ಕಾರ್ಮಿಕರ ಕೈ ಮೇಲಾಗಲಿ: ಡಾ. ಶರ್ಮಾ
ಗದಗ: ಸರ್ವರಿಗೂ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮಾನತೆ ಲಭಿಸಿ, ವಿಶ್ವದಲ್ಲಿ ದುಡಿಯುವ ವರ್ಗದ ಕೈ ಮೇಲಾಗಬೇಕೆಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ರಾಜ್ಯಾಧ್ಯಕ್ಷ ಡಾ. ಕೆ.ಎಸ್. ಶರ್ಮಾ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಕರ್ನಾಟಕ ನೌಕರರ ಮಹಾಮಂಡಳ, ಕರ್ನಾಟಕ ರಕ್ಷಣಾ ವೇದಿಕೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜ್ಞಾನ ಪ್ರಸಾರ ಕೇಂದ್ರ ಸಮಿತಿ, ಶಿವಬಸವ ಜನಕಲ್ಯಾಣ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಮುಖಂಡ ವೆಂಕಟೇಶ ದಾಸರ 50ನೇ ಜನ್ಮದಿನಾಚರಣೆ, ವಾ.ಕ.ರಾ.ರ. ಸಾರಿಗೆ ಸಂಸ್ಥೆ ಗದಗ ವಿಭಾಗದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎನ್.ಎಚ್. ಕಳಸಣ್ಣವರ, ಜಿ.ಡಿ. ಅತ್ತಾರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು, ಕಾರ್ಮಿಕರು ಸರ್ಕಾರ, ಹಲವು ಪಕ್ಷಗಳ ಆಸೆ-ಆಮಿಷಕ್ಕೆ ಒಳಗಾಗದೆ ಪ್ರಜಾಪ್ರಭುತ್ವದ ಘನತೆ ಎತ್ತಿ ಹಿಡಿಯಬೇಕಾಗಿದೆ. ತಮ್ಮ ಸೇವಾ ಅವಧಿಯಲ್ಲಿ ಕಷ್ಟ, ಸಮಸ್ಯೆಗಳನ್ನು ಎದುರಿಸಿ ನಿವೃತ್ತರಾದ ಕೆ.ಎಸ್.ಆರ್.ಟಿ.ಸಿ. ನೌಕರರಿಗೆ ಪಿಂಚಣಿ ಸಿಗದಿರುವುದು ಖೇದಕರ. ಮನುಷ್ಯನಿಗೆ ನಿವೃತ್ತಿ ಇರಬಾರದು. ಶರೀರದಲ್ಲಿ ಶಕ್ತಿ ಇರುವವರೆಗೂ ಸಾಮಾಜಿಕ ಸೇವೆ ಮಾಡುವ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಮಿಕ ವರ್ಗದ ಪರಿಶ್ರಮ ಅವರ ಸೇವೆ ಬಣ್ಣಿಸಿದ ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ಕಾರ್ಮಿಕ ಧುರೀಣ ವೆಂಕಟೇಶ ದಾಸರ ನಾಯಕತ್ವ ಗುಣಗಳನ್ನು ಶ್ಲಾಘಿಸಿದರು. ವೆಂಕಟೇಶ ದಾಸರ ಅವರನ್ನು ಸನ್ಮಾನಿಸಲಾಯಿತು. ಸಾನ್ನಿಧ್ಯ ವಹಿಸಿದ್ದ ಕಪೋತಗಿರಿ ನಂದಿವೇರಿಮಠದ ಶಿವಕುಮಾರ ಶ್ರೀ ಆಶೀರ್ವಚನ ನೀಡಿ, ದೇಶದಲ್ಲಿ ಕಾರ್ಮಿಕ ವರ್ಗಕ್ಕೆ ತನ್ನದೆ ಘನತೆ, ಗೌರವವಿದೆ. ಎಲ್ಲಿ ಯಾವ ದೇಶದಲ್ಲಿ ಕಾರ್ಮಿಕ ವರ್ಗವನ್ನು ಅಲಕ್ಷಿಸಲಾಗಿದೆಯೋ ಅಲ್ಲಿ ಅಭಿವೃದ್ಧಿಯಾಗಲ್ಲ ಎಂದರು.
ವಿ.ಎಂ. ಕನಕೇರಿ, ವಿ.ಎಲ್. ಬೇಲೂರ, ನಗರಸಭೆ ಸದಸ್ಯ ಸುರೇಶ ಕಟ್ಟಿಮನಿ, ಸಂಗಣ್ಣ ಬಂಗಾರಶೆಟ್ಟರ, ಈಶಣ್ಣ ಮುನವಳ್ಳಿ, ಸತೀಶ ಮುದಗಲ್ಲ, ವೆಂಕಟೇಶ ಕುಲಕರ್ಣಿ, ವಿದ್ಯಾಧರ ದೊಡ್ಡಮನಿ, ಜಿ.ಟಿ. ಕುಲಕರ್ಣಿ, ಸಿ.ಜಿ.ಬಿ. ಹಿರೇಮಠ, ಪಿ. ಸುಬ್ರಹ್ಮಣ್ಯಂ ರೆಡ್ಡಿ, ಅಶೋಕ ಜವಳಿ, ಎಸ್.ಎಸ್. ರಡ್ಡೇರ, ಹಾಲಪ್ಪ ಚನ್ನದಾಸರ, ಜಿ.ಜಿ. ಬನ್ನೂರ ಇದ್ದರು.
ಸಂತೋಷ ಕುಲಕರ್ಣಿ ಪ್ರಾಸ್ತಾವಿಕಮಾತನಾಡಿದರು. ಹಿರಿಯ ಕಾರ್ಮಿಕ ಮುಖಂಡ ಡಾ. ಕೆ.ಎಸ್. ಶರ್ಮಾ, ಅಂತರಾಷ್ಟ್ರೀಯ ಕರಾಟೆ ಪಟು ಬಸವರಾಜ ಹೊಂಬಾಳಿ ಅವರನ್ನು ಸನ್ಮಾನಿಸಲಾಯಿತು. ಜಗನ್ನಾಥ ಕಲಬುರ್ಗಿ ಸಂಗಡಿಗರು ಪ್ರಾರ್ಥಿಸಿದರು. ಬಸವಣ್ಣೆಯ್ಯ ಹಿರೇಮಠ ಸ್ವಾಗತಿಸಿ,. ಎಸ್.ಕೆ. ಅಯ್ಯನಗೌಡ್ರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

