ಗದಗ

ನಿವೇಶನ ಆಯ್ಕೆ ಪಾರದರ್ಶಕವಿಲ್ಲ: ತೆಗ್ಗಿನಕೇರಿ

Published On :

ರೋಣ: ತಾಲೂಕಿನ ಬೆಳವಣಕಿ ಗ್ರಾಪಂನಲ್ಲಿ ಈ ಹಿಂದೆ ಆಡಳಿತ ನಿರ್ವಹಿಸಿದ ಡಿವೈಎಫ್‌ಐ ನೇತೃತ್ವದ ಆಡಳಿತ ಮಂಡಳಿಯು ನಿವೇಶನ ರಹಿತ ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಮಾಡಿದ್ದು, ಆಯ್ಕೆ ಪಾರದರ್ಶಕತೆಯಿಂದ ಕೂಡಿರುವುದಿಲ್ಲ ಎಂದು ಅನಿಲ ತೆಗ್ಗಿನಕೇರಿ ಆರೋಪಿಸಿದರು.
ಪಟ್ಟಣದ ನೀರಾವರಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಅವರು ಮಾತನಾಡಿದರು.
ಬೆಳವಣಕಿ ಗ್ರಾಮದಲ್ಲಿ ವಸತಿ ರಹಿತರಿಗೆ ನಿವೇಶನ ಕಲ್ಪಿಸುವುದಕ್ಕಾಗಿ ಸರ್ವೇ ನಂಬರ್ 408ರಲ್ಲಿ 8 ಎಕರೆ ಜಮೀನು ಖರೀದಿಸಿದ್ದು, ಅದರಲ್ಲಿ ನಿವೇಶನ ನೀಡಲು 150 ಫಲಾನುಭವಿಗಳನ್ನು ಆಯ್ಕೆ ಮಾಡಿತ್ತು. ದುರಂತವೆಂದರೆ ಅಂದು ಆಯ್ಕೆ ಮಾಡಿದ ಬಹುತೇಕ ಫಲಾನುಭವಿಗಳು ಅನರ್ಹರಿದ್ದಾರೆ. ಶೇ. 80ರಷ್ಟು ಆಯ್ಕೆ ಪಟ್ಟಿಯಲ್ಲಿ ಶ್ರೀಮಂತರಿದ್ದು, ಇವರಿಂದ ಒಂದಕ್ಕೆ ರು. 6 ಸಾವಿರ ಪಡೆದು ನಿವೇಶನ ನೀಡುವುದಕ್ಕಾಗಿ ಸಾಮಾನ್ಯ ಸಭೆ ಮತ್ತು ಗ್ರಾಮಸಭೆ ನಡೆಸದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿತ್ತು. ಜೂ. 26ರಂದು ಬೆಳವಣಕಿಯಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ, ಡಿಸಿ ಕಚೇರಿ ಎದುರು ಸತ್ಯಾಗ್ರಹದಂಥ ಅಸ್ತ್ರ ಬಳಕೆ ಮಾಡುತ್ತಿದ್ದಾರೆ. ಇಂದು ಡಿವೈಎಫ್‌ಐ ಸಂಘಟನೆಯು ಅಧಿಕಾರಿಗಳಿಗೆ ತಪ್ಪು ಸಂದೇಶ ನೀಡುತ್ತಿದೆ ಎಂದರು. ಸುಭಾಸ ಹೊಸಂಗಡಿ, ಗ್ರಾಪಂ ಸದಸ್ಯ ಭೀಮಪ್ಪ ಹಳ್ಳಿಕೇರಿ, ಗ್ರಾಪಂ ಮಾಜಿ ಸದಸ್ಯ ನಿಂಗಬಸಪ್ಪ ಹದ್ಲಿ, ಹನುಮಂತಪ್ಪ ಸೈದಾಪುರ, ಮಹಶ್ರೀ ವಾಲ್ಮೀಕಿ ಸಂಘ ಗ್ರಾಮ ಘಟಕದ ಅಧ್ಯಕ್ಷ ಚಂದ್ರಶೇಖರಪ್ಪ ತಳವಾರ, ಶರಣಪ್ಪ ಉಪ್ಪಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.