ಗದಗ

ಪಶ್ಚಿಮ ಪದವೀಧರ ಕ್ಷೇತ್ರ: ರೋಣ ಶೇ. 66.73 ಮತದಾನ

Published On :

ರೋಣ: ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆಗೆ ಶುಕ್ರವಾರ ಮತದಾನ ಜರುಗಿದ್ದು, ರೋಣ ತಾಲೂಕಿನಲ್ಲಿ ಶೇ. 66.73ರಷ್ಟು ಮತದಾನವಾಗಿದೆ. ತಾಲೂಕಿನಲ್ಲಿ ಒಟ್ಟು 3279 ಮತಗಳಲ್ಲಿ 2188 ಮತದಾನವಾಗಿದೆ. ಬೆಳಗ್ಗೆ 8ಕ್ಕೆ ಪ್ರಾರಂಭವಾದ ಮತದಾನ ಸಂಜೆ 4ರ ವರೆಗೆ ಜರುಗಿತು. ಬೆಳಗ್ಗೆ ನಿಧಾನಗತಿಯಲ್ಲಿ ಪ್ರಾರಂಭವಾದ ಮತದಾನ ಕಾರ್ಯ ಮಧ್ಯಾಹ್ನ 12ರ ವೇಳೆಗೆ ತುರುಸಿನಿಂದ ಕೂಡಿತ್ತು. ಮತದಾರರು ಸರದಿ ಸಾಲಲ್ಲಿ ನಿಂತು ಶಾಂತಯುತವಾಗಿ ಮತದಾನ ಮಾಡಿದರು. ಮತದಾನ ವೇಳೆ ರೋಣ ಪಟ್ಟಣದಲ್ಲಿನ ಹಳೇ ತಹಸೀಲ್ದಾರ್ ಕಚೇರಿಯಲ್ಲಿನ ಮತಗಟ್ಟೆಗೆ ಸಹಾಯಕ ಚುನಾವಣೆ ಅಧಿಕಾರಿ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮತ್ತು ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ರಮೇಶ ದೇಸಾಯಿ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ಎ.ಜಿ. ಪಂಡಿತ ಇದ್ದರು.
ಮುಂಡರಗಿ: ಶಾಂತಿಯುತಮತದಾನ
ಮುಂಡರಗಿ: ಪಶ್ಚಿಮ ಪದವೀಧರ ಕ್ಷೇತ್ರ ಮತದಾನವು ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ಮುಂಡರಗಿ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶೇ. 64.69ರಷ್ಟು ಶಾಂತಿಯುತ ಮತದಾನ ಜರುಗಿತು. ತಾಲೂಕಾದ್ಯಂತ 1089 ಪುರುಷ, 276 ಮಹಿಳಾ ಮತದಾರರು ಸೇರಿ ಒಟ್ಟು 1365 ಮತಗಳಿದ್ದು, ಅದರಲ್ಲಿ 753 ಪುರುಷ, 130 ಮಹಿಳೆ ಸೇರಿ ಒಟ್ಟು 883 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.