ಗದಗ

ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್: ಹೊಸಳ್ಳಿ ಪ್ರಥಮ

Published On :

ಕನ್ನಡಪ್ರಭ ವಾರ್ತೆ, ಗದಗ, ಮಾ. 19
ಗದುಗಿನ ಕಾಶೀ ವಿಶ್ವನಾಥ ನಗರದ ದುರ್ಗಾದೇವಿ ಯುವಕ ಸಂಘ ಈಚೆಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಿಕ್ಸ್ ಎ ಸೈಡ್ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ದಲ್ಲಿ ಹೊಸಳ್ಳಿಯ ಬೂದೀಶ್ವರ ಗೆಳೆಯರ ಬಳಗ ಪ್ರಥಮ ಸ್ಥಾನದೊಂದಿಗೆ ಟ್ರೋಫಿ ಮತ್ತು ರು. 15 ಸಾವಿರ ನಗದು ಬಹುಮಾನ ಪಡೆದುಕೊಂಡಿತು.
ಗದಗ ಸಿಕ್ಸರ್ ಕ್ರಿಕೆಟ್ ಕ್ಲಬ್ ಹೊಸಳ್ಳಿಯ ತಂಡದೊಂದಿಗೆ ತೀವ್ರ ಸೆಣಸಾಟ ನಡೆಸಿ ದ್ವಿತೀಯ ಸ್ಥಾನದೊಂದಿಗೆ ಟ್ರೋಫಿ ಹಾಗೂ ರು. 10 ಸಾವಿರ ನಗದು ಬಹುಮಾನ ಪಡೆದುಕೊಂಡಿತು. ಮೊದಲು ಟಾಸ್ ಗೆದ್ದ ಹೊಸಳ್ಳಿಯ ಬೂದೀಶ್ವರ ಗೆಳೆಯರ ಬಳಗ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, ತಂಡದ ಓಪ್ನರ್ ಬ್ಯಾಟ್ಸಮನ್ ವೀರೇಶ ವಡ್ಡರ ಅವರ ವೈಯಕ್ತಿಕ 33 ರನ್ಗಳ ನೆರವಿನಿಂದ 64 ರನ್ ಕಲೆ ಹಾಕುವಲ್ಲಿ ಯಶಸ್ವಿಯಾದರು.
ಬೌಲಿಂಗದಲ್ಲಿ ಗದಗ ಸಿಕ್ಸರ್ ತಂಡದ ಪ್ರಶಾಂತ ಹಾಗೂ ಅಸ್ಲಂ ಮುಧೋಳ ತಲಾ ಒಂದೊಂದು ವಿಕೆಟ್ ಕಬಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಗದಗ ಸಿಕ್ಸರ್ ಕ್ರಿಕೆಟ್ ತಂಡ ಮೊದಲನೆಯ ಓವರ್ನಲ್ಲಿ ತನ್ನ 2 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದರೂ ಅಸ್ಲಂ ಮುಧೋಳ ಅವರ ಹಾಗೂ ಪ್ರಶಾಂತ ಅವರ ಹೋರಾಟದಿಂದ ಕೇವಲ 58 ರನ್ ಗಳಿಸಿ 16 ರನ್ಗಳ ಅಂತರದಲ್ಲಿ ಸೋಲು ಅನುಭವಿಸಿತು. ಹೊಸಳ್ಳಿಯ ಬೂದೀಶ್ವರ ಗೆಳೆಯರ ಬಳಗದ ತಂಡದಿಂದ ಟೊರ್ನಾಮೆಂಟ್ನ ಬೆಸ್ಟ್ ಬ್ಯಾಟ್ಸಮನ್ನರಾಗಿ ವೀರೇಶ ವಡ್ಡರ, ಬೆಸ್ಟ್ ಬೌಲರ್ರಾಗಿ ದಾವಲಸಾಬ್ ಕಿಲ್ಲೇದಾರ ಹಾಗೂ ಬೆಸ್ಟ್ ವಿಕೆಟ್ ಕೀಪರ್ ಆಗಿ ದೇವು ದೊಡ್ಡಮನಿ ಬಹುಮಾನ ಪಡೆದುಕೊಂಡರು. ಗದುಗಿನ ಸಿಕ್ಸರ್ನ ತಂಡದಿಂದ ಟೂರ್ನಮೆಂಟ್ನ ಅತಿ ಹೆಚ್ಚಿನ ಸಿಕ್ಸರ್ ಆಗಿ ಎಡ್ವರ್ಡ್ ಧರ್ಮದಾಸ ಹಾಗೂ ಅತಿ ಹೆಚ್ಚು ಬೌಂಡರಿಗಳಾಗಿ ಅರ್ಜುನ ರಜಪೂತ ಹಾಗೂ ಉತ್ತಮ ಆಲ್ರೌಂಡರ್ ಆಗಿ ಅಸ್ಲಂ ಮುಧೋಳ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಮಂಜುನಾಥ ಹಳ್ಳಿಕೇರಿ ಅವರು ಪ್ರಥಮ ಬಹುಮಾನವನ್ನು ಹಾಗೂ ಪತ್ರಕರ್ತ ಬಸವರಾಜ ದಂಡಿನ ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭರತ ಇರಾಳ ದ್ವಿತೀಯ ಬಹುಮಾನ ವಿತರಿಸಿದರು. ಸೋಮು ಅಂಗಡಿ, ಅಯ್ಯಪ್ಪ ಅಂಗಡಿ, ರಾಜು ಮುಧೋಳ, ಅಲ್ಬರ್ಟ್ ಜಾನ್, ಮಹಾಂತೇಶ ಮುಗಂದಮಠ, ಅಪ್ಪು ಮುಳವಾಡ, ಸಂಗು ಅಂಗಡಿ, ರಮೇಶ ನಿಂಬನಗೌಡ್ರ (ಬಂಡಿ), ಸಂಗು ಹುಣಶೀಕಟ್ಟಿ, ಕುಮಾರ ಭರಮಗೌಡ್ರ, ಮುತ್ತು ಮಳಗಿ, ಸಂಜಯ ಸಿದ್ದಿಗೇರಿ, ವಿಜಯ ಬೂದೆಪ್ಪನಮಠ, ಅಲ್ತಾಫ್ ರೋಣದ, ಪ್ರಕಾಶ ಅಂಗಡಿ, ಸಂಗು ದೊಡ್ಡಣ್ಣವರ, ಶಬ್ಬೀರ ರೋಣದ, ಪ್ರದೀಪ ಅಸೂಟಿ, ಮೈನು ರೋಣದ, ಬಾಷಾ, ಉದಯ, ಗಿರೀಶ ಹಾಗೂ ದುರ್ಗಾದೇವಿ ಯುವಕ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.