ಗದಗ

ಭೈರನಹಟ್ಟಿಗಿಲ್ಲ ಶುದ್ಧ ಕುಡಿವ ನೀರಿನ ಭಾಗ್ಯ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಜೂ. 1
ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಸರ್ಕಾರ ಕೋಟ್ಯಂತರ ರು. ಖರ್ಚು ಮಾಡಿ ಶುದ್ಧ ಕುಡಿವ ನೀರಿನ ಘಟಕ, ನೀರಿನ ಟ್ಯಾಂಕ್ ನಿರ್ಮಿಸಿದೆ. ಆದರೆ ಕಳೆದ ಮೂರು ವರ್ಷಗಳಿಂದ ಅವುಗಳು ಯಾವುದೇ ಉಪಯೋಗವಿಲ್ಲದೇ ಇಂದಿಗೂ ಭೈರನಹಟ್ಟಿ ಗ್ರಾಮಸ್ಥರು ಅಶುದ್ಧ ನೀರೇ ಕುಡಿವ ಪರಿಸ್ಥಿತಿ ಎದುರಿಸುವಂತಾಗಿದೆ.
ಕೋಟ್ಯಂತರ ಅನುದಾನ ಪೋಲು: ಗ್ರಾಮದಲ್ಲಿ 25 ಎಕರೆ ವಿಶಾಲ ಜಾಗೆಯಲ್ಲಿ ದೊಡ್ಡ ಕೆರೆ ಇದೆ. ಇದಕ್ಕೆ ಶುದ್ಧ ನೀರಿನ ಘಟಕ ಮತ್ತು ಬೃಹತ್ ಟ್ಯಾಂಕರ್ ನಿರ್ಮಿಸಿ ಗ್ರಾಮದ ಪ್ರತಿ ಗಲ್ಲಿಗಳಿಗೆ ಪೈಪ್‌ಲೈನ್ ಮೂಲಕ ಸ್ವಲ್ಪ ದಿನ ಕೆರೆ ನೀರು ಒದಗಿಸುವ ಪ್ರಯತ್ನ ಮಾಡಿದರು. ಬಳಿಕ ಮಳೆಯಾಗದ ಕಾರಣ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಹೀಗಾಗಿ ಗ್ರಾಮಸ್ಥರು ಪರ್ಯಾಯವಾಗಿ ಹಳೇ ಎಪಿಎಂಸಿ ಯಾರ್ಡ್‌ನಲ್ಲಿರುವ ಬೋರ್‌ವೆಲ್ ಹಾಕಿಸಿ ಇಲ್ಲಿಂದ ಭೈರನಹಟ್ಟಿ ವರೆಗೆ ಪೈಪ್‌ಲೈನ್ ಮಾಡಿ ನೀರು ಪೂರೈಕೆ ಮಾಡುವ ಯೋಜನೆ ಕೂಡ ಈ ಗ್ರಾಮಕ್ಕೆ ಉಪಯೋಗ ಆಗಲಿಲ್ಲ.
ತುಕ್ಕು ಹಿಡಿದ ಮೋಟರ್: ಮೂರು ವರ್ಷಗಳಿಂದ ಗ್ರಾಮದ ಶುದ್ಧೀಕರಣ ಘಟಕ ಬಂದ್ ಆಗಿದ್ದರಿಂದ ಈ ಘಟಕದಲ್ಲಿರುವ ಮೋಟರ್‌ಗಳು ತುಕ್ಕು ಹಿಡಿದಿವೆ. ಇನ್ನು ಶುದ್ಧೀಕರಣ ಘಟಕ ಮತ್ತು ನೀರಿನ ಬೃಹತ್ ಟ್ಯಾಂಕ್‌ಗಳು ನೀರು ಪೂರೈಕೆ ಇಲ್ಲದ್ದರಿಂದ ಸಿಮೆಂಟ್ ಉದುರಿ ಬೀಳುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಆಗಿದ್ದರಿಂದ ಎಲ್ಲ ಪೈಪುಗಳು ಹಾಳಾಗಿವೆ. ಅದಕ್ಕೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನವನ್ನು ಮೂರು ವರ್ಷಗಳಿಂದ ಮಾಡುತ್ತಲೆ ಇದ್ದಾರೆ.
ಬೋರ್‌ನಲ್ಲಿ ಜಾಲಿ ಕಂಟಿ: ನರಗುಂದ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಲಕ್ಷಾಂತರ ರು. ಖರ್ಚು ಮಾಡಿ ಬೋರ್‌ವೆಲ್ ಕೊರೆಯಿಸಿಸಲಾಗಿದೆ. ಆದರೆ ಗ್ರಾಪಂ ಅದನ್ನು ಸೂಕ್ತವಾಗಿ ಬಳಸಿಕೊಳ್ಳದ ಕಾರಣ ಬೋರ್‌ವೆಲ್ ಸುತ್ತಲೂ ಜಾಲಿಕಂಟಿ ಬೆಳೆದು ನಿಂತಿದೆ. ಅಲ್ಲದೇ ಬೋರ್‌ವೆಲ್‌ಗೆ ಸಂಬಂಧಿಸಿದ ವಸ್ತುಗಳನ್ನು ಕಳ್ಳರ ಪಾಲಾಗಿವೆ.
ಜಿಪಂ ಸದಸ್ಯರ ಗ್ರಾಮ: ಗ್ರಾಮದ ಜನರಿಗೆ ಮೂರು ವರ್ಷದಿಂದ ಶುದ್ಧ ಕುಡಿಯುವ ನೀರು ಇಲ್ಲದಿರುವ ಬಗ್ಗೆ ಗ್ರಾಮದ ಜಿಪಂ ಸದಸ್ಯರು ಯಾಕೆ ಗಮನ ಹರಿಸುತ್ತಿಲ್ಲ ಎಂಬುದು ತಿಳಿಯದಾಗಿದೆ. ಪ್ರತಿ ವರ್ಷ ಜಿಪಂನಲ್ಲಿ ಲಕ್ಷಾಂತರ ಅನುದಾನ ಜಿಪಂನಲ್ಲಿ ಮೀಸಲಿದ್ದರೂ ಅದನ್ನು ಈ ಗ್ರಾಮಕ್ಕೆ ತಂದು ಜನರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ.

ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.