ಗದಗ

ಗುಡಿಸಲು ಮುಕ್ತ ನಗರ: ಸ್ಲಂ ವಾಸಿಗಳಿಗೆ ಅಪಾಯ

Published On :

ಗದಗ: ಸರ್ಕಾರದ ಘೋಷಣೆ ಗುಡಿಸಲು ಮುಕ್ತ ನಗರ ನಿರ್ಮಾಣದಿಂದ ರಾಜ್ಯದ ಸ್ಲಂ ನಿವಾಸಿಗಳಿಗೆ ಅಪಾಯವಿದೆ ಎಂದು ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ ಹೇಳಿದರು.
ಅವರು ಭಾನುವಾರ ಸ್ಲಂ ಜನಾಂದೋಲನ-ಕರ್ನಾಟಕ, ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣೆ ಸಮಿತಿ ಆಶ್ರಯದಲ್ಲಿ ನಗರಸಭೆ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಆವಾಸ್ ಯೋಜನೆ ಕುರಿತು ಕಾರ್ಯಕರ್ತರ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಗುಡಿಸಲು ಮುಕ್ತ ನಗರ ನಿರ್ಮಾಣ ಮಾಡಲು ರಾಜೀವ್ ಆವಾಜ್ ಯೋಜನೆಯಡಿ ಸಾವಿರಾರು ಕೋಟಿ ರು. ಅನುದಾನವನ್ನು ಮಂಜೂರು ಮಾಡುತ್ತಿವೆ. ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಈ ಯೋಜನೆಯಡಿ ಅರ್ಹ ಗುಡಿಸಲು ನಿವಾಸಿಗಳನ್ನು ಗುರುತಿಸದಿದ್ದರೆ ಬಹಳಷ್ಟು ಗುಡಿಸಲ ನಿವಾಸಿಗಳು ಇಂಥ ಯೋಜನೆಗಳಿಂದ ವಂಚಿತರಾಗಿ ಕೊಳಚೆ ಪ್ರದೇಶಗಳಿಂದ ಒಕ್ಕಲೇಳುವ ಮುನ್ಸೂಚನೆ ಕಂಡುಬರುತ್ತಿದೆ ಎಂದರು. ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಸ್ಲಂ ಮಹಿಳಾ ಸಮಿತಿ ಅಧ್ಯಕ್ಷೆ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ ಮಾತನಾಡಿದರು. ಸ್ಲಂ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಕುಸಬಿ, ಶರೀಫ್ ಬಿಳೆಯಲಿ, ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಮೆಹರುನಿಸ್ಸಾ ಢಾಲಾಯತ, ನಜಮುನ್ನಿಸಾ ಮುರಗೋಡ, ಶಹಜಾನಬಿ ಕರ್ನಾಚಿ, ಇಬ್ರಾಹಿಂ ಮುಲ್ಲಾ, ಪರಶುರಾಮ ಕಾಳೆ, ಅಬೂಬಕರ ಮಕಾನದಾರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.