ಪರೇಡ್ ಮೈದಾನದಲ್ಲಿ ವಸತಿಗೃಹ ನಿರ್ಮಾಣ
ಮುಂಡರಗಿ: ಮುಂಡರಗಿ ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆ ಕಾರ್ಯಾಲಯಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿನಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಇದೀಗ ಪೊಲೀಸ್ ಇಲಾಖೆಯವರು ತಮ್ಮ ಇಲಾಖೆ ಸಿಬ್ಬಂದಿ ವಸತಿಗಾಗಿ ಮಂಜೂರಾದ ವಸತಿ ಗೃಹಗಳನ್ನು ಕಟ್ಟಲು ತಯಾರಿ ನಡೆಸುತ್ತಿದ್ದು, ವಸತಿ ಗೃಹಗಳ ನಿರ್ಮಾಣಕ್ಕೆ ಪಟ್ಟಣದ ಅನೇಕ ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಹಿಂದೆ ಜ. ಅನ್ನದಾನೀಶ್ವರ ಸ್ವಾಮಿಜಿ ತಮ್ಮ ಮಠದ ಈ ಜಾಗೆಯನ್ನು ಪೊಲೀಸ್ ಇಲಾಖೆಯವರು ಪಡೇರ್ ಮಾಡಲೆಂದು ನೀಡಿದ್ದರು ಎನ್ನಲಾಗುತ್ತಿದ್ದು, ಆದರೆ, ಅಂದು ಪರೇಡ್ಗಾಗಿ ನೀಡಿದ ಜಾಗೆಯಲ್ಲಿ ಇಂದು ಇಲಾಖೆ ವಸತಿ ಗೃಹಗಳನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಸಂಘಟನೆಗಳ ಹಾಗೂ ಸಾರ್ವಜನಿಕ ವಲಯಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ವಿರೋಧ ಏಕೆ: ಇದೀಗ ವಸತಿ ಗೃಹಗಳನ್ನು ನಿರ್ಮಾಣ ಮಾಡುತ್ತಿರುವ ಪೊಲೀಸ್ ಪರೇಡ್ ಮೈದಾನ ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ 60 ವರ್ಷಗಳಿಂದಲೂ ಮುಂಡರಗಿ ಪಟ್ಟಣಕ್ಕೆ ಸಂಬಂಧಪಟ್ಟ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಜಾಗೆ ಬಳಕೆಯಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಅಂಬೇಡ್ಕರ ದಿನಾಚರಣೆ, ವಾಲ್ಮೀಕಿ, ಕನಕದಾಸ, ಬಸವ ಜಯಂತಿ, ಮುಡರಗಿ ಉತ್ಸವ, ನಾಟಕೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸರ್ಕಾರಿ, ಖಾಸಗಿ ಮತ್ತು ಸಂಘ-ಸಂಸ್ಥೆಗಳ ಕಾರ್ಯಕ್ರಮ ಇಲ್ಲೆ ನಡೆಸಿಕೊಂಡು ಬರಲಾಗುತ್ತಿದೆ. ವಸತಿಗೃಹ ನಿರ್ಮಾಣಕ್ಕೆ ರ್ಸಾಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.
ಮುಂಡರಗಿ, ಡಂಬಳ ಪೊಲೀಸ್ ಠಾಣೆ ವ್ಯಾಪ್ತಿಗೆ ಒಟ್ಟು 48 ಸಿಬ್ಬಂದಿ ಇದ್ದು, ಈಗಾಗಲೇ 29 ಸಿಬ್ಬಂದಿಗೆ ವಸತಿ ನಿಲಯಗಳಿದ್ದು, 19 ಸಿಬ್ಬಂದಿಗೆ ವಸತಿ ನಿಲಯಗಳ ಅವಶ್ಯಕತೆ ಇದೆ. ಇದೀಗ ಸರ್ಕಾರದಿಂದ ರು. 33 ಲಕ್ಷ ವೆಚ್ಚದಲ್ಲಿ ಮತ್ತೆ 12 ವಸತಿ ಗೃಹಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಈ ಹಿಂದೆಯೂ ಮಂಜೂರಾಗಿ ನಿರ್ಮಾಣ ಮಾಡದಿರುವುದರಿಂದ ಅವುಗಳು ರದ್ದಾಗಿವೆ. ಈ ಬಾರಿಯೂ ಕೈಬಿಟ್ಟರೆ ಮತ್ತೆ ತೊಂದರೆಯಾಗುತ್ತದೆ ಎನ್ನುವ ಉದ್ದೇಶದಿಂದ ಇಲಾಖೆ ವಸತಿ ಗೃಹಗಳ ನಿರ್ಮಾಣಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
- ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

