ಗದಗ

ಬಳಗಾನೂರಲ್ಲಿ ಅಸ್ತಮಾ ರೋಗಿಗಳಿಗೆ ಔಷಧ ವಿತರಣೆ

Published On :

ಗದಗ: ತಾಲೂಕಿನ ಬಳಗಾನೂರ ಗ್ರಾಮದಲ್ಲಿರುವ ಚಿಕ್ಕೇನಕೊಪ್ಪದ ಚನ್ನವೀರಶರಣರ ಮಠದಲ್ಲಿ ಭಾನುವಾರ ಅಸ್ತಮಾ ಹಾಗೂ ಸರ್ವ ರೋಗಿಗಳಿಗೆ ಉಚಿತ ಆಯುರ್ವೇದ ಔಷಧ ವಿತರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಶಿವಶಾಂತ ವೀರ ಶರಣರು ಆಶೀರ್ವಚನ ನೀಡಿ, ರೋಗ ಬಂದಾಗ ಸೂಕ್ತ ಸಲಹೆ ಚಿಕಿತ್ಸೆ ಮತ್ತು ಔಷಧ ಪಡೆದು ಹಿತಮಿತವಾದ ನಿಯಮ ಪಾಲನೆ ಅಗತ್ಯ. ಇಲ್ಲವಾದಲ್ಲಿ ರೋಗ ಉಲ್ಬಣಗೊಂಡು ವೈಪರಿತ್ಯಗಳಾಗುವ ಸಾಧ್ಯತೆ ಹೆಚ್ಚಾಗುವುದು. ಈಗ ನೀರು ಶುದ್ಧೀಕರಿಸುವ ಯಂತ್ರಗಳು ಹಾಗೂ ಶುದ್ಧ ನೀರಿನ ಘಟಕಗಳು ಲಭ್ಯಗಳಿವೆ. ಅವುಗಳ ಸದುಪಯೋಗಪಡಿಸಿಕೊಂಡು ಮುಂಜಾಗೃತೆ ವಹಿಸಿ ರೋಗ ನಿಯಂತ್ರಿಸಬಹುದು. ಆಯುರ್ವೇದದಲ್ಲಿ ಶಾಶ್ವತ ಪರಿಹಾರವಿದೆ. ಆದರೆ, ಫಲಶೃತಿ ನಿಧಾನವಾಗಿರುವುದು. ಅನೇಕ ಸಂತ ಮಹಾಂತರು ಮಠಗಳು ಆಯುರ್ವೇದ ಔಷಧಗಳನ್ನು ಫಲಾನುಭವಿಗಳಿಗೆ ನೀಡಿ ಅನೇಕ ರೋಗಿಗಳನ್ನು ಗುಣಮುಖರಾಗಿ ಮಾಡಿರುವುದು ಶಿಕ್ಷಣ, ಅನ್ನದಾಸೋಹ, ಧರ್ಮಪ್ರಚಾರದ ಜತೆಗೆ ಆಯುರ್ವೇದದ ದಾಸೋಹ ಮಾಡಿರುವುರು. ಆ ದೆಸೆಯಲ್ಲಿ ಕೊಪ್ಪಳ ಗವಿಮಠದ ಮರಿಶಾಂತವೀರ ಶ್ರೀಗಳು, ಡಾ. ಸಂಗಣ್ಣ ದೊಡ್ಡಮನಿ ಅವರ 25 ವರ್ಷಗಳ ವೈದ್ಯಕೀಯ ಸೇವೆಯನ್ನು ಶಾಂತವೀರ ಶ್ರೀಗಳು ಪ್ರಶಂಸಿಸಿದರು.
ಶಿಬಿರ ಉದ್ಘಾಟಿಸಿದ ಜಿಲ್ಲಾ ಆಯುಷ ಅಧಿಕಾರಿ ಡಾ. ಬಿ.ಜಿ. ಪಾಟೀಲ ಮಾತನಾಡಿದರು.
ಡಾ. ಎಂ.ಎಸ್. ಉಪ್ಪಿನ, ಅಶೋಕ ಮತ್ತಿಕಟ್ಟಿ, ಎಸ್.ಆರ್. ಮಡಿವಾಳರ, ಎಂ.ಎಚ್. ದೊಡ್ಡಮನಿ, ಎಂ.ಎ. ಹಾದಿಮನಿ ಅವರು ರೋಗಿಗಳನ್ನು ತಪಾಸಿಸಿ ಉಚಿತ ಔಷಧ ವಿತರಿಸಿದರು. ಎಪಿಎಂಸಿ ಮಾಜಿ ಸದಸ್ಯ ಎಂ.ಬಿ. ಕಾಶಿಗೌಡ್ರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.