಿರಬೇಕು. ಇಂತಹ ಭಾವ ಬಸವಣ್ಣನವರಿಗೆ ಹಾಗೂ ಎಲ್ಲ ಬಸವಾದಿ ಶಿವಶರಣ-ಶಿವಶರಣೆಯರಿಗೆ ಹೆಚ್ಚು ಇಷ್ಟವಾಗುತ್ತದೆ ಎಂದರು.
ವಿಶ್ವ ಜನಸಂಖ್ಯಾ ದಿನಾಚರಣೆ ಇಂದು
ನರಗುಂದ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜು. 26ರಂದು ಬೆಳಗ್ಗೆ 11ಕ್ಕೆ ವಿಶ್ವ ಜನಸಂಖ್ಯಾ ದಿನಾಚರಣೆ ಆಯೋಜಿಸಲಾಗಿದೆ. ಸಮಾರಂಭಕ್ಕೆ ಶಾಸಕ ಬಿ.ಆರ್. ಯಾವಗಲ್, ಜಿಪಂ ಅಧ್ಯಕ್ಷ ಶಾಂತಾ ದಂಡಿನ, ಜಿಪಂ ಸದಸ್ಯ ಎಂ.ಎಸ್. ಪಾಟೀಲ, ತಾಪಂ ಪ್ರಭಾರ ಅಧ್ಯಕ್ಷ ಮಲ್ಲಪ್ಪ ಮೇಟಿ, ಪುರಸಭೆ ಅಧ್ಯಕ್ಷೆ ಜ್ಯೋತಿ ಪತ್ರಿ, ಉಪಾಧ್ಯಕ್ಷ ಕಿರಣ ಮುಧೋಳೆ, ಸಿ.ಎ. ವಾಳದ, ವಿಠಲ ಶಿಂದೆ, ಎಸ್.ಡಿ. ಕೊಳ್ಳಿಯವರ, ಎಫ್. ವೈ. ದೊಡ್ಡಮನಿ, ಎಂ.ಬಿ. ಅರಹುಣಶಿ, ರಾಜು ಕಲಾಲ, ಎಂ.ಎಂ. ಮುಳ್ಳೂರ, ಶ್ರೀನಿವಾಸ ಬೋನಗೇರಿ, ಸಿ.ಎಸ್.ಪಾಟೀಲ, ಡಿ.ಎಸ್. ಪಾಟೀಲ, ಡಾ. ಎಲ್.ಎಚ್. ಕರಮಡಿ, ಗುರುಪಾದಪ್ಪ ಕುರಹಟ್ಟಿ, ಜಿಲ್ಲಾ ವೈದ್ಯಾಧಿಕಾರಿ ಡಾ. ಡಿ.ಬಿ. ಚನ್ನಶಟ್ಟಿ, ಡಾ. ರೇಣುಕಾ ಕೋರನವರ, ವಿ.ಎಚ್. ಕೊತಬಾಳ, ತಾಪಂ ಅಧಿಕಾರಿ ನಂದಕುಮಾರ ಗುಂಡಾ, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಸಿಡಿಪಿಒ ಎಸ್.ಬಿ. ಮುದರಡ್ಡಿ, ಪುರಸಭೆ ಅಧಿಕಾರಿ ಎಸ್.ರಾಜಶೇಖರ, ಡಾ. ಶಶಿ ಪಾಟೀಲ, ಡಾ. ಗಿರೀಶ ಮರಡ್ಡಿ, ಡಾ. ಎಸ್.ಜಿ. ವಸ್ತ್ರದ, ಸುರೇಶ ಹೊಸಮನಿ ಭಾಗವಹಿಸವರೆಂದು ಪ್ರಕಟಣೆ ತಿಳಿಸಿದೆ.
ಶಿವಾನುಭವ ಇಂದು
ನರಗುಂದ: ಪಟ್ಟಣದ ಕಲಬುರ್ಗಿ ಶರಣಬಸವೇಶ್ವರ ದೇವಸ್ಥಾನದ ಸುಕ್ಷೇತ್ರದಲ್ಲಿ 4ನೇ ಮಾಸಿಕ ಶಿವಾನುಭವ ಜು. 26ರ ಸಂಜೆ 8 ಗಂಟೆಗೆ ಜರುಗಲಿದೆ. ಕಾರ್ಯಕ್ರಮಕ್ಕೆ ಪತ್ರಿವನಮಠದ ಗುರು ಸಿದ್ದವೀರ ಶ್ರೀಗಳು, ಬಸಯ್ಯ ಸ್ವಾಮಿಗಳು, ಎಸ್.ಬಿ. ಕುಷ್ಟಗಿ, ಶಂಕ್ರಣ್ಣ ಇಂಗಳಳ್ಳಿ, ವಿ.ಎಸ್. ಡಾಣೆ, ಡಾ. ಬಿ.ಎಂ. ಜಾಬಣ್ಣವರ, ಡಿ.ಆರ್. ಗದ್ದನಕೇರಿ, ಶ್ರೀನಿವಾಸ ಇನಾಮದಾರ, ಗೂಳಪ್ಪ ಯಳ್ಳೂರ, ಪುಂಡಲೀಕಪ್ಪ ಮಾನೆ, ವಿರೂಪಾಕ್ಷಪ್ಪ ಯಳ್ಳೂರ, ವಿಠಲ ಮಾನೆ ಭಾಗವಹಿಸಲಿದ್ದಾರೆ.
ಮಾಸಿಕ ಶಿವಾನುಭವ ಇಂದುನರಗುಂದ: ಪಟ್ಟಣ ಪಂಚಗೃಹ ಗುಡ್ಡದ ಹಿರೇಮಠದಲ್ಲಿ ಜು. 26ರ ಸಂಜೆ 6.30ಕ್ಕೆ 5ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಜರುಗಲಿದೆ. ಸಮಾರಂಭಕ್ಕೆ ಸಿದ್ಧಲಿಂಗ ಶ್ರೀಗಳು, ಅವರಾದಿ ಫಲಹಾರೇಶ್ವರ ಮಠದ ಶಿವಮೂರ್ತದೇವರು, ಎ.ಆರ್. ಪಾಟೀಲ, ಸಿ.ಎಸ್. ಪಾಟೀಲ, ಬಿ.ಎಲ್. ಪಾಟೀಲ, ರಾಘವೇಂದ್ರ ಗುಜಮಾಗಡಿ, ಎಸ್.ಎ. ಕಾಳಗಿ ಭಾಗಹಿವಸುವರು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

