ಗದಗ

ಬದುಕಿದ್ದರೂ ಸಾಯಿಸಿ ಮಾಸಾಶನ ರದ್ದು: ಪ್ರತಿಭಟನೆ

Published On :

ರೋಣ: ವಿವಿಧ ಮಾಶಾಸನ ಫಲಾನುಭವಿಗಳು ಜೀವಂತವಿದ್ದರೂ ಸತ್ತಿದ್ದಾರೆ ಎಂದು ಕಂದಾಯ ಮತ್ತು ಅಂಚೆ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಸೃಷ್ಟಿಸಿ ಅರ್ಹರ ಮಾಶಾಸನ ರದ್ದಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕು ಕರವೇ ನೇತೃತ್ವದಲ್ಲಿ ತಾಲೂಕಿನ ಕೊಡಗಾನೂರು ಗ್ರಾಮದ ಸುಮಾರು 35ಕ್ಕೂ ಹೆಚ್ಚು ಮಾಸಾಶನ ವಂಚಿತ ಫಲಾನುಭವಿಗಳು ಬುಧವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕರವೇ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ, ಗ್ರಾಮ ಘಟಕ ಅಧ್ಯಕ್ಷ ರಾಚಯ್ಯ ಬಾಳಿಕಾಯಿಮಠ ಮಾತನಾಡಿ, ಅಂಗವೀಕಲ, ವಿಧವಾ ಮತ್ತು ವೃದ್ದಾಪ್ಯ ಕೊಡಗಾನೂರು ಗ್ರಾಮದ ಸುಮಾರು 35ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳ ವೇತನ ಕಳೆದ ಫೆಬ್ರವರಿಯಿಂದ ಈವರೆಗೂ ವಿತರಣೆಯಾಗಿಲ್ಲ. ಈ ವಿಳಂಬ ಕುರಿತು ಫಲಾನುಭವಿಗಳು ಗ್ರಾಮದ ಅಂಚೆ ಕಚೇರಿಯಲ್ಲಿ ವಿಚಾರಿಸಲಾಗಿ, ದಾಖಲೆಯಲ್ಲಿ ನೀವುಗಳು ಪೋತಿಯಾಗಿದೆ ಎಂದಿದೆ. ಆದ್ದರಿಂದ ನಿಮಗೆ ಮಾಸಾಶನ ಬಿಡುಗಡೆಯಾಗುತ್ತಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ತಾಲೂಕು ಪ್ರತ್ರಾಂಕಿತ ಖಜಾಂಚೆ ಇಲಾಖೆ ಅಧಿಕಾರಿಗಳು ವಿತರಿಸಿದಲ್ಲಿ ನಾವೇನು ಮಾಡುವುದು ಕಂದಾಯ ಮತ್ತು ಅಂಚೆ ಇಲಾಖೆಯವರು ಯಾವ ರೀತಿಯಾಗಿ ನಮಗೆ ದಾಖಲೆ ನೀಡುತ್ತಾರೋ, ಅದೇ ರೀತಿ ವೇತನ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ವಿಪರ್ಯಾಸವೆಂದರೆ ದಾಖಲೆಯಲ್ಲಿ ನಮೂದಿಯಾದ ಹೆಸರುಗಳ ಪೈಕಿ ಯಾರೊಬ್ಬರು ಸತ್ತಿಲ್ಲ. ಎಲ್ಲರೂ ಜೀವಂತವಾಗಿದ್ದು, ಇಂದು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸುತ್ತಿದ್ದಾರೆ. ಬದುಕಿದ್ದವರನ್ನು ಸಾಯಿಸಿ ಸರ್ಕಾರಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ. ಬಡವರಿಗೆ ತಲುಪಬೇಕಾದ ಯೋಜನೆ ದಾರಿ ತಪ್ಪುತ್ತಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ.
ಎಚ್ಚರಿಕೆ: ಕೊಡಗಾನೂರು ಗ್ರಾಮ ಸೇರಿದಂತೆ ತಾಲೂಕಿನಲ್ಲಿ ಸುಮಾರು 600ಕ್ಕೂ ಹೆಚ್ಚು ಅರ್ಹ ಫಲಾನುಭವಿಗಳು ಜೀವಂತವಿದ್ದರೂ ಸತ್ತಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ದಾಖಲೆ ಸೃಷ್ಟಿಸಿ ವೇತನದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಈ ಕುರಿತು ಕೂಡಲೇ ತಹಸೀಲ್ದಾರ್‌ರು ಎಚ್ಚೆತ್ತು ಇಂಥ ಅವಘಡಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಮತ್ತು ಮಾಸಾಶನದಿಂದ ವಂಚಿತರಾದ ಅರ್ಹರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜುಲೈ 1ರೊಳಗೆ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ವಂಚಿತ ಫಲಾನುಭವಿಗಳೊಂದಿಗೆ ಕರವೇ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಸಿದರು. ವೃದ್ಧರಾದ ಮುದಕವ್ವ ಹರಿಜನ, ನಿಂಗಮ್ಮ ಪೂಜಾರ, ಕಳಕಮ್ಮ ಹೂಗಾರ ಪ್ರತಿಭಟನಾ ಸ್ಥಳದಲ್ಲಿಯೇ ಕಣ್ಣೀರು ಹಾಕಿದರು. ಮಾಶಾಸನ ವಂಚಿತ ಬಸಮ್ಮ ತೋಟದ, ಪಾರ್ವತೆಮ್ಮ ಪೂಜಾರ, ಶರಣಪ್ಪ ಬಂಡಿ, ಅಂದಯ್ಯ ಅಂಗಡಿ, ಹುಸೇನಸಾಬ್ ನದಾಫ್, ಸೆಂಡೂರಪ್ಪ ತಳವಾರ, ಹನುಮಂತಪ್ಪ ಹೂಗಾರ, ರಾಮಚಂದ್ರಪ್ಪ ಮಡಿವಾಳರ, ನಾಗವ್ವ ತಳವಾರ, ಅಂದಪ್ಪ ನಡಕಟ್ಟಿನ, ನಿಂಗಮ್ಮ ಪೂಜಾರ, ಈರವ್ವ ಪೂಜಾರ, ವಿಜಯಲಕ್ಷ್ಮೀ ಬೇವಿನಕಟ್ಟಿ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.