ಕಬಡ್ಡಿ ಉಳಿಸಿ ಬೆಳೆಸಿ: ಕಲ್ಲಯ್ಯಜ್ಜನವರ
ಕನ್ನಡಪ್ರಭ ವಾರ್ತೆ, ಗದಗ, ಮಾ. 10
ಕಬಡ್ಡಿ ಕ್ರೀಡೆಯನ್ನು ಉಳಿಸಿ ಬೆಳೆಸಲು ಕ್ರೀಡಾಭಿಮಾನಿಗಳು ಮುಂದೆ ಬರಬೇಕಾಗಿದೆ ಎಂದು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಅವರು ಈಚೆಗೆ ಸ್ಥಳೀಯ ರಾಜೀವಗಾಂಧಿ ನಗರದಲ್ಲಿ ಏರ್ಪಡಿಸಿದ್ದ ಡಾ. ಸಿದ್ದಲಿಂಗ ಶ್ರೀ ಟ್ರೋಪಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ರಾಜೀವಗಾಂಧಿ ನಗರದಲ್ಲಿ 12ನೇ ವರ್ಷದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ನಡೆಸಿದ ಲಿಂಗದಾಳ ಸಹೋದರರಿಗೆ ಈ ವರ್ಷ ಡಾ. ಸಿದ್ದಲಿಂಗ ಶ್ರೀ ಟ್ರೋಫಿ ಹೆಸರಿನಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಟಿಸಿದ ಸಂಘಟಕರ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಪೊಲೀಸ್ ಉಪ ಅಧೀಕ್ಷಕ ವಿಜಯ ಡಂಬಳವರು ಮೆಣಸಗಿ ಹಾಗೂ ಬಳಗಾನೂರಿನ ಮಹಿಳಾ ತಂಡದಿಂದ ಪ್ರದರ್ಶನ ಪಂದ್ಯವನ್ನು ಟಾಸ್ ಮಾಡುವ ಮೂಲಕ ಚಾಲನೆ ಮಾಡಿದರು. ದಲಿತ ಯುವಸೇನಾ ಸಮಿತಿ ಅಧ್ಯಕ್ಷ ವಿಜಯ ಮುಳಗುಂದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಈಶಣ್ಣ ಮೇರವಾಡೆ, ಗೌತಮ ಬುದ್ಧ ಸೇವಾ ಸಮಿತಿಯ ಅಧ್ಯಕ್ಷ ದೇವಪ್ಪ ಲಿಂಗದಾಳ, ಸಹದೇವ ಗಣಾಚಾರಿ, ಯು.ಡಿ. ಅಂಗಡಿ, ಸಹದೇವ ಯರಗುಪ್ಪ, ಟಿಪ್ಪುಸಾಬ್ ನದಾಫ್, ಅಯ್ಯಪ್ಪ ನಾಯ್ಕರ, ಎಲ್.ನಾರಾಯಣಸ್ವಾಮಿ, ಎಂ.ಬಿ. ತುಪ್ಪದ, ಎಸ್.ಡಿ. ಮಾದರ, ಎಸ್.ಬಿ. ಬಾವಿ, ಎಸ್.ಬಿ. ಆಲೂರು, ಮಲ್ಲಿಕಾರ್ಜುನ ಕಲಕಂಬಿ, ಇಮಾಮಸಾಬ್ ಕಲೇಗಾರ, ಬಸವರಾಜ ಬದಾಮಿ, ಎಸ್.ಎಸ್. ಲಿಂಗದಾಳ, ಮಲ್ಲಿಕಾರ್ಜುನ ಗುಜ್ಜಾಯಿ, ಬಸವರಾಜ ಹುಣಶಿಮರದ ಮುಂತಾದವರು ಪಾಲ್ಗೊಂಡಿದ್ದರು. ಪಂದ್ಯಾವಳಿಯಲ್ಲಿ 30 ತಂಡದವರು ಪಾಲ್ಗೊಂಡಿದ್ದರು. ಪರಶುರಾಮ ದನದಮನಿ ಸ್ವಾಗತಿಸಿದರು. ಗೌತಮ ಬುದ್ಧ ಸೇವಾ ಸಮಿತಿಯ ಕಾರ್ಯದರ್ಶಿ ಬಸವರಾಜ ಈರಣ್ಣವರ ನಿರೂಪಿಸಿದರು. ಅಶೋಕ ನರಗುಂದ ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

