ಸಂಕನೂರ ಗೆಲವು ನಿಶ್ಚಿತ: ವೆಂಕಟೇಶ ದಾಸರ
ಗದಗ: ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡು ಪದವೀಧರರ ಏಳ್ಗೆಯನ್ನು ಸದಾ ಬಯಸುತ್ತಿರುವ ಪಶ್ಚಿಮ ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ವಿ. ಸಂಕನೂರ ಅವರ ಗೆಲವು ನಿಶ್ಚಿತವೆಂದು ಅನಿಲ ಮೆಣಸಿನಕಾಯಿ ಸ್ನೇಹ ಬಳಗದ ವೆಂಕಟೇಶ ದಾಸರ ಹೇಳಿದರು.
ಅವರು ಗದಗ ತಾಲೂಕು ಚಿಕ್ಕಹಂದಿಗೋಳ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯ ಪದವೀಧರರ ಮತದಾರನ್ನು ಭೇಟಿಯಾಗಿ ಅವರನ್ನು ಉದ್ದೇಶಿಸಿ ಮಾತನಾಡಿದರು. ಕಳೆದ ಒಂದು ವಾರದಿಂದ ಗದಗ, ಹುಬ್ಬಳ್ಳಿ, ಧಾರವಾಡ, ಕಾರವಾರ ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ, ಅರೆ ಸರ್ಕಾರಿ, ಕಾರ್ಯಾಲಯಗಳ ಪದವೀಧರರನ್ನು ಭೇಟಿಯಾಗಿ ಮತಯಾಚನೆ ಮಾಡಿದ ಸಂದರ್ಭ ಪದವೀಧರರ ಮತದಾರರು ಸಂಕನೂರ ಅವರ ಕಡೆಗೆ ಚಿತ್ತಹರಿಸಿದ್ದಾರೆ ಎಂದರು.
ಬಸವಣ್ಣೆಯ್ಯ ಹಿರೇಮಠ, ವೆಂಕಟೇಶ ಬೇಲೂರು, ಪ್ರೌಢಶಾಲೆ ಮುಖ್ಯಾಧ್ಯಾಪಕ ಆರ್.ವಿ. ಗೊಂಡಬಾಳ, ಶಿಕ್ಷಕ ಎಸ್.ಎಸ್. ಮಡಿವಾಳರ, ಜೆ.ಸಿ. ನರೇಗಲ್ಲಮಠ, ಎಂ.ಡಿ. ನದಾಫ್, ಯು.ಎಸ್. ಕಮಗೊಳಿ, ಎಸ್.ಎಲ್. ರಾಠೋಡ, ಬಿ.ಕೆ. ಜೆಲಗಿ, ಜಿ.ಪಿ. ಬೆಂತೂರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

