ಫಲಾನುಭವಿಗಳ ಬದಲಾವಣೆ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 19
2011-12ರಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ವಿವಿಧ 229 ಫಲಾನುಭವಿಗಳಿಗೆ ಮಂಜೂರಾದ ಮನೆಗಳು ಇದೀಗ ಮಾ. 4ರಂದು ಬೇರೆ ಫಲಾನುಭವಿಗಳ ಹೆಸರುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಾಲೂಕಿನ ಪೇಠಾಲೂರು ಗ್ರಾಮದ ಜನತೆ ಬುಧವಾರ ಮುಂಡರಗಿ ತಾಲೂಕು ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರ 2011-12ರಲ್ಲಿ ಮನೆಯಿಲ್ಲದ ಫಲಾನುಭವಿಗಳನ್ನು ಗುರುತಿಸಿ ವಿವಿಧ 229 ಜನರಿಗೆ ಮನೆಗಳನ್ನು ಮಂಜೂರು ಮಾಡಿತ್ತು. ಇದೀಗ ಮತ್ತೊಂದು ಫಲಾನುಭವಿಗಳನ್ನು ಆಯ್ಕೆ ಮಾಡುವ ಮೂಲಕ ಮನೆಯಿಲ್ಲದವರನ್ನು ಕೈಬಿಟ್ಟು ಮನೆಯಿದ್ದವರಿಗೆ ಮತ್ತೆ ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಮಗ ಇರಾಕ್ ಮನಿ ಇಲ್ರಿ ಎಪ್ಪಾ ಇವ್ರ ನೋಡಿದ್ರ ಮತ್ತ ಮನಿ ಇದ್ದವ್ರಿಗೆ ಮನಿ ಕೊಟ್ಟಾರ ಹಿಂಗಾದ್ರ ನಾವ್ಯಲ್ಲ ಹೆಂಗ ಬದಕಬೇಕ್ರಿ ಎಂದು ಗ್ರಾಮದ ಬಸಮ್ಮ ಸೂರಿಲ್ಲದ ತಮ್ಮ ಅಳಲನ್ನು ಮಾಧ್ಯಮದವರ ಎದುರಿನಲ್ಲಿ ತೋಡಿಕೊಂಡರು. 2011-12ರಲ್ಲಿ ಮಂಜೂರಾದ ಫಲಾನುಭವಿಗಳ ಎಲ್ಲ 229 ಮನೆಗಳನ್ನು 7 ದಿನಗಳೊಳಗಾಗಿ ನೀಡದಿದ್ದರೆ ಎಲ್ಲ ಫಲಾನುಭವಿಗಳು ತಾಲೂಕು ಪಂಚಾಯ್ತಿ ಎದುರಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಕಂಠೀಬಸಪ್ಪ ಹಾರೋಗೇರಿ, ಚಿನ್ನಪ್ಪ ದಾಸರ, ಹೊಳಿಯಪ್ಪ ಬಾರಕೇರ, ಸಿದ್ದಪ್ಪ ಸಿಂಧೋಗಿ, ಶಿವಾನಂದಪ್ಪ ಸೂಡಿ, ಸುಜಾತಾ ಸೂಡಿ, ಹುಲಿಗೆವ್ವ, ರೇಣುಕಾ ಸೂಡಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

