ಗದಗ

ಚುಟುಕು ಸಾಹಿತ್ಯ ರಚನೆಗೆ ಸ್ವ-ಅನುಭವ ಮುಖ್ಯ: ಬಡಿಗೇರ

Published On :

ಶಿರಹಟ್ಟಿ: ಚುಟುಕು ಸಾಹಿತ್ಯ ರಚನಾಕಾರ ಭಾಷೆ. ಜ್ಞಾನ, ವಿಡಂಬನಾತ್ಮಕ ಶಕ್ತಿ ಹಾಗೂ ಅಭಿವ್ಯಕ್ತಿ ಈ ಮೂರು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಾಹಿತ್ಯ ರಚನೆ ಮಾಡಿದರೆ ಮಾತ್ರ ಜನಮನ್ನಣೆ ಪಡೆಯಲು ಸಾಧ್ಯ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ವಿ. ಬಡಿಗೇರ ಹೇಳಿದರು.
ಭಾನುವಾರ ಪಟ್ಟಣದ ಬಡಿಗೇರ ಓಣಿಯ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಆವರಣದಲ್ಲಿ ಎಫ್.ಎಂ. ಡಬಾಲಿ ಪದವಿಪೂರ್ವ ವಿದ್ಯಾಲಯದ ನಿವೃತ್ತ ಉಪನ್ಯಾಸಕ ಅಲ್ಲಮಪ್ರಭು ಛಬ್ಬಿ ರಚಿಸಿದ ಚುಟುಕು, ಕವನ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಕೆ.ಎಚ್. ಬೇಲೂರ, ಚುಟುಕು ವಡ ಕವನಗಳ ಪುಸ್ತಕ ರಚಿಸಿದ ನಿವೃತ್ತ ಉಪನ್ಯಾಸಕ ಅಲ್ಲಮಪ್ರಭು ಛಬ್ಬಿ, ಆರ್.ಬಿ. ಕಮತ ಮಾತನಾಡಿದರು. ಎನ್.ಆರ್. ಕುಲಕರ್ಣಿ, ಬಸವಣ್ಣೆಪ್ಪ ತುಳಿ, ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ, ಎಸ್.ಐ. ದೇಸಾಯಿಪಟ್ಟಿ, ಎಫ್.ಎಸ್. ಅಕ್ಕಿ, ವೈ.ಬಿ. ಮೇಗೂರ, ಎಚ್.ಎಚ್. ಖಾಜಿ, ಜಿ.ಬಿ. ಚನ್ನವೀರಶೆಟ್ಟರ, ಕಲ್ಲಪ್ಪನವರ, ಎನ್.ಎಸ್. ನಂದಗಾವಿ, ಸುರೇಶ ಹವಳದ, ಮಹಾಂತೇಶ ಪವಾಡಶೆಟ್ಟರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.