ಗದಗ

ಕುಡಿವ ನೀರು: ಶಾಶ್ವತ ಪರಿಹಾರಕ್ಕೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 10
ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸೋಮವಾರ ಪುರಸಭೆ ಮುಖ್ಯಾಧಿಕಾರಿ ಕೆ.ಐ. ನಾಗನೂರಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ ಮಾತನಾಡಿ, ಜಿಲ್ಲೆಯಲ್ಲೆ ಅತ್ಯಂತ ತೀವ್ರಗತಿಯಲ್ಲಿ ಬೆಳೆಯುತ್ತಿರುವ ವಾಣಿಜ್ಯ ನಗರ ಖ್ಯಾತಿಯ ಗಜೇಂದ್ರಗಡ ಪಟ್ಟಣದಲ್ಲಿ ನೀರಿನ ಬವಣೆ ಕಂಡರಿಯದ ಸ್ಥಿತಿ ಎದುರಾಗಿ ಪಟ್ಟಣದ 23 ವಾರ್ಡ್‌ಗಳಲ್ಲಿ ನಿತ್ಯ ಜೀವ ಜಲಕ್ಕಾಗಿ ಜನ ಪರದಾಡುವಂತಾಗಿದೆ. ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಸ್ಥಳೀಯ ಆಡಳಿತ ನೀರಿನ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಯಾವ ಓಣಿಯಲ್ಲಿ ಎಂದು ನೀರು ಬಿಡುತ್ತಾರೆ ಎಂಬುದೇ ಜನರಿಗೆ ತಿಳಿಯುವುದಿಲ್ಲ.  ಇದರಿಂದ ಮಹಿಳೆಯರು ಪುರಸಭೆಗೆ ಹಿಡಿಶಾಪ ಹಾಕಿ ಹಲವಾರು ಬಾರಿ ಖಾಲಿ ಕೊಡಗಳೊಂದಿಗೆ ಪುರಸಭೆ ಮುಂದೆ ಪ್ರತಿಭಟನೆ ಮಾಡಿದ್ದುಂಟು. ನೀರು ಸರಬರಾಜು ಮಾಡಿದ ಬಡಾವಣೆಗೆ ಓಡೋಡಿ ಹೋಗಿ ಒಂದು ಕೊಡ ನೀರು ಪಡೆಯಬೇಕೆಂದರೆ ಯುದ್ಧ ಮಾಡಿದ ಮಾದರಿಯಲ್ಲಿ ಹರಸಾಹಸ ಪಡಬೇಕಾಗಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪಟ್ಟಣದ ಜನತೆಗೆ ಶಾಶ್ವತ ಕುಡಿಯುವ ನೀರು ಜತೆಗೆ ಮೂಲ ಸೌಲಭ್ಯ ಒದಗಿಸಲು ಮುಂದಾಗದಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಕೆ.ಐ. ನಾಗನೂರ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಕುರಿತು ಒಂದು ವಾರದೊಳಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ತಾಲೂಕು ಉಪಾಧ್ಯಕ್ಷ ಮುರ್ತುಜ ಒಂಟಿ, ಗಜೇಂದ್ರಗಡ ನಗರ ಘಟಕ ಅಧ್ಯಕ್ಷ ರಜಾಕ ಡಾಲಾಯತ್, ಶಹಬಾಜ ಗೊಲಗೇರಿ, ಮೌಲಾಸಾಬ್ ಕುಂದಗೋಳ, ರಾಜು ಕ್ವೌಟಿ, ಹುಸೇನ ಕವಲೂರ, ಗುರು ರಾಠೋಡ, ರಾಜು ಸತ್ತಿಗಿನಹಳ್ಳಿ, ಮಂಜು ರಾಠೋಡ, ಹುಸೇನ ಡಾಲಾಯತ್, ಯುಸೂಫ ಹಿರೇಹಾಳ, ಬಸವರಾಜ ಸವಣೂರ, ಮಂಜು ಇಟಗಿ, ಶಂಕರ ಗೋರೇಬಾಳ, ಅಬ್ಬಾಸ ಗದಗ, ಯಮನೂರ ಜಾಡಬಂಡಿ, ಮಾರುತಿ ಪೊಲೀಸ್‌ಪಾಟೀಲ, ರಾಜು ತಟಗಾರ, ಮೈಬು ಮುಜಾವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.