ಬಾಂದಾರ ನೀರು ಪೋಲು
-ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜೂ. 30
ತಾಲೂಕಿನ ಹಲವಾರು ಕಡೆಗಳಲ್ಲಿ ಸಣ್ಣ ನೀರಾವರಿ ಇಲಾಖೆ ಅಂತರ್ಜಲ ಮಟ್ಟ ಹೆಚ್ಚಿಸಲು ಸಣ್ಣ ಹಳ್ಳಗಳಿಗೆ ಬಾಂದಾರಗಳನ್ನು ನಿರ್ಮಿಸಿ ಅವುಗಳಿಗೆ ಕ್ರಸ್ಟ್ಗೇಟ್ ಅಳವಡಿಸಿತ್ತು. ಆದರೆ ಕ್ರಸ್ಟ್ಗೇಟುಗಳು ತುಕ್ಕು ಹಿಡಿದು ತೂತು ಬಿದ್ದು ಬಾಂದಾರಗಳಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗಿ ಇಲಾಖೆಯ ಉದ್ದೇಶವೇ ಸಾಕಾರವಾಗುತ್ತಿಲ್ಲ.
ಸಮೀಪದ ಸೂರಣಗಿ ಪಕ್ಕದಲ್ಲಿರುವ ಹಳ್ಳಕ್ಕೆ 7-8 ವರ್ಷಗಳ ಹಿಂದೆ ಬಾಂದಾರವನ್ನು ನಿರ್ಮಿಸಿ 10 ಕ್ರಸ್ಟ್ಗೇಟ್ಗಳನ್ನು ಅಳವಡಿಸಲಾಗಿತ್ತು. ಮಳೆಯ ನೀರನ್ನು ತಡೆದು ಗ್ರಾಮದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುವ ಕಾರ್ಯವನ್ನು ಇಲಾಖೆಯು ಮಾಡಿತ್ತು. ಆದರೆ ನಿರ್ವಹಣೆ ಕೊರತೆಯಿಂದ ಕ್ರಸ್ಟ್ಗೇಟುಗಳು ಜಾಮ್ ಆಗಿ ಸರಿಯಾಗಿ ಹಾಕಲು ಬಾರದೇ ನೀರು ವ್ಯರ್ಥವಾಗಿ ಹರಿದು ಹಳ್ಳ ಸೇರುತ್ತಿದೆ.
ಹತ್ತಿಪ್ಪತ್ತು ಎಕರೆ ಭೂಮಿಯಲ್ಲಿ ಮಳೆಯ ನೀರು ನಿಲ್ಲುವಂತೆ ಬಾಂದಾರವನ್ನು ನಿರ್ಮಿಸಲಾಗಿತ್ತು. ಈಗ ಬಾಂದಾರದ ಬದುವುಗಳು ಬಿರುಕು ಬಿಟ್ಟು ಒಡೆದು ಹೋಗುವ ಅಪಾಯದಲ್ಲಿವೆ. ನೀರು ನಿಲ್ಲಬೇಕಾದ ಜಾಗೆಯಲ್ಲಿ ಮುಳ್ಳು ಕಂಟಿಗಳು ಬೆಳೆದು ಸಣ್ಣ ನೀರಾವರಿ ಇಲಾಖೆಯ ಕಾರ್ಯವೈಖರಿಯನ್ನು ಸಂಶಯದಿಂದ ನೋಡುವಂತೆ ಮಾಡಿರುವುದು ಸುಳ್ಳಲ್ಲ. ಸರಿಯಾಗಿ ನಿರ್ವಹಣೆ ಮಾಡಿದ್ದರೆ ಉದ್ದೇಶ ಸಫಲವಾಗುತ್ತಿತ್ತು ಎಂದು ಸೂರಣಗಿ ಮಹ್ಮದಸಾಬ್ ಕೋಲಕಾರ ಹೇಳುತ್ತಾರೆ.
ನದಿ ಸೇರುವ ನೀರು
ಹುಲ್ಲೂರಿನ ಸಮೀಪದ ದೊಡ್ಡ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆಯು ಸೇತುವೆ ಕಮ್ ಬಾಂದಾರವನ್ನು 3 ವರ್ಷಗಳ ಹಿಂದೆ ನಿರ್ಮಿಸಿದೆ. ಆದರೆ ಅದಕ್ಕೆ ಒಮ್ಮೆಯೂ ಕ್ರಸ್ಟ್ಗೇಟ್ಗಳನ್ನು ಅಳವಡಿಸಿಲ್ಲ. ಹೀಗಾಗಿ ಹಳ್ಳದಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗಿ ತುಂಗಭದ್ರಾ ನದಿ ಸೇರುತ್ತದೆ. ಇದರ ಹಿಂದೆ ಮರಳು ಮಾಫಿಯಾ ಕೈವಾಡವಿದೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

