ಗದಗ

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿ

Published On :

ನರೇಗಲ್ಲ: ನಮ್ಮ ಮಕ್ಕಳು ಕೇವಲ ಎಂಜಿನಿಯರರಾಗಲಿ, ಡಾಕ್ಟರ್‌ರಾಗಲಿ ಎಂಬ ಮನೋಭಾವ ಪಾಲಕರಲ್ಲಿ ಬೇಡ. ಎಲ್ಲಕ್ಕಿಂತ ಮೊದಲು ಅವರು ಸಂಸ್ಕಾರವಂತರಾಗಲಿ. ಆ ದಿಕ್ಕಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ತಯಾರು ಮಾಡಬೇಕೆಂದು ಹಾಲಕೆರೆಯ ಅಭಿನವ ಅನ್ನದಾನ ಶ್ರೀಗಳು ಹೇಳಿದರು.
ಅವರು ಈಚೆಗೆ ಸ್ಥಳೀಯ ಅನ್ನದಾನೇಶ್ವರ ಸೆಂಟ್ರಲ್ ಶಾಲೆಯ ಮೊದಲ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಕ್ಕಳು ಎಂಜಿನಿಯರ್, ಡಾಕ್ಟರ್ ಆದ ತಕ್ಷಣವೇ ಅವರು ಹೊರದೇಶಕ್ಕೆ ಹೋಗಬೇಕು, ಸಾಕಷ್ಟು ದುಡ್ಡು ತರಬೇಕೆನ್ನುವ ಆಸೆಯನ್ನು ನಿಮ್ಮ ಮನದಲ್ಲಿ ಹೊಂದಬೇಡಿ. ಅಲ್ಲಿಗೆ ಹೋಗಿ ಅವರು ಪಾಶ್ಚಿಮಾತ್ಯ ಸಂಸ್ಕೃತಿ ಕಲಿತು ಬರುತ್ತಾರೆ. ಇದರಿಂದ ನಮ್ಮ ಹಿಂದೂ ಸಂಸ್ಕೃತಿಗೆ ಧಕ್ಕೆಯಾಗುತ್ತದೆ. ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾದುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು. ಉಪನ್ಯಾಸಕ ಅನಿಲ ವೈದ್ಯ ಮಾತನಾಡಿ, ನಮ್ಮಲ್ಲಿ ಕನ್ನಡದ ಅಭಿಮಾನ ಅನುರುಣಿಸುತ್ತಿರಲಿ. ಆದರೆ, ಈ ಜಗತ್ತನ್ನು ವಿಶಾಲವಾಗಿ ಕಾಣಬೇಕೆಂದರೆ ಅದಕ್ಕೆ ಇಂಗ್ಲಿಷನ ಕಿಂಡಿ ಬೇಕೇ ಬೇಕು. ಕನ್ನಡವನ್ನು ನಮ್ಮ ಜೀವನದ ಹೆಬ್ಬಾಗಿಲಾಗಿಸಿಕೊಂಡು, ಇಂಗ್ಲಿಷನ್ನು ಕಿಟಕಿಯನ್ನಾಗಿ ಮಾಡಿಕೊಂಡು ಜಗತ್ತನ್ನು ತಿಳಿಯೋಣ ಎಂದರು.
ಕೊಟ್ಟೂರು ದೇಶಿಕರು, ಸಂಸ್ಥೆಯ ಕಾರ್ಯದರ್ಶಿ ಸಿ.ಕೆ. ಹಿರೇಮಠ, ಆಡಳಿತಾಧಿಕಾರಿ ಎಸ್.ಜಿ. ಹಿರೇಮಠ, ಅನ್ನದಾನೇಶ್ವರ ಪಿಯು ಮಹಾವಿದ್ಯಾಲಯದ ಪ್ರಾಚಾರ್ಯ ವೈ.ಸಿ. ಪಾಟೀಲ, ಪಪಂ ಮಾಜಿ ಅಧ್ಯಕ್ಷ ಅಂದಾನಗೌಡ ಪಾಟೀಲ ಉಪಸ್ಥಿತರಿದ್ದರು. ಪ್ರಾಚಾರ್ಯ ಜಿ.ಪಿ. ಕುಲಕರ್ಣಿ ವರದಿ ವಾಚನ ನೀಡಿದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.