ಗದಗ

ಸಲಹೆ ಪಾಲಿಸಿದರೆ ಸಾಂಕ್ರಾಮಿಕ ರೋಗ ನಿಯಂತ್ರಣ

Published On :

ಗದಗ: ರಾಜ್ಯದಲ್ಲಿ ಮಲೇರಿಯಾ, ಪಿವಿ, ಪಿಫ್ ಹಾಗೂ ಚಿಕ್ಯೂನ್ ಗೂನ್ಯಾ, ಡೆಂಘೀ ಜ್ವರ ಸಮಸ್ಯೆ ನೀವಾರಣೆಗೆ ಆರೋಗ್ಯ ಇಲಾಖೆ ನೀಡುವಂತಹ ಸಲಹೆಯನ್ನು ಸಮುದಾಯವು ಪಾಲಿಸಿದರೆ ಸೊಳ್ಳೆಗಳಿಂದ ಬರುವ ರೋಗಳನ್ನು ನಿಯಂತ್ರಿಸಬಹುದು ಎಂದು ಜಿಲ್ಲಾ ಕೀಟ ಜನ್ಯ ತಂತ್ರಜ್ಞ ಸಿ.ಬಿ. ಹಿರೇಗೌಡರ ಹೇಳಿದರು.
ಇತ್ತೀಚೆಗೆ ಅಡವಿಸೋಮಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಡವಿಸೋಮಾಪುರ ಸಣ್ಣ ತಾಂಡಾದಲ್ಲಿ ಜಿಪಂ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಗದಗ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ, ಗ್ರಾಪಂ ಅಡವಿಸೋಮಾಪುರ, ಸರ್ಕಾರಿ ಪ್ರಾಥಮಿಕ ಶಾಲೆ ಅಡವಿಸೋಮಾಪುರ ಸಣ್ಣತಾಂಡಾ ಆಶ್ರಯದಲ್ಲಿ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚಾರಣೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ಆರೋಗ್ಯ ಸಹಾಯಕ ಆರ್.ವಿ. ಕುಪ್ಪಸ್ತದ, ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಡಿ.ಎಚ್. ಮಲ್ಲೇಶಿ, ಎಪಿಡಾಮಲಿಸ್ಟ್ ಡಾ. ರವಿ ಕಡಗಾವಿ ಹಾಗೂ ಜಿಲ್ಲಾ ಎಚ್.ಎಸ್. ಅಧಿಕಾರಿ ಸೂಫಿಯಾನ್, ಆರೋಗ್ಯ ಸಹಾಯಕ ರವಿ ಬಾಪೂರೆ ಹಾಗೂ ಬಿ.ಎಚ್. ಕುಲಕರ್ಣಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಸೋಮಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ಧರ್ಮಣ್ಣ ರಾಠೋಡ, ಗೋಪಣ್ಣ ಲಮಾಣಿ, ಎಸ್.ಎನ್. ಲಿಂಗದಾಳ, ಲಕ್ಷ್ಮಣ ಲಮಾಣಿ, ಎಂ.ಎನ್. ದಂಡಿನ, ಮಂಜುಳಾ ಆರಿ, ಶಿದ್ಧಲಿಂಗೇಶ ಕವಳಿಕಾಯಿ, ಲಕ್ಷ್ಮಣ ಗಬ್ಬೂರ, ಬಿ.ಎಚ್. ಕುಲಕರ್ಣಿ, ತುಕಾರಾಮ ಹುಲಗಣಣವರ. ಶಿಕ್ಷಕಿ ಹೂವಿನಹಳ್ಳಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.