ಗದಗ

ಪಡಿತರ: ಎಸ್‌ಎಂಎಸ್ ಗೊಂದಲ ತಪ್ಪಿಸಲು ಮಾರ್ಪಾಟು

Published On :

ರೋಣ:  ಪಡಿತರ ಕಾರ್ಡ್‌ದಾರರಿಗೆ ಇಲಾಖೆ ಕೇಳಿದ ವಿವಿಧ ಮಾಹಿತಿಯನ್ನು ಎಸ್‌ಎಂಎಸ್ ಮೂಲಕ ಕಳಿಸುವಂತೆ ಈ ಮೊದಲು ತಿಳಿಸಲಾಗಿದ್ದು, ಇದರಿಂದ ಗ್ರಾಮೀಣ ಪ್ರದೇಶದವರಿಗೆ ತೀವ್ರ ಗೊಂದಲವಾಗುತ್ತಿದ್ದು, ಇದನ್ನು ಮನಗಂಡು ಅನುಕೂಲವಾಗುವ ದಿಸೆಯಲ್ಲಿ ಕೆಲ ಮಾರ್ಪಾಟುಗಳನ್ನು ಮಾಡಲಾಗಿದೆ. ಇನ್ನು ಮುಂದೆ ಎಸ್‌ಎಂಎಸ್ ಬದಲು ನೇರವಾಗಿ ಡಾಟಾ ಸೆಂಟರ್ ಹಾಗೂ ಆಯಾ ಸ್ಥಳೀಯ ಗ್ರಾಪಂಗೆ ತೆರಳಿ ಮಾಹಿತಿಯನ್ನು ತಂತ್ರಾಂಶಕ್ಕೆ ಅಳವಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಎ.ಜಿ. ಪಂಡಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಡಿತರದಾರರು ತಾವು ಹೊಂದಿದ ಪಡಿತರ ಚೀಟಿಯ ಸಂಖ್ಯೆ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ನಂಬರ್‌ನ್ನು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ 9212357123ಕ್ಕೆ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಆದರೆ ಮೊಬೈಲ್ ಮೂಲಕ ಎಸ್.ಎಂ.ಎಸ್. ಕಳಿಸುವುದು ಗ್ರಾಮೀಣರಿಗೆ ತೊಂದರೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ಮಾಡಬೇಕಾದದ್ದು ಇಷ್ಟೇ...
ಇಂಥ ಸಮಸ್ಯೆಯನ್ನು ತಪ್ಪಿಸಲು ಇಲಾಖೆ ಮುಂದಾಗಿದ್ದು, ಇನ್ನು ಮುಂದೆ ಗ್ರಾಮೀಣ ಪಡಿತರರದಾರರು ಮತದಾರ ಗುರುಚಿನ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆಗಳನ್ನು ಆಯಾ ಗ್ರಾಪಂನಲ್ಲಿನ ಕಂಪ್ಯೂಟರ್‌ನಲ್ಲಿ ಮತ್ತು ಶಹರ ಪಡಿತರರದಾರು ಶಹರದಲ್ಲಿನ ಸೇವಾ ಕೇಂದ್ರಗಳಲ್ಲಿ ಮಾಹಿತಿ ನೀಡಿ ತಂತ್ರಾಂಶದಲ್ಲಿ ಅಳವಡಿಸಬೇಕು. ದಾಖಲಾದ ಬಗ್ಗೆ ಗಣಕೀಕೃತ ಕೇಂದ್ರದಿಂದ ರು. 10 ಪಾವತಿಸಿ ರಸೀದಿ ಪಡೆಯಬೇಕು. ಈ ವ್ಯವಸ್ಥೆಯನ್ನು ಆಹಾರ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ತಾಲೂಕಿನ ಪಡಿತರರದಾರರು ಇಲಾಖೆ ಕೇಳಿದ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ. ಮಾಹಿತಿ ನೀಡದಿದ್ದಲ್ಲಿ ಅಂಥ ಪಡಿತರ ಕಾರ್ಡಗಳು ರದ್ದಾಗುವ ಸಾಧ್ಯತೆಯಿದೆ ಎಂದು ತಹಸೀಲ್ದಾರ್ ಎ.ಜಿ. ಪಂಡಿತ ತಿಳಿಸಿದರು.
ಗ್ರಾಮೀಣ ಶಿಕ್ಷಣಕ್ಕೆ ಸಂಘ ಅವಶ್ಯಕ
ಗದಗ: ಇಂದಿನ ಆಧುನಿಕ ಭರಾಟೆಯಲ್ಲಿ ಸಂಘವನ್ನು ಕಟ್ಟಿ ಶಿಕ್ಷಣಕ್ಕೆ ಗ್ರಾಮೀಣ ಭಾಗದಲ್ಲಿ ಒತ್ತು ನೀಡುವಂಥ ಸಂಘಗಳ ಅವಶ್ಯಕತೆ ಇದ್ದು, ಹಲವಾರು ಸಂಘಗಳಿಗೆ ಸ್ನೇಹಲೋಕ ಸಂಘವು ಮಾದರಿಯಾಗಿದೆ ಎಂದು ವಿಜಯಕುಮಾರ ಗಡ್ಡಿ ಹೇಳಿದರು. ಅವರು ಈಚೆಗೆ ಸ್ನೇಹಲೋಕ ವಿವಿದೋದ್ಧೇಶಗಳ ಸಂಘ ಗದಗ ವತಿಯಿಂದ ತಾಲೂಕಿನ ಅಸುಂಡಿ ಗ್ರಾಮದ ಎಚ್.ಸಿ.ಇ.ಎಸ್. ಪ್ರೌಢಶಾಲೆಯಲ್ಲಿ ಭಾರತದಲ್ಲಿ ತಂತ್ರಜ್ಞಾನ ಬೆಳವಣಿಗೆ ಕುರಿತು ಹಮ್ಮಿಕೊಳ್ಳಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.  ಮುಖ್ಯೋಪಾಧ್ಯಾಯ ಎಂ.ಕೆ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಸ್.ಎಸ್. ಚಿಕ್ಕೋಪ್ಪ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಅಂಕಿತಾ ಅಣ್ಣಿಗೇರಿ ಪ್ರಥಮ, ದ್ಯಾಮವ್ವ ಮೇವುಂಡಿ ದ್ವಿತೀಯ, ಸಾಹೀಲ ಮುಲ್ಲಾ ತೃತೀಯ ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.