ಸರ್ಕಾರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಮಾ. 13
ಹಿಂದುಳಿದವರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿ ಮಾಡಿದೆ. ಫಲಾನುಭವಿಗಳು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ರೋಣ ಶಾಸಕ ಜಿ.ಎಸ್. ಪಾಟೀಲ ಫಲಾನುಭವಿಗಳಿಗೆ ಕರೆ ನೀಡಿದರು.
ಈಚೆಗೆ ಪಟ್ಟಣದ ಗಾಂಧಿ ಭವನದಲ್ಲಿ 2012-13ನೇ ಸಾಲಿನ ಶೇ. 22.75ರ ಅನುದಾನದಲ್ಲಿ, ಶೇ. 3ರ ಅನುದಾನದಲ್ಲಿ ವಿವಿಧ ಫಲಾನುಭವಿಗಳಿಗೆ ವಿವಿಧ ಸಾಮಗ್ರಿಗಳನ್ನು ಮತ್ತು ಅಡುಗೆ ಅನಿಲ ವಿತರಿಸಿ ಅವರು ಮಾತನಾಡಿದರು.
ಇಂದು ವಿತರಣೆಯಾಗುವ ಈ ಸಾಮಗ್ರಿಗಳು ಸದುಪಯೋಗವಾಗಬೇಕು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ತೀರಿ ಫಲಾನುಭವಿಗಳು ಆರ್ಥಿಕವಾಗಿ ಸಬಲರಾಗಬೇಕು. ಅಂದಾಗ ಮಾತ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು ಸಾರ್ಥಕವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಏಳ್ಗೆಗೆ, ಹಿಂದುಳಿದವರ ಅಭಿವೃದ್ಧಿಗೆ ಸದಾಕಾಲ ಶ್ರಮಿಸುತ್ತಿದೆ. ಇಂದು ನಾವು ನಿಮಗೆ ಮೊಪೆಡ್‌ಗಳನ್ನು, ಅಡುಗೆ ಅನಿಲ ಸಾಮಗ್ರಿಗಳು, ಗ್ಯಾಸ್ ಸ್ಟೋವ್‌ಗಳನ್ನು, ಲಿಡಕರ್ ಕುಟೀರಗಳನ್ನು ನೀಡಿದ್ದೇವೆ. ಯಾವ ಕಾರಣಕ್ಕೂ ಇವು ದುರುಪಯೋಗವಾಗದ ಹಾಗೆ ನೀವುಗಳೆಲ್ಲ ಕಾಳಜಿ ವಹಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಸರ್ಕಾರ ನಿಜಕ್ಕೂ ಬಡವರ ಅಭಿವವೃದ್ಧಿಗಾಗಿ ಶ್ರಮಿಸುತ್ತಿದೆ ಎಂಬುದನ್ನು ಇಂದಿನ ಸಮಾರಂಭ ಸಾಕ್ಷೀಕರಿಸಿದೆ. ಕೇವಲ ರು. 1ಗೆ ಕೆ.ಜಿ. ಅಕ್ಕಿ ನೀಡಿದ ಸರ್ಕಾರ ಅದನ್ನು ಬೇಯಿಸಲು ನೀವುಗಳು ಕಷ್ಟಪಡಬಾರದು ಎನ್ನುವ ಉದ್ದೇಶದಿಂದ ಈಗ ಗ್ಯಾಸ್ ಸ್ಟೋವ್‌ಗಳನ್ನೂ ನೀಡುತ್ತಿದೆ. ಇತರೆ ಎಲ್ಲ ಜನತೆಗೂ ಅನುಕೂಲವಾಗುವಂತೆ ಬಡಿಗತನದ ಸಲಕರಣೆಗಳನ್ನು, ಚಮ್ಮಾರಿಕೆಯ ಸಲಕರಣೆಗಳನ್ನು, ಗೌಂಡಿಗಳಿಗೆ ಅನುಕೂಲವಾಗುವ ಸಲಕರಣೆಗಳನ್ನು ನೀಡಿ ಉಪಕರಿಸುತ್ತಿದೆ. ನಿಮ್ಮ ದುಶ್ಚಟಗಳಿಗೆ ಈ ವಸ್ತುಗಳನ್ನು ಬಳಕೆ ಮಾಡದೇ ಸದುಪಯೋಗ ಮಾಡಿಕೊಂಡು ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಾಣಿರಿ ಎಂದರು.
ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯರು, ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಕೆ.ಎಫ್. ಕಟಗಿ ಸ್ವಾಗತಿಸಿದರು. ಶಿವಾನಂದ ಗೋಗೇರಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

