ಗದಗ

ಸುಯತೀಂದ್ರ ಶ್ರೀ ಬೃಂದಾವನಸ್ಥ: ಶೋಕ

Published On :

ಮುಂಡರಗಿ: ಮಂತ್ರಾಲಯ ಮಠದ ಸುಯತೀಂದ್ರ ಶ್ರೀಪಾದಂಗಳವರು ಬೃಂದಾವನಸ್ಥರಾಗಿರುವ ಹಿನ್ನೆಲೆಯಲ್ಲಿ ಮುಂಡರಗಿಯ ಅನೇಕ ಗಣ್ಯರು ಮತ್ತು ಭಕ್ತರು ಕಂಬನಿ ಮಿಡಿದಿದ್ದಾರೆ. ಶ್ರೀಗಳ ನಿಧನಕ್ಕೆ ನಾಡೋಜ ಅನ್ನದಾನೀಶ್ವರ ಶ್ರೀಗಳು ಸಂತಾಪ ಸೂಚಿಸಿ, ಶ್ರೀಗಳ ಕಾರ್ಯಕ್ಷಮತೆ ಕೊಂಡಾಡಿದ್ದಾರೆ.
ಮೂಲತಃ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದವರಾದ ಸುಯತೀಂದ್ರ ಶ್ರೀಪಾದಂಗಳವರು ಮಂತ್ರಾಲಯದ ಪೀಠಾಧಿಪತಿಗಳಾಗಿ ಕೇವಲ 6-7 ವರ್ಷಗಳಲ್ಲಿ ಮಂತ್ರಾಲಯವನ್ನು ಗಣನೀಯವಾಗಿ ಅಭಿವೃದ್ಧಿ ಮಾಡಿದ್ದರು. ಮುಂಡರಗಿಯಲ್ಲಿ ರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾಪನೆ ಮಾಡಿ, ಭವ್ಯ ಮಠ ಕಟ್ಟಿಸಿ, ಭಕ್ತರಿಗೆ ರಾಘವೇಂದ್ರ ಸ್ವಾಮಿಗಳ ದರ್ಶನ ಭಾಗ್ಯ ಸಿಗುವಂತೆ ಮಾಡಿದ್ದಾರೆ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಶ್ರೀಗಳು 1953 ರಿಂದ 1957ರ ವರೆಗೆ ಮುಂಡರಗಿಯ ಜ. ಅನ್ನದಾನೀಶ್ವರ ಪ್ರೌಢಶಾಲೆಯಲ್ಲಿ ಅವರು ಮತ್ತು ನಾನು ಜತೆಗೆ ವಿದ್ಯಾಭ್ಯಾಸ ಮಾಡಿದ್ದೇವೆ. ಶ್ರೀಗಳು ಬಾಲ್ಯದಿಂದಲೂ ವಿಶೇಷ ಪ್ರತಿಭೆಯನ್ನು ಹೊಂದಿದ್ದರು. ಶ್ರೀಪಾದಂಗಳವರು ಮಂತ್ರಾಲಯವನ್ನು ಅಭಿವೃದ್ಧಿಗೊಳಿಸಿದ್ದಲ್ಲದೆ, ಬರುವ ಭಕ್ತರಿಗೆ ಎಲ್ಲ ಸೌಲಭ್ಯಗಳು ಸಿಗುವಂತೆ ಕಾಳಜಿ ವಹಿಸಿದ್ದಾರೆ. ತವರು ಗ್ರಾಮದ ಉದ್ಧಾರಕ್ಕಾಗಿ, ಶಿಕ್ಷಣಕ್ಕಾಗಿ ಶ್ರಮಿಸಿದ್ದಾರೆ. ಶ್ರೀಗಳ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಪಾಟೀಲ, ನಾರಾಯಣಪ್ಪ ಇಲ್ಲೂರ, ವಿ.ಎಲ್.ನಾಡಗೌಡ್ರ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಎಸ್.ಎಸ್. ಪದಕಿ, ಈಶ್ವರಪ್ಪ ಹಂಚಿನಾಳ, ಸತೀಶ ಹುಯಿಲಗೋಳ, ಎ.ಕೆ. ಬೆಲ್ಲದ, ಹೇಮಂತಗೌಡ ಪಾಟೀಲ, ಕೊಟ್ರೇಶ ಅಂಗಡಿ, ದಿಲೀಪಕುಮಾರ ಜೋಶಿ, ಧ್ರುವಕುಮಾರ ಹೊಸಮನಿ, ಸೊಲಬಣ್ಣ ಜೋಬಾಳಿ, ಆನಂದಗೌಡ ಪಾಟೀಲ, ಡಿ.ಡಿ. ಮೋರನಾಳ, ಪುರಸಭೆ ಅಧ್ಯಕ್ಷೆ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ, ಪಾಲಾಕ್ಷಿ ಗಣದಿನ್ನಿ, ಬಸವರಾಜ ರಾಮೇನಹಳ್ಳಿ, ಶಂಕರಗೌಡ ಪಾಟೀಲ, ಮಂಜುನಾಥ ಇಟಗಿ, ಆನಂದ ರಾಮೇನಹಳ್ಳಿ, ದೇವಪ್ಪ ಇಟಗಿ, ದೇವು ಹಡಪದ, ನಾಗರಾಜ ಗುಡಿಮನಿ, ಲಿಂಗರಾಜಗೌಡ ಪಾಟೀಲ, ಪೇಠಾಲೂರು ಗ್ರಾಮದ ಬಸಪ್ಪ ಕಬ್ಬೇರಹಳ್ಳಿ, ಹಾಲಪ್ಪ ಹರ್ತಿ, ಮುಂಡರಗಿ ಶ್ರೀ ರಾಘವೇಂದ್ರ ಮಠದ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಟಂಟಂ ಡಿಕ್ಕಿ: ಬೈಕ್ ಸವಾರ ಸಾವು
ಲಕ್ಷ್ಮೇಶ್ವರ:  ಸಮೀಪದ ರಾಮಗೇರಿಯ ಹತ್ತಿರ ಬೈಕ್ ಮತ್ತು ಟಾಟಾ ಏಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ. ಮೃತನನ್ನು ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಈರಪ್ಪ ಕಬನೂರ (50) ಎಂದು ಗುರುತಿಸಲಾಗಿದ್ದು, ಪಟ್ಟಣದಿಂದ ಶಿರೂರಿಗೆ ತನ್ನ ತಾಯಿಯೊಂದಿಗೆ ತೆರಳುತ್ತಿರುವಾಗ ಈ ಘಟನೆ ಸಂಭವಿಸಿದೆ.  ಮಹಿಳೆಗೆ ತೀವ್ರವಾದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ಕಳುಹಿಸಿಕೊಡಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ವಿಕಾಸ ಪಿ.ಎಲ್. ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.